ಡೆವೆಂಟರ್‌ (ನೆದರ್ಲೆಂಡ್​):ಕೈಯಲ್ಲಿ ಶಸ್ತ್ರಾಸ್ತ್ರ ಇದ್ದರೂ ಕಳ್ಳರು ಬಂದಾಗ ಎಂಥವರೂ ನಡುಗಿ ಹೋಗುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಅಂಗಡಿ ಕ್ಲೀನ್​ ಮಾಡುವ ಬಟ್ಟೆಯಿಂದಲೇ ಪಿಸ್ತೂಲುಧಾರಿ ಕಳ್ಳನನ್ನು ಹಿಮ್ಮೆಟ್ಟಿಸಿದ್ದಾಳೆ! ಅದರ ವಿಡಿಯೋ ಭಾರಿ ವೈರಲ್​ ಆಗಿದ್ದು, ಮಹಿಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ನೆದರ್ಲೆಂಡ್​ನ ಡೆವೆಂಟರ್‌ನ ಮೆವ್ಲಾನಾ ಎಂಬ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಬೇಕರಿ ಓಪನ್​ ಮಾಡಿದ ಅಲ್ಲಿನ ನೌಕರಸ್ಥ ಮಹಿಳೆ ಮೊದಲಿಗೆ ಬಟ್ಟೆಯೊಂದರಿಂದ ಬೇಕರಿ ತಿನಿಸು ಇಟ್ಟಿರುವ ಗಾಜಿನ ಬಾಕ್ಸ್​ಗಳನ್ನು ಕ್ಲೀನ್​ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಕಪ್ಪು ಬಣ್ಣದ ಮುಖವಾಡ ಧರಿಸಿ, ಕೈಯಲ್ಲಿ ಪಿಸ್ತೂಲ್​ ಹಿಡಿದು ಏಕಾಏಕಿ ಖದೀಮ ಅಂಗಡಿಗೆ ನುಗ್ಗಿದ್ದಾನೆ.
ಏಕಾಏಕಿ ಮಹಿಳೆಯ ಪಕ್ಕಕ್ಕೆ ಬಂದು ಅಲ್ಲಿರುವ ಲಾಕರ್‌ನಲ್ಲಿ ಹಣ ಕದಿಯಲು ಯತ್ನಿಸಿದ್ದಾನೆ. ಅವನ ಕೈಯಲ್ಲಿ ಪಿಸ್ತೂಲ್​ ಇದ್ದುದನ್ನು ಗಮನಿಸಿದರೂ ಹೆದರಿಕೊಳ್ಳದ ಮಹಿಳೆ ಕ್ಲೀನ್ ಮಾಡುತ್ತಿದ್ದ ಬಟ್ಟೆಯಿಂದಲೇ ಮೊದಲಿಗೆ ಆತನನ್ನು ಥಳಿಸಿದ್ದಾಳೆ. ನಂತರ ಕಳ್ಳನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಅವನ ಕೈಯಿಂದ ಪಿಸ್ತೂಲ್​ ಕೆಳಕ್ಕೆ ಬಿದ್ದಿದೆ. ನಂತರ ಹೊರಗಡೆ ಇದ್ದ ವ್ಯಕ್ತಿಯೊಬ್ಬ ಗಲಾಟೆ ಕೇಳಿ ಒಳಗೆ ಬಂದಿದ್ದಾನೆ. ಆ ವೇಳೆ ಕಳ್ಳ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ.
ಶುಚಿಗೊಳಿಸುವ ಬಟ್ಟೆಯ ಶಕ್ತಿ ಕಡಿಮೆ ಎಂದು ಅಂದಾಜು ಮಾಡಬೇಡಿ ಎಂದು ಕ್ಯಾಪ್ಷನ್‍ನೊಂದಿಗೆ ತನ್ಸು ಯೆಗೆನ್ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಮಹಿಳೆಯ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.(ಏಜೆನ್ಸೀಸ್​)
ಇಲ್ಲಿದೆ ನೋಡಿ ವಿಡಿಯೋ
Latife Peker, a turkish baker in the Netherlands, chased the thief, using a cleaning cloth in self-defense; don't underestimate the power of cleaning cloth👏pic.twitter.com/4togC4JH5M
— Tansu YEĞEN (@TansuYegen)July 28, 2022

ಶಾಲೆ ಪ್ರವೇಶಿಸ್ತಿದ್ದಂತೆಯೇ ವಿದ್ಯಾರ್ಥಿನಿಯರ ಮೈಮೇಲೆ ಬರ್ತಿದೆ ‘ದೆವ್ವ’! ಕಿರುಚುತ್ತಾ, ಕೂದಲು ಕೆದರಿಕೊಳ್ತಿರೋ ಮಕ್ಕಳು

ಚಿಕನ್ ಅಂಗಡಿ ತೆರೆದಿದ್ದೇ ಪ್ರಾಣಕ್ಕೆ ಮುಳುವು? ಪ್ರವೀಣ್​ಗೆ ಮೊದಲೇ ಸಿಕ್ಕಿತ್ತಾ ಸಾವಿನ ಸುಳಿವು? ಸಹೋದರ ನೀಡಿದರು ಸ್ಫೋಟಕ ಹೇಳಿಕೆ

ರೈಲೊಳಗೆ ಬಂದ ಹಾವು: ಬೆಚ್ಚಿಬಿದ್ದ ಪ್ರಯಾಣಿಕರು- ಸಂಚಾರ ಸ್ಥಗಿತಗೊಳಿಸಿ ಅರಣ್ಯ ಸಿಬ್ಬಂದಿ ಹುಡುಕಾಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
