ಪುಣೆ:ಬಸ್‌ ಚಾಲಕನೊಬ್ಬನಿಗೆ ಫಿಟ್ಸ್‌ ಬಂದು ಬಸ್ಸು ಇನ್ನೇನು ನಿಯಂತ್ರಣ ತಪ್ಪಿ ಭಾರಿ ಅಪಘಾತವಾಗುತ್ತಿದ್ದ ವೇಳೆ ಪ್ರಯಾಣಿಕರಲ್ಲಿ ಒಬ್ಬರಾದ ಮಹಿಳೆ ಎಲ್ಲರ ಪಾಲಿಗೆ ದೇವತೆಯಾಗಿ ಬಂದು ಜೀವ ಕಾಪಾಡಿದ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆ ಸಮೀಪದ ಶಿರೂರ್‌ನಲ್ಲಿ ಇರುವ ಕೃಷಿ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ಮಿನಿ ಬಸ್‌ನಲ್ಲಿ ವಾಪಸ್‌ ಬರುತ್ತಿದ್ದಾಗ ಚಲಿಸುತ್ತಿದ್ದ ಬಸ್‌ ಚಾಲಕನಿಗೆ ಫಿಟ್ಸ್‌ ಬಂತು. ಬಸ್ಸು ನಿಯಂತ್ರಣ ತಪ್ಪುವುದರಲ್ಲಿತ್ತು. ಈ ಬಸ್ಸಿನಲ್ಲಿ ಹಲವಾರು ಮಕ್ಕಳು ಸೇರಿದಂತೆ ಪ್ರಯಾಣಿಕರು ಇದ್ದರು. ಅದೇ ವೇಳೆಗೆ ಚಾಲಕ ಕಷ್ಟಪಟ್ಟು ಕೈ ಸನ್ನೆಯಲ್ಲೇ ತನಗೇನೋ ಆಗಿದೆ ಎಂದು ಹೇಳಿದ್ದಾನೆ.
ಬಸ್‌ನಲ್ಲಿದ್ದ ಪ್ರಯಾಣಿಕರ ಜೀವವೇ ಬಾಯಿಗೆ ಬಂದತಾಗಿ ಎಲ್ಲರೂ ಅಳಲು ಶುರು ಮಾಡಿದ್ದಾರೆ. ಬಸ್ಸಿನಲ್ಲಿದ್ದ ಯೋಗಿತಾ ಸತವ್‌ ಎಂಬ ಮಹಿಳೆ ಧೈರ್ಯ ಮಾಡಿ ಚಾಲಕರ ಸೀಟಿನಲ್ಲಿ ಕುಳಿತಿದ್ದಾರೆ. ಹಾಗಂತ ಇವರಿಗೇನೂ ಬಸ್‌ ಓಡಿಸಿ ತಿಳಿದಿರಲಿಲ್ಲ. ಆದರೆ ಕಾರಿನ ಚಾಲನೆ ಗೊತ್ತಿದ್ದರಿಂದ ಬಸ್‌ ನಿಯಂತ್ರಣ ಮಾಡಬಹುದು ಎಂಬ ದೊಡ್ಡ ಸಾಹಸ ಮಾಡಿದ್ದಾರೆ. ಡ್ರೈವರ್‌ ಸೀಟಿಗೆ ಬಂದು ಬಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಧೈರ್ಯದಿಂದಲೇ ಬಸ್‌ ಅನ್ನು ಚಾಲನೆ ಮಾಡುವ ಮೂಲಕ ನೇರವಾಗಿ ಆಸ್ಪತ್ರೆಗೆ ಬಂದು ಚಾಲಕನನ್ನು ಅಡ್ಮಿಟ್‌ ಮಾಡಿಸಿದ್ದಾರೆ.ಅಲ್ಲಿಯವರೆಗೂ ಉಸಿರನ್ನು ಬಿಗಿ ಹಿಡಿದು ಕುಳಿತಿದ್ದ ಪ್ರಯಾಣಿಕರಿಗೆ ಜೀವ ಬಂದಂತಾಗಿದೆ. ನಂತರ ಯೋಗಿತಾರನ್ನು ತಮ್ಮ ಪಾಲಿನ ದೇವತೆ ಎಂದು ಹಾಡಿ ಹೊಗಳಿದ್ದಾರೆ. ಅವರು ಬಸ್‌ ಚಾಲನೆ ಮಾಡುತ್ತಿರುವ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
‘ನನಗೆ ಕಾರು ಚಾಲನೆ ಮಾಡುವುದು ಗೊತ್ತಿತ್ತು. ಅದರ ಅನುಭವದ ಮೇಲೆಯೇ ಬಸ್‌ ನಿಯಂತ್ರಿಸಿದೆ. ಚಾಲಕನಿಗೆ ಮೊದಲು ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕಿತ್ತು. ಅದಕ್ಕೇ ಆಸ್ಪತ್ರೆಗೆ ಬಸ್‌ ಕೊಂಡೊಯ್ದೆ. ಸುಮಾರು 10 ಕಿಲೋ ಮೀಟರ್‌ ಮಿನಿ ಬಸ್‌ ಚಲಾಯಿಸಿ ಎಲ್ಲರನ್ನೂ ಸುರಕ್ಷಿತವಾಗಿಸಿದ್ದೇನೆ’ ಎಂದು ಯೋಗಿತಾ ಹೇಳಿದ್ದಾರೆ.
#Punewoman drives the bus to take the driver to hospital after he suffered a seizure (fit) on their return journey.#Maharashtrapic.twitter.com/Ad4UgrEaQg— Ali shaikh (@alishaikh3310)January 14, 2022
#Punewoman drives the bus to take the driver to hospital after he suffered a seizure (fit) on their return journey.#Maharashtrapic.twitter.com/Ad4UgrEaQg
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − four =
Remember me
