ಹೈದರಾಬಾದ್:ಟೇಲರ್‌ ಆಗಿರುವ ಗಂಡ, ತಾನು ಹೇಳಿದಂತೆ ಸೀರೆಯ ಬ್ಲೌಸ್‌ ಹೊಲಿಯಲಿಲ್ಲ ಎಂದು ಬೇಸರಗೊಂಡಿರುವ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.ಹೈದರಾಬಾದ್‌ನ ಅಂಬರಪೇಟ್‌ ನಿವಾಸಿ ವಿಜಯಲಕ್ಷ್ಮಿ (36) ಎಂಬುವವರು ಇಂಥ ಕೃತ್ಯ ಎಸಗಿದ್ದಾರೆ. ಇವರ ಗಂಡ ಶ್ರೀನಿವಾಸ್‌ ಟೈಲರ್‌ ಆಗಿದ್ದಾರೆ. ಇಷ್ಟಪಟ್ಟು ಒಂದು ಸೀರೆಯನ್ನು ಖರೀದಿ ಮಾಡಿದ್ದ ವಿಜಯಲಕ್ಷ್ಮಿ ಅವರು ಅದಕ್ಕೆ ಬ್ಲೌಸ್‌ ಹೊಲಿದುಕೊಡುವಂತೆ ಗಂಡನಿಗೆ ಹೇಳಿದ್ದಾರೆ. ತಮಗೆ ಯಾವ ರೀತಿಯ ಬ್ಲೌಸ್‌ ಬೇಕು ಎಂಬ ಬಗ್ಗೆ ಗಂಡನಿಗೆ ತಿಳಿಸಿದ್ದಾರೆ.ಆದರೆ ಅವರು, ಅದನ್ನು ಹೊಲಿದು ಕೊಟ್ಟಿದ್ದಾರೆ. ಆದರೆ ಅದು ತಾನು ಹೇಳಿದಂತೆ ಆಗಲಿಲ್ಲ ಎಂದು ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ವಿಷಯವಾಗಿಯೇ ದಂಪತಿ ನಡುವೆ ಜಗಳವಾಗಿದೆ. ಇದರಿಂದ ಬೇಸರಗೊಂಡ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.ಪತ್ನಿ ಸಿಟ್ಟಿನಿಂದ ಒಳಗೆ ಇದ್ದಿರಬಹುದು ಎಂದು ಶ್ರೀನಿವಾಸ್ ಅಂದುಕೊಂಡಿದ್ದಾರೆ. ಮಧ್ಯಾಹ್ನ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ನಂತರ ಸಂದೇಹಗೊಂಡ ಶ್ರೀನಿವಾಸ್ ಬಾಗಿಲು ಒಡೆದು ಒಳ ಹೋಗಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. ಅವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.
ಭಾಷಣದ ವೇಳೆ ಲೇಡಿ ಪಿಎಸ್‌ಐ ಗುಸುಗುಸು, ತಿರುಗಾಟ- ಸಿಎಂ ಗರಂ, ನಿಮ್ಮ ಅಗತ್ಯವಿಲ್ಲ, ಹೋಗಿ ಎಂದು ತರಾಟೆ
VIDEO: ಅಪ್ಪು ಕನಸಿನ ‘ಗಂಧದ ಗುಡಿ’ ಟೀಸರ್‌ ಬಿಡುಗಡೆ: ನೆಚ್ಚಿನ ನಟನ ನೋಡಿ ಕಣ್ಣೀರಾಗುತ್ತಿರುವ ಅಭಿಮಾನಿಗಳು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + 12 =
Remember me
