ನ್ಯೂಯಾರ್ಕ್‌:ಗರ್ಭಿಣಿಯಾಗುವುದು, ನಂತರ ತಾಯಿಯಾಗುವುದು ಮಹಿಳೆಯರ ಜೀವನದ ಅತ್ಯಂತ ಮಹತ್ವದ ಹಾಗೂ ಸಂತಸದ ಘಟ್ಟ ಎನ್ನಲಾಗುತ್ತದೆ. ಆದ್ದರಿಂದ ಗರ್ಭಿಣಿ ಎಂದು ತಿಳಿದಾಗ ಹುಟ್ಟುವ ಮಗುವಿನ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಅಷ್ಟಿಷ್ಟಲ್ಲ. ಆ ಔಷಧ, ಈ ಔಷಧ, ಆಸ್ಪತ್ರೆ, ಲಸಿಕೆ… ಹೀಗೆ ಗರ್ಭಿಣಿಯರು ಪದೇ ಪದೇ ತಮ್ಮ ಹಾಗೂ ಮಗುವಿನ ಬಗ್ಗೆ ಕಾಳಜಿ ತೋರುತ್ತಲೇ ಇರುತ್ತಾರೆ. ಮಾತ್ರವಲ್ಲದೇ ಹೊಟ್ಟೆಯಲ್ಲಿ ಇರುವ ಮಗುವಿನ ಚಲನ ವಲನ ಇತ್ಯಾದಿ ಮೇಲೆ ಭಾವಿ ಅಮ್ಮಂದಿರು ಲಕ್ಷ್ಯ ಕೊಡುತ್ತಲೇ ಇರುತ್ತಾರೆ.ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅದೇನೆಂದರೆ ನ್ಯೂಯಾರ್ಕ್‌ನ ಮಹಿಳೆಯೊಬ್ಬಳಿಗೆ ತಾನು ಗರ್ಭಿಣಿ ಎನ್ನುವುದೇ ತಿಳಿದಿರಲಿಲ್ಲವಂತೆ! ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿರುವಾಗ ಮಗು ಕೆಳಕ್ಕೆ ಬಂದಾಗ ಕಕ್ಕಾಬಿಕ್ಕಿಯಾದ ಮಹಿಳೆಗೆ ಆಗ ತಾನು ಇಷ್ಟು ತಿಂಗಳು ಗರ್ಭ ಧರಿಸಿದ್ದು ತಿಳಿದಿದೆಯಂತೆ.ನಂಬಲು ಅಸಾಧ್ಯ ಎನಿಸುವಂಥ ಈ ಘಟನೆ ನಡೆದಿದೆ. 23 ವರ್ಷದ ಲವೀನಿಯಾ ಎಂಬಾಕೆ ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ಪಾರ್ಟಿ ಮಾಡುತ್ತಿದ್ದಾಗ ಹೊಟ್ಟೆ ನೋವು ಕಾಣಿಸಿಕೊಂಡಿದೆ ಅಷ್ಟೇ. ನಂತರ ಕೆಳಭಾಗದಿಂದ ಏನೋ ಬಂದಂಗಾಗಿದೆಯಂತೆ. ನಂತರ ನೋಡಿದರೆ ಅದು ಮಗು ಎಂದು ಗೊತ್ತಾಗಿದೆ, ಆಗಲೇ ಆಕೆಗೆ ತಿಳಿದಿದ್ದು, ತನಗೆ ಡೆಲಿವರಿ ಆಗಿದೆ, ಇಷ್ಟು ತಿಂಗಳು ತಾನು ಗರ್ಭ ಧರಿಸಿದ್ದೆ ಎಂದು!ಈ ವಿಷಯ ಕೇಳಿ ಹಲವರು ನಂಬಲೇ ಇಲ್ಲವಂತೆ. ಅಷ್ಟಕ್ಕೂ ಗರ್ಭ ಧರಿಸಿರುವ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ. ಆದರೆ ಲವೀನಿಯಾ ಅವರ ದೇಹದಲ್ಲಿ ಅಂಥದ್ದೇನೂ ಬದಲಾವಣೆ ಆಗಿರಲಿಲ್ಲವಂತೆ. ಹೊಟ್ಟೆ ಮುಂದೆ ಬಂದಿದ್ದರೂ ಅದು ಬೊಜ್ಜು ಇರಬೇಕು ಎಂದುಕೊಂಡಿದ್ದರಂತೆ. ಲಾಕ್‌ಡೌನ್ ಸಮಯದಲ್ಲಿ ದೇಹಕ್ಕೆ ವ್ಯಾಯಾಮ ಇರಲಿಲ್ಲ. ಆದ್ದರಿಂದ ಬೊಜ್ಜು ಬಂದಿರಬಹುದು ಎಂದುಕೊಂಡೆ ಎನ್ನುತ್ತಾರೆ ಲವೀನಿಯಾ. ಅವರಿಗೆ ಮಾಸಿಕ ಋತುಸ್ರಾವದಲ್ಲಿ ಆಗಾಗ ಏರುಪೇರು ಆಗುತ್ತಿದ್ದುದರಿಂದ ಗರ್ಭವತಿಯಾದ ಸಮಯದಲ್ಲಿ ಮಾಸಿಕ ಋತುಸ್ರಾವ ಆಗಿರದಿದ್ದರೂ ಅವರು ತಲೆ ಕೆಡಿಸಿಕೊಂಡಿರಲಿಲ್ಲವಂತೆ!ಮಗು ಮತ್ತು ಅಮ್ಮ ಇಬ್ಬರೂ ಆರೋಗ್ಯದಿಂದ ಇದ್ದಾರೆ. ಆದರೆ ಖುದ್ದು ಈ ತಾಯಿಗೇ ಆಘಾತವಾಗಿದೆ. ನಾನಿನ್ನೂ ಆಘಾತದಲ್ಲಿಯೇ ಇದ್ದೇನೆ. ನನಗೆ ಮಗು ಹುಟ್ಟಿದೆ ಎಂದರೆ ನಂಬಲು ಆಗುತ್ತಲೇ ಇಲ್ಲ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಲಕ್ಷಣಗಳನ್ನು ನಾನೂ ಹೊಂದಲಿಲ್ಲ ಎನ್ನುತ್ತಾರೆ.ಅಂದ ಹಾಗೆ ಇತ್ತೀಚೆಗೆ ವಿಮಾನದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಳು. ಆಕೆ ಕೂಡ ತಾನು ಗರ್ಭವತಿ ಎನ್ನುವುದು ತಿಳಿದಿರಲಿಲ್ಲ ಎಂದಿದ್ದಳು!
VIDEO: ಸೀರೆ ಉಟ್ಟು ಬಂದ ಮಲ್ಲಿಕಾ ಶೆರಾವತ್‌- ಅವತಾರ ನೋಡಿದ ನೆಟ್ಟಿಗರು ಗರಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
