ಇಂದೋರ್ (ಮಧ್ಯಪ್ರದೇಶ):ಹೆಣ್ಣಾಗಿ ಹುಟ್ಟುವುದೇ ಶಾಪ ಎಂದುಕೊಳ್ಳುತ್ತಿರುವವರು ಅದೆಷ್ಟೋ ಮಂದಿ. ಸಮಾಜ, ಸಂಸಾರ, ಸುತ್ತಲಿನ ಪ್ರದೇಶ ಎಲ್ಲೆಡೆಯಿಂದಲೂ ಹಿಂಸೆ ಅನುಭವಿಸಿ, ಹೆಣ್ತನ ಎಂಬುದೇ ತನ್ನ ಬದುಕಿಗೆ ಬಹುದೊಡ್ಡ ಶಾಪವಾಗಿದೆ ಎಂದುಕೊಳ್ಳುತ್ತಿರುವವರ ಪೈಕಿ ಮಧ್ಯಪ್ರದೇಶದ ಇಂದೋರ್​ನ ಮಹಿಳೆಯೂ ಒಬ್ಬರು.
ಜೀವನದುದ್ದಕ್ಕೂ ನರಕಯಾತನೆ ಕಂಡು ಹೆಣ್ಣಾಗಿರುವುದೇ ಬೇಡ ಎಂದುಕೊಂಡ ಸೋನಿ ಅಲ್ಕಾ ಎಂಬ ಮಹಿಳೆ ಈಗ ಲಿಂಗಪರಿವರ್ತನೆ ಮಾಡಿಕೊಂಡು ಗಂಡಾಗಿ ಬದಲಾಗಿದ್ದಾರೆ. ಈ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ.
47 ವರ್ಷದ ಅಲ್ಕಾ ಸೋನಿ ಈಗ ಅಸ್ತಿತ್ವ್​​ ಸೋನಿಯಾಗಿದ್ದಾರೆ. ಹುಟ್ಟುವುದು ನಮ್ಮ ಕೈಯಲ್ಲಿಲ್ಲ. ಹೆಣ್ಣಾಗಿ ಹುಟ್ಟಿದೆ. ಆದರೆ 20ನೇ ವಯಸ್ಸಿನವರೆಗೂ ಹೆಣ್ಣಾಗಿ ತುಂಬಾ ಹಿಂಸೆ ಅನುಭವಿಸಿದೆ. ಗಂಡಾಗಿ ಹುಟ್ಟಬೇಕಿತ್ತು ಎಂಬ ಅದಮ್ಯ ಬಯಕೆ ಉಂಟಾಗತೊಡಗಿತು. ಹೆಣ್ಣಾಗಿದ್ದುಕೊಂಡು ಗಂಡು ಅನುಭವಿಸುವ ಸುಖಗಳನ್ನು ಅನುಭವಿಸಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆದರೂ ಗಂಡಿನಂತೆ ಬಟ್ಟೆ ಹಾಕಿಕೊಳ್ಳುತ್ತಿದ್ದೆ. ನನ್ನ ಮನಸ್ಸಿನ ಮೇಲೆ ಗಂಡಸ್ತನ ಎನ್ನುವುದು ಎಷ್ಟು ಪರಿಣಾಮ ಬೀರಿತ್ತು ಎಂದರೆ ನಾನು ಗಂಡಿನಂತೆಯೇ ವರ್ತಿಸಲು ಶುರು ಮಾಡಿದೆ ಎಂದಿದ್ದಾರೆ ಅಲ್ಕಾ.
ಇದೇ ಕಾರಣಕ್ಕೆ ಹೆಣ್ಣಾಗಿ ಇರುವುದು ಇನ್ನು ಉಚಿತವಲ್ಲ ಎಂದುಕೊಂಡು ಈ ಬಗ್ಗೆ ನನ್ನ ಪಾಲಕರ ಮನವೊಲಿಸಿ ಶಸ್ತ್ರಚಿಕಿತ್ಸೆಗೆ ಮುಂದಾದೆ ಎಂದಿರುವ ಅಲ್ಕಾ, ಮುಂಬೈನ ಆಸ್ಪತ್ರೆಯೊಂದರಲ್ಲಿ ಅತ್ಯಂತ ಸಂಕೀರ್ಣವಾದ ಲಿಂಗಪರಿವರ್ತನಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಗಂಡಾಗಿ ಬದಲಾಗಿದ್ದಾರೆ.
‘ತಾನು ಜಗತ್ತಿಗೆ ಹೇಗೆ ಬಂದಿದ್ದೇನೆ ಎಂಬುದು ತನ್ನ ನಿಯಂತ್ರಣದಲ್ಲಿಲ್ಲ. ಆದರೆ ಹೇಗೆ ಜಗತ್ತಿನಿಂದ ಹೊರನಡೆಯಬೇಕು ಎಂಬುದನ್ನು ನಾನೇ ನಿರ್ಧರಿಸಬೇಕು’ ಎಂದು ಅರಿತುಕೊಂಡು ಲಿಂಗ ಬದಲಾವಣೆ ಮಾಡಿಕೊಂಡೆ ಎಂದಿದ್ದಾರೆ.
ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅಲ್ಕಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ, ಶಸ್ತ್ರಚಿಕಿತ್ಸೆಗೆ ಮನೋವೈದ್ಯರ ಅನುಮತಿ ಸೇರಿದಂತೆ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸಿದ್ದರು.ನಂತರ ಅವರ ಫೈಲ್​ ಅನ್ನು ಇಂದೋರ್ ಜಿಲ್ಲಾಡಳಿತಕ್ಕೆ ಕಳುಹಿಸಲಾಯಿತು. ಜಿಲ್ಲಾಡಳಿತ ಆನ್‌ಲೈನ್ ಮೂಲಕ ಅನುಮತಿ ನೀಡಿದ ನಂತರ, 14ರ ತಮ್ಮ ಜನ್ಮದಿನದಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ನಂತರ ಗಂಡಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಮುಸ್ಲಿಂ ಯುವತಿಯನ್ನು ಮದ್ವೆಯಾದದ್ದೇ ತಪ್ಪಾಯ್ತಾ? ತಂಗಿಯ ಬಾಳಿಗೆ ಕೊಳ್ಳಿ ಇಡಲು ಜೈಲಿನಿಂದಲೇ ಅಣ್ಣನ ಸ್ಕೆಚ್​…

ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ‘ದಿ ಕಾಶ್ಮೀರ್ ಫೈಲ್ಸ್​’: ಏಳೇ ದಿನಗಳಲ್ಲಿ 100 ಕೋಟಿ ರೂ.ನತ್ತ ದಾಪುಗಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
