ನವದೆಹಲಿ:ಬೆಂಗಳೂರಿನ ಯುವತಿಯೊಬ್ಬರು ಜೈಪುರಕ್ಕೆ ತೆರಳುತ್ತಿದ್ದ ವೇಳೆ ವಿಮಾನದಲ್ಲಿಯೇ ಹೆರಿಗೆಯಾಗಿರುವ ಘಟನೆ ನಡೆದಿದೆ.ಬೆಂಗಳೂರು-ಜೈಪುರ ನಡುವೆ ಸಂಚರಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಯುವತಿ ಪ್ರಯಾಣಿಸುತ್ತಿದ್ದರು. ವೈದ್ಯರು ನೀಡಿದ್ದ ಹೆರಿಗೆ ದಿನಾಂಕಕ್ಕೆ ಇನ್ನೂ ಕೆಲವು ದಿನಗಳು ಇದ್ದ ಹಿನ್ನೆಲೆಯಲ್ಲಿ ಅವರು ನಿಶ್ಚಿಂತೆಯಾಗಿ ಪ್ರಯಾಣ ಬೆಳೆಸಿದ್ದರು.
ಆದರೆ ಇದೇ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದನ್ನು ಅವರು ಅಲ್ಲಿಯ ಸಿಬ್ಬಂದಿಗೆ ತಿಳಿಸಿದ್ದಾರೆ. ಇದೇ ವಿಮಾನದಲ್ಲಿ ವೈದ್ಯೆ ಡಾ. ಸುಬಹಾನಾ ನಜೀರ್ ಪ್ರಯಾಣಿಸುತ್ತಿದ್ದರು, ಅವರು ಯುವತಿಗೆ ಸುಸೂತ್ರವಾಗಿ ಹೆರಿಗೆ ಮಾಡಿದ್ದಾರೆ.
ಬೆಂಗಳೂರಿನಿಂದ ಬುಧವಾರ ಬೆಳಗ್ಗೆ 5.45ಕ್ಕೆ ಟೇಕ್ ಆಫ್ ಆದ ಇಂಡಿಗೊ ವಿಮಾನ, 8 ಗಂಟೆ ಸುಮಾರಿಗೆ ಜೈಪುರದಲ್ಲಿ ಇಳಿಯಬೇಕಿತ್ತು. ಮಾರ್ಗ ಮಧ್ಯೆ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕಾಶದಲ್ಲಿ ವಿಮಾನ ಸಂಚರಿಸುವ ವೇಳೆಯಲ್ಲೇ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ’ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಜೈಪುರ ವಿಮಾನ ನಿಲ್ದಾಣದಲ್ಲಿ ಅಂಬ್ಯುಲೆನ್ಸ್​ ಮತ್ತು ವೈದ್ಯರ ವ್ಯವಸ್ಥೆ ಮಾಡುವಂತೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.ಅಲ್ಲಿಂದ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಡಿಎನ್​ಎಯಲ್ಲಿ ಗೊತ್ತಾಯ್ತು ಅಪ್ಪನ 30 ಮಕ್ಕಳ ಭಯಾನಕ ಸತ್ಯ… ತಂಗಿಯಲ್ಲಿ ಒಬ್ಳು ಇವನದ್ದೇ ಲವರ್​!

ಕೊಂಕಣ ರೈಲ್ವೆಯಲ್ಲಿ ತಾಂತ್ರಿಕ ಸಹಾಯಕರ ಹುದ್ದೆ ಅರ್ಜಿ ಆಹ್ವಾನ- ₹30 ಸಾವಿರ ಆರಂಭಿಕ ವೇತನ

https://www.vijayavani.net/s-nyayadevate-patni-iruvagale-innobbala-jate/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + eighteen =
Remember me
