ರಾಜಮುಂಡ್ರಿ:ಫಾರಿನ್​ ರಿಟರ್ನ್​ ಎಂದರೆ ತೀರಾ ಇತ್ತೀಚಿನವರೆಗೂ ಏನೋ ಹೆಮ್ಮೆ. ತಮ್ಮ ಮಗ, ಮಗಳು, ಮೊಮ್ಮಕ್ಕಳು, ನೆಂಟರಿಷ್ಟರು ವಿದೇಶದಲ್ಲಿ ವಾಸಿಸುತ್ತಾರೆ ಎಂದು ಕುಟುಂಬದವರಿಗೆ ಹೇಳಿಕೊಳ್ಳಲು ಹೆಮ್ಮೆ, ಇದು ಪ್ರತಿಷ್ಠೆಯ ಸಂಕೇತವಾಗಿತ್ತು.
ಆದರೆ ಕಳೆದ ವರ್ಷದಿಂದ ಎಲ್ಲಾ ಉಲ್ಟಾ ಆಗಿದೆ. ವಿದೇಶದ ಸಹವಾಸ ಸಾಕು ಸಾಕಪ್ಪ ಎನ್ನುವಂಥ ಸ್ಥಿತಿಯನ್ನು ಕರೊನಾ ತಂದಿಟ್ಟಿದೆ. ಮನೆಯ ಮಕ್ಕಳು ವಿದೇಶದಿಂದ ಬಂದರೆ ಹಿಂದೊಮ್ಮೆ ನಾಲ್ಕು ಜನರಿಗೆ ಕಾಣಿಸಲಿ ಎಂದು ಪ್ರಚಾರ ಮಾಡುತ್ತಿದ್ದವರು ಇದೀಗ ಗುಟ್ಟುಗುಟ್ಟಾಗಿ ಮನೆಯೊಳಕ್ಕೆ ಅಡಗಿಸಿ ಇಡಲು ಶುರು ಮಾಡಿದ್ದಾರೆ.
ಇದು ಹಳೆಯ ಕರೊನಾ ಮಾತಾಯಿತು. ಆದರೆ ಇದೀಗ ಬ್ರಿಟನ್​ನಲ್ಲಿ ಹೊಸ ರೂಪಾಂತರವಾಗಿ ಬಂದಿರುವ ಕರೊನಾ-2ದಿಂದಾಗಿ ಮತ್ತೊಮ್ಮೆ ವಿದೇಶ ಎಂದರೆ ಕಂಗಾಲಾಗುವಂತಾಗಿದೆ. ಲಂಡನ್​ನಿಂದ ಬರುತ್ತಿರುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಇದೇ ರೀತಿ, ಬ್ರಿಟನ್​ನಿಂದ ದೆಹಲಿಗೆ ಬಂದಿಳಿದ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯ ಫಲಿತಾಂಶ ಬರುವುದರೊಳಗೇ ಮಹಿಳೆ ತನ್ನ ಮಗುವಿನೊಂದಿಗೆ ದೆಹಲಿಯಿಂದ ವಿಶಾಖಪಟ್ಟಣಕ್ಕೆ ಸಾಗಿಬಿಟ್ಟಿದ್ದಾರೆ. ಅವರು ಹುಷಾರಾಗಿ ಇದ್ದುದರಿಂದ ಅಥವಾ ಅನಾರೋಗ್ಯದ ಯಾವುದೇ ಸೂಚನೆ ಇಲ್ಲದ್ದರಿಂದ ತಮಗೆ ಯಾವುದೇ ಸೋಂಕು ತಗುಲಿಲ್ಲ ಎಂದು ಭಾವಿಸಿದ್ದರು.
ಆದರೆ ಮಹಿಳೆ ಮಗುವಿನೊಟ್ಟಿಗೆ ಅತ್ತ ಹೋಗುತ್ತಿದ್ದಂತೆಯೇ, ಇತ್ತ ಫಲಿತಾಂಶ ಬಂದು ಅದರಲ್ಲಿ ಪಾಸಿಟಿವ್​ ಬಂದುಬಿಟ್ಟಿದೆ. ಹೇಳಿಕೇಳಿ ಬ್ರಿಟನ್​ ರಿಟರ್ನ್​​, ಕೇಳಬೇಕಾ? ಹಳೆಯ ಕರೊನಾನೋ, ಹೊಸ ಕರೊನಾನೋ ಗೊತ್ತಿಲ್ಲ. ಅದರ ಬಗ್ಗೆ ಪರೀಕ್ಷಿಸಬೇಕು ಎನ್ನುವಷ್ಟರಲ್ಲಿಯೇ ಮಹಿಳೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಇದಾವುದರ ಪರಿವೇ ಇಲ್ಲದ ಮಹಿಳೆ ರೈಲಿನಲ್ಲಿ ಹೋಗಿಬಿಟ್ಟಿದ್ದಾರೆ. ಅಲ್ಲಿ, ಇಲ್ಲಿ, ಎಲ್ಲೆಡೆ ಹುಡುಕಾಡಿದ ಅಧಿಕಾರಿಗಳು ಸುಸ್ತೋ ಸುಸ್ತು. ಕೊನೆಗೆ ಸಿಸಿಟಿವಿ ದೃಶ್ಯ ಸೇರಿದಂತೆ ತಮ್ಮದೇ ಆದ ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಮಹಿಳೆ ವಿಶಾಖಪಟ್ಟಣದ ರೈಲಿನಲ್ಲಿ ಹೋಗಿದ್ದಾರೆ ಎನ್ನುವುದು ತಿಳಿದಿದೆ.
ಕೊನೆಗೂ ವಿಶಾಖಪಟ್ಟಣದತ್ತ ಧಾವಿಸಿದ ಪೊಲೀಸರು , ಮಹಿಳೆ ಇಳಿಯುತ್ತಿದ್ದಂತೆಯೇ ಸುತ್ತವರೆದುಬಿಟ್ಟಿದ್ದಾರೆ. ಇದರಿಂದ ಮಹಿಳೆಗೆ ದಿಗಿಲಾಗಿ ಹೋಗಿದೆ. ತನ್ನನ್ನು ಪೊಲೀಸರೇಕೆ ಅರೆಸ್ಟ್​ ಮಾಡುತ್ತಿದ್ದಾರೆ ಎಂದು ಅಕ್ಷರಶಃ ಬೆವೆತು ಹೋಗಿದ್ದಾರೆ ಮಹಿಳೆ.
ನಂತರ ಆಗಿರುವ ವಿಷಯವನ್ನು ಪೊಲೀಸರು ಅವರಿಗೆ ತಿಳಿಸಿದ್ದು, ನಂತರ ಇಬ್ಬರನ್ನೂ ಸರ್ಕಾರಿ ಸ್ವಾಮ್ಯದ ಕ್ವಾರೆಂಟೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇಬ್ಬರ ಗಂಟಲು ದ್ರವ ಮಾದರಿಗಳನ್ನು ಗುರುವಾರ ಪುನಃ ಸಂಗ್ರಹಿಸಿ ಅದನ್ನು ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲು ನಿರ್ಧರಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಂತರ ಮಹಿಳೆ ಸಾಕಪ್ಪಾ ಸಾಕು ಈ ವಿದೇಶ ಪ್ರವಾಸ ಎಂದುಕೊಂಡಿರಲಿಕ್ಕೆ ಸಾಕು.
ಲಸಿಕೆಯಲ್ಲಿ ಹಂದಿಮಾಂಸ: ಅಲ್ಲಿಯವರು ಓಕೆ ಎಂದರು, ಇಲ್ಲಿಯವರು ಇದು ‘ಹರಾಂ’ ಎಂದರು

ಸೌದಿಯಿಂದ ಬಂದ ಭಾವಿಪತಿಗಾಗಿ ಮದುಮಗಳು ರೆಡಿಯಾಗಿ ಕುಳಿತರೆ ವರ ಹೀಗೆ ಮಾಡೋದಾ?

ಕೆಲಸ ಸಿಗುತ್ತಿದ್ದಂತೆಯೇ ಇನ್ನೊಬ್ಬನ ಪ್ರೀತಿಸಿದಳು: ಬೆಂಕಿ ಹಚ್ಚಿ ಸಾಯಿಸಿದ ಮಾಜಿ ಪ್ರೇಮಿ!

ಬಿಜೆಪಿ ಜತೆ ಮೈತ್ರಿ ಮಾಡ್ಕೋಬೇಡಾ ಎಂದು ಬಡ್ಕೊಂಡೆ… ಈಗ ಗೋಳೋ ಎಂದ್ರೆ ಏನ್​ ಬಂತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
