ಅಹಮದಾಬಾದ್:ಪತ್ನಿ ರಾತ್ರೋರಾತ್ರಿ ಶ್ರೀಮಂತಳಾಗಿದ್ದು ಹೇಗೆಂದು ತಿಳಿಯದೇ ನಂತರ ಆಕೆಯ ಬಳಿಯಿದ್ದ ದಾಖಲೆ ನೋಡಿ ಪತಿ ಬೆಚ್ಚಿಬಿದ್ದ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಏಕೆಂದರೆ ಆ ದಾಖಲೆಯು ಮೃತವ್ಯಕ್ತಿಯದ್ದಾಗಿದ್ದು, ಮೃತನ ಹೆಸರಿನ ಮುಂದೆ ಈ ಪತಿಯದ್ದೇ ಹೆಸರಿತ್ತು!
ಬದುಕಿದ್ದ ಪತಿಯನ್ನೇ ಸತ್ತುಹೋದ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಈ ಪತ್ನಿ, ವಿಮಾ ಸಂಸ್ಥೆಯಿಂದ ಬರಬೇಕಿದ್ದ 18.5 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಳು! ನೀಮೇಶ್‌ ಮರಾಠಿ ಎನ್ನುವವರು ವಿಮೆ ಮಾಡಿಸಿದ್ದರು. ಇದರ ನಿಮಯದ ಪ್ರಕಾರ, ಅದು ಮೆಚ್ಯುರಿಟಿ ಆಗುವ ಒಳಗೆ ಅವರೇನಾದರೂ ಮೃತಪಟ್ಟರೆ, ಆ ವಿಮೆಯ ಹಣ ನಾಮಿನಿ ಆಗಿರುವ ಪತ್ನಿಗೆ ಹೋಗುತ್ತಿತ್ತು.
ಇದನ್ನು ಅರಿತ ನಂದಾ ಮರಾಠಿ ಎಂಬ ಪತ್ನಿ ತಮ್ಮ ಪತಿ ಮೃತಪಟ್ಟಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದರು. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪತಿ ವಿಚಾರಣೆ ಮಾಡಿದಾಗ ಅವರಿಗೆ ತಾವು ಮೃತಪಟ್ಟಿರುವ ದಾಖಲೆ ಸಿಕ್ಕಿದೆ. ಕೂಡಲೇ ಪೊಲೀಸರಿಗೆ ಅವರು ದೂರು ನೀಡಿದ್ದಾರೆ.
ಪತ್ನಿ ಹಾಗೂ ಆ ನಕಲಿ ದಾಖಲೆ ಸೃಷ್ಟಿಸಿಕೊಟ್ಟ ವೈದ್ಯ ಹರಿಕೃಷ್ಣ ಸೋನಿ ಎಂಬಾತನನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಪತಿಗೆ ಅರಿವಿಲ್ಲದೆ ಮಹಿಳೆ 18.5 ಲಕ್ಷ ರೂ.ಗಳನ್ನು ಪಡೆಯಲು ಎರಡು ವಿಮಾ ಸಂಸ್ಥೆಗಳಿಗೆ ದಾಖಲೆಗಳನ್ನು ಸಲ್ಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಾನಂಗಳದಲ್ಲಿ ಸುಂದರ ದೃಶ್ಯ: ಚಂದ್ರನ ಸಮೀಪ ಶುಕ್ರ, ಮಂಗಳನ ಒಟ್ಟಿಗೇ ನೋಡುವ ಭಾಗ್ಯ

VIDEO: ‘ಅಯ್ಯೋ ನನ್‌ ಬೂಟ್‌ ಒದ್ದೆಯಾಗತ್ತೆ’ ಅಂತ ಚಡಪಡಿಸಿದ ಮೀನುಗಾರರ ಸಚಿವ! ಮುಂದೇನಾಯ್ತು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
