ಚಂಡೀಗಢ:ಅತ್ಯಂತ ಭಯಾನಕ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ಮೂರು ತಿಂಗಳ ಮಗುವನ್ನು ಜೀವಂತಾಗಿ ಹೂತುಹಾಕಿದ ಘಟನೆ ಚಂಡೀಗಢದಲ್ಲಿ ನಡೆದಿದೆ.
ಮಗುವಿನ ತಾಯಿಯ ಮೇಲೆ ಇರುವ ಕೌಟುಂಬಿಕ ಕಲಹದಿಂದಾಗಿ ಆಕೆಗೆ ಬುದ್ಧಿಕಲಿಸಲು ಇಂಥದ್ದೊಂದು ಭೀಕರ ಕೃತ್ಯ ಎಸಗಿದ್ದಾಳೆ ಸುಖ್​ದೀಪ್​ ಎಂಬ ಮಹಿಳೆ. ಅಮೀರ್ ಖಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಕಳೆದುಕೊಂಡಿರುವ ನತದೃಷ್ಟ ತಾಯಿಯ ಹೆಸರು ಅಮನ್​ದೀಪ್ ಕೌರ್.
ಅಮನ್​ದೀಪ್​ ಅವರಿಗೆ ಬ್ಯಾಂಕ್​ನಲ್ಲಿ ಕೆಲಸವಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಆರು ತಿಂಗಳ ಶಿಶುವನ್ನು ಪಕ್ಕದ ಮನೆಯಲ್ಲಿ ಬಿಟ್ಟುಹೋಗಿದ್ದರು. ಆದರೆ ಅವರು ವಾಪಸ್​ ಬಂದಾಗ ಮಗು ನಾಪತ್ತೆಯಾಗಿತ್ತು. ಪಕ್ಕದ ಮನೆಯವರನ್ನು ಕೇಳಿದಾಗ ಇಲ್ಲೇ ಆಡುತ್ತಿದ್ದ ಮಗು ಕಾಣೆಯಾಗಿದೆ ಎಂದು ಹೇಳಿದರು.
ಅಮನ್​ದೀಪ್​ ಅವರು ಎಲ್ಲೆಡೆ ಮಗುವನ್ನು ಹುಡುಕಿದರೂ ಅದು ಸಿಗಲಿಲ್ಲ. ನಂತರ ಮಗುವನ್ನು ಹುಡುಕಾಡುತ್ತಿರುವಾಗ ಸಮೀಪದ ಮಹಿಳೆಯೊಬ್ಬರು ಶೌಚಗೃಹದ ಸೆಪ್ಟಿಕ್​ ಟ್ಯಾಂಕ್​ ಬಳಿ ಶಿಶುವೊಂದರ ಕಾಲುಗಳಂತೆ ಕಂಡಿರುವ ವಸ್ತುವನ್ನು ತಾವು ನೋಡಿದ್ದು, ಸಮೀಪ ಹೋಗಲು ಭಯವಾಗಿ ಹೋಗಲಿಲ್ಲ ಎಂದು ಹೇಳಿದರು.
ನಂತರ ಅಮನ್​ದೀಪ್​ ಅವರು ಅಲ್ಲಿಗೆ ಹೋಗಿ ಆ ಜಾಗವನ್ನು ಅಗೆದು ನೋಡಿದಾಗ ಅಲ್ಲಿ ಅವರ ಮಗು ಜೀವಂತ ಸಮಾಧಿಯಾಗಿತ್ತು. ನಂತರ ಕೂಡಲೇ ಪೊಲೀಸರಿಗೆ ದೂರು ನೀಡಿದ ಅವರು, ಸುಖ್​ದೀಪ್​ ಈ ಕೆಲಸ ಮಾಡಿರುವುದಾಗಿ ಸಂದೇಹದಿಂದ ಆಕೆಯ ಮೇಲೆ ದೂರು ದಾಖಲಿಸಿದರು.
ನಂತರ ಸುಖ್​ದೀಪ್​ಳನ್ನು ಪೊಲೀಸರು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟ ಆಕೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಮನ್​ದೀಪ್​ಗೆ ಬುದ್ಧಿ ಕಲಿಸಲು ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ,. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಚ್​ಎಂಟಿಗೆ ಬೇಕಾಗಿದ್ದಾರೆ ಪ್ರತಿಭಾನ್ವಿತರು: ವಿವಿಧ ಹುದ್ದೆಗಳಿಗೆ ಆಹ್ವಾನ- ಬೆಂಗಳೂರಿನಲ್ಲಿ ಕೆಲಸ

ರಾಜ್ಯದಲ್ಲಿ ನಾಳೆಯಿಂದ ಲಾಕ್​ಡೌನ್​ ಆಗೋದು ನಿಜನಾ? ಸಚಿವ ಸುಧಾಕರ್​ ಏನು ಹೇಳಿದ್ರು ಕೇಳಿ…

ರಸ್ತೆಯಲ್ಲಿ ನಿಂತು ಹಾಯ್​ ಚೆನ್ನಾಗಿದ್ಯಾ ಎನ್ನುವಷ್ಟರಲ್ಲಿಯೇ ಫೋನ್​ ಗಾಯಬ್​! ಖತರ್ನಾಕ್​ ಖದೀಮರು ಅಂದರ್​

ಪತ್ನಿಯ ವಾಟ್ಸ್​ಆ್ಯಪ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ದಂಗಾಗಿದ್ದೇನೆ- ವಿಚ್ಛೇದನಕ್ಕೆ ಇದು ಆಧಾರವಾಗಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nine =
Remember me
