ನ್ಯೂಯಾರ್ಕ್‌:ತಾವು ಸಾಕಿರುವ ಬೆಕ್ಕು, ನಾಯಿ ಎಂದರೆ ಎಲ್ಲರಿಗೂ ಪ್ರೀತಿಯೇ ಸರಿ. ಕೆಲವರಂತೂ ತಮ್ಮ ಹೆತ್ತ ಮಕ್ಕಳಂತೆಯೇ ಅವುಗಳನ್ನು ಬೆಳೆಸುತ್ತಾರೆ, ಮುದ್ದಿಸುತ್ತಾರೆ. ಹಾಗೆಂದು ಎಲ್ಲರ ಎದುರೇ ಬಟ್ಟೆ ಬಿಚ್ಚಿ ಎದೆಹಾಲು ಕುಡಿಸಿದರೆ?
ಇಂಥದ್ದೊಂದು ಘಟನೆ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ನಡೆದಿದೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಿಂದ ಅಟ್ಲಾಂಟಾದತ್ತ ತೆರಳಿದ್ದ ವಿಮಾನದಲ್ಲಿ ಒಬ್ಬ ಮಹಿಳೆ ಬಟ್ಟೆಯಲ್ಲಿ ಸುತ್ತಿದ್ದ ಒಂದು ಬೆಕ್ಕನ್ನು ತಂದಿದ್ದಳು. ನೋಡುಗರು ಮೊದಲು ಅದನ್ನು ಆಕೆಯ ಮಗು ಎಂದೇ ಎಂದುಕೊಂಡಿದ್ದರು. ಆದರೆ ಯಾವಾಗ ಆಕೆ ಆ ಬೆಕ್ಕಿಗೆ ಸುತ್ತಿದ್ದ ಬಟ್ಟೆಯನ್ನು ಬಿಚ್ಚಿದಳೋ ಆಗ ಬೆಕ್ಕು ಚೀರಾಡಲು ಶುರು ಮಾಡಿತು. ಆಗಲೇ ಎಲ್ಲರಿಗೂ ಅದು ಬೆಕ್ಕು ಎಂದು ತಿಳಿದದ್ದು.
ಇಷ್ಟೇ ಆದರೆ ಪರವಾಗಿರಲಿಲ್ಲ. ಬೆಕ್ಕು ಕಿರುಚಾಡಲು ಶುರುಮಾಡುತ್ತಿದ್ದಂತೆಯೇ ಮಕ್ಕಳು ಅತ್ತರೆ ಎದೆಹಾಲು ಕುಡಿಸುವಂತೆ ಈ ಮಹಿಳೆ ತನ್ನ ಷರ್ಟ್‌ನ ಬಟನ್‌ಗಳನ್ನೆಲ್ಲಾ ಬಿಚ್ಚಿ ಅದಕ್ಕೆ ಎದೆಹಾಲು ಕುಡಿಸಲು ಶುರು ಮಾಡಿದ್ದಾಳೆ. ಆ ಬೆಕ್ಕು ಕಿರುಚಾಡುತ್ತಾ ಓಡಿಹೋಗಲು ಪ್ರಯತ್ನಿಸುತ್ತಿತ್ತು. ಇದು ಅಲ್ಲಿದ್ದವರಿಗೆ ಅಸಹ್ಯ ಉಂಟು ಮಾಡಿತು.
ಕೂಡಲೇ ಅಲ್ಲಿದ್ದವರು ಇದನ್ನು ನಿಲ್ಲಿಸಿ ಎಂದರೂ ಮಹಿಳೆ ಕೇಳಲಿಲ್ಲ. ನಂತರ ವಿಮಾನ ಸಿಬ್ಬಂದಿಗೆ ಕರೆದು ಮಹಿಳೆಗೆ ಬುದ್ಧಿಹೇಳಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಬೆಕ್ಕನ್ನು ಸ್ವಲ್ಪ ಹೊತ್ತು ಎದೆಯ ಬಳಿ ಇಟ್ಟುಕೊಂಡು ನಂತರ ತನ್ನ ಬಟ್ಟೆ ಮುಚ್ಚಿಕೊಂಡಳು. ಇಡೀ ಘಟನೆಯ ವಿಡಿಯೋ ಮಾಡಲಾಗಿದ್ದು, ಅದೀಗ ವೈರಲ್‌ ಆಗುತ್ತಿದೆ.
ಕೆಲವೊಂದು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಕೆಲವೊಂದು ಷರತ್ತನ್ನು ವಿಧಿಸಿ ಪ್ರಾಣಿಗಳಿಗೂ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಈ ಮಹಿಳೆ ಆ ಅನುಮತಿ ಪಡೆದುಕೊಂಡಿದ್ದಾಳೋ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಅದೇನೇ ಇದ್ದರೂ ಸದ್ಯ ಈಕೆಯ ವಿಚಿತ್ರ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ನನಗೆ ಮರುಮದುವೆಯಾಗಿದೆ, ಮೊದಲ ಪತ್ನಿ ಜೀವನಾಂಶಕ್ಕೆ ಅರ್ಜಿ ಹಾಕಿದ್ರೆ ಅವಳಿಗೂ ಕೊಡಲೇಬೇಕಾ?

ಭಾವಿ ಅಳಿಯನಿಗೆ ಷರತ್ತು ವಿಧಿಸಿ ಮಗಳನ್ನು ಕಳೆದುಕೊಂಡ ಅಪ್ಪ- ಮನನೊಂದು ಆತ್ಮಹತ್ಯೆ ಮಾಡಿಕೊಂಡ ಜೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twelve =
Remember me
