ಕೋಯಿಕ್ಕೋಡ್:ಕೇರಳ ಸಾಂಪ್ರದಾಯಿಕ ಮತ್ತು ಅದ್ಧೂರಿಯ ಮದುವೆಗೆ ಸಾಕ್ಷಿಯಾಗಿದೆ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅದ್ಧೂರಿ ಮದುವೆಗಳಿಗೆ ಬ್ರೇಕ್‌ ಹಾಕಲಾಗಿದೆ. ಸರ್ಕಾರ ವಿಧಿಸಿರುವ ಷರತ್ತಿಗಿಂತ ಹೆಚ್ಚಿನ ಜನರು ಮದುವೆಗೆ ಬಂದರೆ ಅವರ ಮೇಲೆ ಕೇಸ್‌ ದಾಖಲಾಗುತ್ತಿದೆ.
ಇದನ್ನೇ ವಿರೋಧಿಸಿ ಇದೀಗ ಜೋಡಿಯೊಂದು ಕೋಯಿಕ್ಕೋಡ್‌ನ ಮದ್ಯದ ಅಂಗಡಿ ಮುಂದೆ ಮದುವೆಯಾಗಿದೆ. ಅಷ್ಟಕ್ಕೂ ಈ ಮದುವೆಯಾಗಲು ಕಾರಣ ಅವರೇನೂ ಎಣ್ಣೆಪ್ರಿಯರಲ್ಲ, ಬದಲಿಗೆ ಸರ್ಕಾರದ ದ್ವಂದ್ವ ನೀತಿ ಎನ್ನುವುದು ಅವರ ಆರೋಪ.
ಮದುವೆ ಕಾರ್ಯಗಳನ್ನು ನಂಬಿ ಹಲವರು ಜೀವನ ನಡೆಸುತ್ತಿದ್ದಾರೆ. ಆದರೆ ಕರೊನಾದ ಹೆಸರು ಹೇಳಿ ಮದುವೆಗೆ ಷರತ್ತು ವಿಧಿಸಲಾಗಿದೆ. ಆದರೆ ಅದೇ ಇನ್ನೊಂದೆಡೆ ಎಣ್ಣೆ ಅಂಗಡಿಗಳ ಮುಂದೆ ಯಾವುದೇ ರೂಲ್ಸ್‌ ಇಲ್ಲದೇ, ಜನರು ನುಗ್ಗುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕರೊನಾ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಅವರ ವಿರುದ್ಧ ಕೇಸ್‌ ದಾಖಲಾಗುತ್ತಿಲ್ಲ. ಆದರೆ ಮದುವೆ ಮನೆಯಲ್ಲಿ ಎಲ್ಲಾ ನಿಯಮಗಳನ್ನು ಅಳವಡಿಸಿಕೊಂಡರೂ ಕೇಸ್‌ ದಾಖಲು ಮಾಡಲಾಗುತ್ತಿದೆ. ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಕ್ವಾಟರರ್ಸ್​ ಅಸೋಸಿಯೇಷನ್ ಸದಸ್ಯರು ಈ ಮದುವೆ ಮಾಡಿಸಿದ್ದಾರೆ. ರಾಮನಟ್ಟುಕರದ್‌ ಪ್ರಮೋದ್ ಮತ್ತು ಪಂತೀರನ್​ಕವಿನ ಧನ್ಯಾ ಮದುವೆಯಾಗಿರುವ ಜೋಡಿ. ಇದಕ್ಕೆ ಸಂಸದ ಎಂ.ಕೆ. ರಾಘವನ್ ಕೂಡ ಬೆಂಬಲಿಸಿದ್ದಾರೆ. ಸರ್ಕಾರದ ಕಠಿಣ ನಿಯಮಗಳಿಂದಾಗಿ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯದೆ ಅನೇಕ ಮಂದಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಎಂದು ರಾಘವನ್‌ ಹೇಳಿದ್ದಾರೆ.
ಕೊಳೆಗೇರಿವಾಸಿಗಳಿಗೆ ಕಟ್ಟಿಸಿರೋ ಈ ಪಬ್ಲಿಕ್‌ ಟಾಯ್ಲೆಟ್‌ ಒಳಗೆ ಹೋದ್ರೆ ಬರಲು ಮನಸ್ಸೇ ಬರಲ್ವಂತೆ!

ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೇ ಮೀನು ವ್ಯಾಪಾರಕ್ಕಿಳಿದ ಪ್ರಸಿದ್ಧ ನಟ: ಅಪ್ಪನ ಹಾದಿ ತುಳಿದು ಕಣ್ಣೀರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
