ಭೋಪಾಲ್:ಅತ್ತೆ- ಸೊಸೆಯಂದಿರ ಜಗಳ ಹೊಸ ವಿಷಯವೇನಲ್ಲ. ಅತ್ತೆಯ ಮೇಲೆ ಸೊಸೆ ಆರೋಪ ಹೊರಿಸುವುದು, ಸೊಸೆಯ ವಿರುದ್ಧ ಅತ್ತೆ ತಿರುಗಿ ಬೀಳುವುದು ಎಲ್ಲವೂ ಮಾಮೂಲೆ. ಆದರೆ ಇಲ್ಲಿ ನಡೆದಿರುವ ಘಟನೆ ಮಾತ್ರ ವಿಚಿತ್ರವಾದಂಥದ್ದು. ಅದೇನೆಂದರೆ ಅತ್ತೆ ಸುಳ್ಳು ಹೇಳುತ್ತಿದ್ದಾಳೆಂದು ಸಾಬಿತುಪಡಿಸಲು ಸೊಸೆ ಕೆಂಡದ ಮೇಲೆ ನಡೆದಿದ್ದಾಳೆ.
ಇದು ನಡೆದಿರುವುದು ಮಧ್ಯಪ್ರದೇಶದ ಛಿಂದ್ವಾಡದ ಮಾವೂ ವ್ಯಾಪ್ತಿಯ ರಾಮಾಕೋನಾ ಗ್ರಾಮದಲ್ಲಿ. ಬೆಂಕಿ ಮೇಲೆ ಮಹಿಳೆ ಸೊಸೆ ನಡೆದಿರುವ ವಿಡಿಯೋ ಇದೀಗ ವೈರಲ್​ ಆಗಿದೆ.ಆಗಿದ್ದೇನೆಂದರೆ ಇದೇ 17ನೇ ತಾರೀಖು ಸೊಸೆ ಅತ್ತೆ ಜತೆ ಬಾಬಾ ದರಬಾರ್​ಗೆ ಬಂದಿದ್ದಳು. ಈ ವೇಳೆ ಬಾಬಾ ಸೊಸೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ. ಅದೇನೆಂದರೆ ನಿಮ್ಮಸೊಸೆ ಪತಿಗೆ ಆಹಾರದಲ್ಲಿ ಏನೋ ಸೇರಿಸಿ ಆತನನ್ನ ವಶ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಇದರಿಂದ ಅತ್ತೆ ಕೆಂಡಾಮಂಡಲ ಆಗಿದ್ದಾರೆ.
ತಾನು ಹಾಗೇನೂ ಮಾಡಲಿಲ್ಲ ಎಂದು ಸೊಸೆ ಹೇಳಿದರೂ ಅತ್ತೆ ಕೇಳಲಿಲ್ಲ. ನಂತರ ಬಾಬಾ, ನಾನು ಸತ್ಯ ಹೇಳುತ್ತಿದ್ದೇನೆ. ಒಂದು ವೇಳೆ ಸೊಸೆ ಹಾಗೆ ಮಾಡದಿದ್ದರೆ ಆಕೆ ಕೆಂಡದ ಮೇಲೆ ನಡೆಯಲಿ, ಒಂದು ವೇಳೆ ಅವಳಿಗೆ ಏನೂ ಆಗದಿದ್ದರೆ ಅವಳು ಸತ್ಯ ಹೇಳುತ್ತಿದ್ದಾಳೆ ಎಂದು ಸಾಬೀತು ಆಗುತ್ತದೆ, ಒಂದು ವೇಳೆ ಅವಳು ಸುಳ್ಳು ಹೇಳಿದರೆ ಸುಟ್ಟು ಕರಕಲಾಗುತ್ತಾಳೆ ಎಂದಿದ್ದಾನೆ.ಅತ್ತೆ ಹಾಗೆ ಮಾಡುವಂತೆ ಸೊಸೆಗೆ ಹೇಳಿದ್ದಾಳೆ. ಇದರಿಂದ ಬೇಸರ ವ್ಯಕ್ತಪಡಿಸಿದ ಸೊಸೆ ಆಗಿದ್ದಾಗಲಿ ಎಂದು ಕೆಂಡದ ಮೇಲೆ ನಡೆದು ಹೊರ ಬಂದಿದ್ದಾಳೆ. ತಮ್ಮ ಅತ್ತೆ ಮೊದಲೇ ಈ ಬಾಬಾನ ಕಿವಿ ಊದಿದ್ದಳು ಎನ್ನುವುದು ಸೊಸೆ ಆರೋಪ. ಅದೇನೆ ಇದ್ದರೂ ಸೊಸೆಯ ಪ್ರಾಣಕ್ಕೆ ಅಪಾಯ ಆಗಲಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಪತಿ, ನಮ್ಮ ಮನೆಯವರು ಮೌಢ್ಯಕ್ಕೆ ಒಳಗಾಗಿದ್ದು ಸರಿಯಲ್ಲ. ಆದರೆ ನನ್ನ ಪತ್ನಿ ಬಗ್ಗೆ ಅತ್ತೆಗೆ ಇದ್ದ ಸಂಶಯ ನಿವಾರಣೆಯಾಗಿದೆ ಎಂದಿದ್ದಾನೆ.
ಅಂಕಲ್‌ಗಳೇ ಈಕೆಯ ಟಾರ್ಗೆಟ್‌: ಪಾರ್ಕ್‌ಗೆ ಕರೆದು ಮಾಡಬಾರದ್ದು ಮಾಡಿ ವಿಡಿಯೋ- ಚಾಲಾಕಿ ಆಂಟಿ ಅರೆಸ್ಟ್‌

‘ಕೆಬಿಸಿಯಲ್ಲಿ ಐದು ಕೋಟಿ ಗೆದ್ದ ಮೇಲೆ ಬದುಕು ನರಕವಾಯ್ತು, ದಾಂಪತ್ಯ ಮುರಿದುಹೋಯ್ತು, ಯಾರಿಗೆ ಬೇಕು ದುಡ್ಡು?’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + ten =
Remember me
