ಅಹಮದಾಬಾದ್‌:ಕಳೆದ ವರ್ಷ ನರ್ಮದಾ ನದಿಗೆ ಬಿದ್ದು ಮೃತಪಟ್ಟಿದ್ದ ಮಗನ ಕಂಡು ತಾಯಿ ಕಂಗಾಲಾಗಿ ಹೋಗಿದ್ದರು. ಇದು ಆತ್ಮಹತ್ಯೆಯೋ, ಕೊಲೆಯೋ, ಆಕಸ್ಮಿಕವೋ ಏನೂ ಒಂದು ತಿಳಿಯದೇ ದುಃಖದಿಂದ ಇದ್ದರು. ಆತ್ಮಹತ್ಯೆಯಾದರೆ ಮಗ ಏಕೆ ಹೀಗೆ ಮಾಡಿಕೊಂಡ, ಆತನಿಗೆ ಯಾವುದೇ ಸಮಸ್ಯೆಗಳೇ ಇರಲಿಲ್ಲವಲ್ಲ ಎಂದುಕೊಂಡು ದುಃಖಿಸಿದ್ದರು ಈ ಅಮ್ಮ. ಕೊಲೆ ಮಾಡುವಂಥ ವೈರಿಗಳೂ ಮಗನಿಗೆ ಇಲ್ಲವಲ್ಲ ಎಂದುಕೊಂಡು ಮಗನ ಸಾವಿನ ನಿಗೂಢತೆಯ ಬಗ್ಗೆ ಚಿಂತಿಸುತ್ತಲೇ ಇದ್ದರು.
ಈ ಘಟನೆ ನಡೆದದ್ದು 2020ರ ಏಪ್ರಿಲ್‌ 9 ರಂದು. ಕಾಣೆಯಾಗಿದ್ದ ಅಹಮದಾಬಾದ್‌ನ ನಿವಾಸಿ ಲೀಲಾ ಜಾಧವ್​ ಅವರ 42 ವರ್ಷದ ಪುತ್ರ ಮಾಧವ್‌ ನಿಗೂಢವಾಗಿ ಮೃತಪಟ್ಟಿದ್ದರು. ಕಾಲುವೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರೂ ತಮ್ಮ ಪುತ್ರನಿಗೆ ಅಂಥ ಯಾವುದೇ ಚಿಂತೆ ಇರಲಿಲ್ಲ ಎಂದೇ ಅವರು ಅಂದುಕೊಂಡಿದ್ದರು.
ಈ ಘಟನೆಯಾಗಿ ಇದೀಗ 9 ತಿಂಗಳು ಕಳೆದಿದೆ. ಮಗನ ಸಾವಿನ ದುಃಖವನ್ನು ಮರೆಯುತ್ತಾ ಬಂದಿದ್ದ ಈ ಅಮ್ಮನಿಗೆ ಇದೀಗ ಶಾಕ್‌ ಆಗಿದೆ. ಏಕೆಂದರೆ ಮಗ ತಾನು ಆತ್ಮಹತ್ಯೆ ಮಾಡಿಕೊಳ್ಳಹೊರಟಿದ್ದು ಅದಕ್ಕೆ ಕಾರಣವೇನು ಎಂಬುದನ್ನು ಅದರಲ್ಲಿ ಬರೆದಿದ್ದಾನೆ. ವಿಚಿತ್ರ ಎಂದರೆ ಈ ಡೆತ್‌ನೋಟ್‌ ಬರೆದಿದ್ದು 2019ರಲ್ಲಿ. ಅಂದರೆ ಸಾಯುವ ವರ್ಷದ ಮೊದಲು!
ಅದನ್ನು ಓದಿದ ಲೀಲಾ ಅವರಿಗೆ ಈಗ ಭೂಮಿಯೇ ಕುಸಿದಂತಾಗಿದೆ. ಏಕೆಂದರೆ ಅದರಲ್ಲಿ ಮಗ ತನ್ನ ಪತ್ನಿಯ ಕಾಮಪುರಾಣವನ್ನು ಬಿಚ್ಚಿಟ್ಟಿರುವುದು ಲೀಲಾ ಅವರನ್ನು ದಂಗುಬಡಿಸಿದೆ. ಲೀಲಾ ಅವರು ಮಗನ ಕಪಾಟನ್ನು ಸ್ವಚ್ಛ ಮಾಡುತ್ತಿದ್ದ ಸಂದರ್ಭದಲ್ಲಿ ಈ ಡೆತ್‌ನೋಟ್‌ ಸಿಕ್ಕಿದೆ. ಕಪಾಟಿನ ಬೆಡ್‌ಷೀಟ್‌ ಅಡಿಯನ್ನು ಅದನ್ನು ಇಡಲಾಗಿತ್ತು.
ಅದರಲ್ಲಿ 2019ರ ಏಪ್ರಿಲ್‌ ಡೇಟ್‌ ಹಾಕಲಾಗಿದ್ದು, ಈ ಮೊದಲೂ ಮಗ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎನ್ನುವ ವಿಷಯ ತಾಯಿಗೆ ತಿಳಿದಿದೆ. ಆದರೆ ಕೊನೆಗೂ 2020ರ ಏಪ್ರಿಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅದರಲ್ಲಿ ಮಾಧವ್‌ ಅವರು, ತನ್ನ ಪತ್ನಿಯ ಕ್ರಮದಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಆಕೆ ತನ್ನ ಪ್ರೇಮಿಯ ಜತೆ ಮಲಗಿ ಸೆಕ್ಸ್‌ ಮಾಡುವುದನ್ನು ನಾನು ನೋಡಿದ್ದೆ. ಅದನ್ನು ನೋಡಿ ನನಗೆ ಶಾಕ್‌ ಆಯಿತು. ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ ನಿನಗೆ ಸುಖ ಕೊಡುವ ಶಕ್ತಿ ಇಲ್ಲ, ಅದಕ್ಕೇ ನಾನು ಈ ರೀತಿ ಮಾಡುತ್ತಿದ್ದೇನೆ ಎಂದು ಆಕೆ ಹೇಳಿದರು.
ಆ ವ್ಯಕ್ತಿಯ ಬಳಿ ಕೂಡ ಮಾತನಾಡಿ ನನ್ನ ಪತ್ನಿಯಿಂದ ದೂರವಾಗುವಂತೆ ಹೇಳಿದೆ. ಆದರೆ ಉದ್ದೇಶಪೂರ್ವಕವಾಗಿ ಇಬ್ಬರೂ ನನ್ನ ಎದುರೇ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಇದನ್ನು ನನಗೆ ಸಹಿಸಲು ಆಗುತ್ತಿಲ್ಲ. ತುಂಬಾ ನೊಂದುಕೊಂಡಿದ್ದೇನೆ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ! ಈಗ ಲೀಲಾ ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಅಯ್ಯೋ ನೆನಪಾಗ್ತಲೇ ಇಲ್ಲ ಪಾಸ್‌ವರ್ಡ್‌: ಇನ್ನೆರಡು ಸಲ ತಪ್ಪು ಟೈಪಿಸಿದರೆ ಸಾವಿರಾರು ಕೋಟಿ ಗೋವಿಂದ!

ನಾನು ಕೆಲಸ ಕಳೆದುಕೊಂಡ ಮೇಲೆ ಪತ್ನಿ ವಿಚಿತ್ರವಾಗಿ ವರ್ತಿಸತೊಡಗಿದ್ದಾಳೆ: ಏನು ಮಾಡಲಿ?

ಫೇಸ್​ಬುಕ್​ ಗೆಳತಿಗಾಗಿ 2ಸಾವಿರ ಕಿ.ಮೀ ಹೋದ ಬೆಂಗಳೂರು ಯುವಕ ರಾತ್ರಿ ಕಳೆದದ್ದು ಎಲ್ಲಿ ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 1 =
Remember me
