ಮುಂಬೈ:ಪ್ರೇಮ ಕುರುಡು ಎನ್ನುವ ಮಾತು ತೀರಾ ಹಳೆಯದು. ಆದರೆ ಇಲ್ಲೊಬ್ಬ ಪ್ರಿಯತಮೆ, ತನ್ನ ಪ್ರಿಯಕರನನ್ನು ಮನೆಗೆ ಕರೆದು, ಆತನಿಗೆ ಮನೆಯ ಕೀ ಕೊಟ್ಟು ಇದೀಗ ಗೋಳೋ ಎನ್ನುತ್ತಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ ಯುವತಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಅನೇಕ ದಿನಗಳಿಂದ ಗುಟ್ಟಾಗಿ ಸಂಧಿಸುತ್ತಿದ್ದರು. ಈ ವಿಷಯ ಇಬ್ಬರ ಮನೆಯವರಿಗೂ ತಿಳಿದಿರಲಿಲ್ಲ ಕಳೆದ ಜ.27ರಂದು ಯುವತಿಯ ಮನೆಯವರು ಟ್ರಿಪ್​ಗೆ ಹೋಗುವ ಪ್ಲ್ಯಾನ್​ ಮಾಡಿದ್ದರು. ಯುವತಿ ಸಹಿತವಾಗಿ ಎಲ್ಲರೂ ಹೋಗುವ ಪ್ಲ್ಯಾನ್​ ಆಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಯುವತಿ ಏನೇನೋ ನೆಪವೊಡ್ಡಿ ತಾನು ಟ್ರಿಪ್​ಗೆ ಬರುವುದಿಲ್ಲ ಎಂದಳು. ಇದಕ್ಕೆ ಕಾರಣ, ಅವಳು ಪ್ರೇಮಿಯ ಜತೆ ಕಳೆಯಲು ಇಷ್ಟಪಟ್ಟಿದ್ದಳು. ಒಂದು ವೇಳೆ ಮನೆಯವರೆಲ್ಲಾ ಸುರಕ್ಷತೆಯ ದೃಷ್ಟಿಯಿಂದ ಕೀ ಹಾಕಿ ಹೋಗಿದ್ದರೆ, ತನ್ನ ಪ್ರಿಯಕರ ಹೊರಗಡೆಯಿಂದ ಬರುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಆಕೆ ಒಂದು ಡೂಪ್ಲಿಕೇಟ್​ ಕೀಯನ್ನು ಅವನಿಗೆ ಕೊಟ್ಟಿದ್ದಳು. ಆ ರಾತ್ರಿ ಮನೆಗೆ ಬಾ ಎಂದು ಹೇಳಿದ್ದಳು.
ಆದರೆ ಎಲ್ಲಾ ಪ್ಲ್ಯಾನ್​ ತಲೆಕೆಳಗಾಗಿದೆ. ಇತ್ತ ರಾತ್ರಿ ಒಬ್ಬಳೇ ಮಗಳನ್ನು ಬಿಟ್ಟುಹೋಗಲು ಒಪ್ಪದ ಆಕೆಯ ಪಾಲಕರು ಮಗಳನ್ನೂ ಜತೆಗೆ ಕರೆದುಕೊಂಡು ಹೋಗಿದ್ದಾರೆ. ಇತ್ತ ಪ್ರಿಯಕರ ಅವಳು ಹೇಳಿದಂತೆ ಕೀ ಹಿಡಿದುಕೊಂಡು ಮನೆಗೆ ಬಂದಿದ್ದಾನೆ.
ಕೀ ತೆಗೆದರೆ ಪ್ರಿಯತಮೆ ಇಲ್ಲ. ಆಕೆ ಇಲ್ಲದಿದ್ದರೇನಂತೆ? ಮನೆಯಲ್ಲಿ ಇರುವ ಲಕ್ಷಾಂತರ ರೂಪಾಯಿ ಹಣದ ಮೇಲೆ ಆತನ ಕಣ್ಣುಬಿದ್ದಿದೆ. ಮನೆಯಲ್ಲಿ 13 ಲಕ್ಷ ರೂಪಾಯಿ ಇತ್ತು. ಸಿಕ್ಕಿದ್ದೇ ಛಾನ್ಸ್​ ಎಂದುಕೊಂಡ ಯುವಕ ಎಲ್ಲಾ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ!
ಮನೆಯವರು ವಾಪಸ್​ ಬಂದು ನೋಡಿದಾಗ ಮನೆಯಲ್ಲಿ ಹಣವಿಲ್ಲ! ಮನೆ ಬಾಗಿಲು ಮುರಿದಿಲ್ಲ, ಎಲ್ಲಿಯೂ ಏನೂ ಆಗಿಲ್ಲ, ಆದರೆ ಮನೆಯನ್ನು ಸುಲಭದಲ್ಲಿ ಹೊಕ್ಕು ಕಳ್ಳತನ ಮಾಡಿರುವುದು ತಿಳಿದು ಕಂಗಾಲಾಗಿ ಹೋಗಿದ್ದಾರೆ. ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.ಪೊಲೀಸರಿಗೆ ತನಿಖೆ ವೇಳೆ ಮಗಳೇ ಈ ಕೆಲಸ ಮಾಡಿರುವುದು ತಿಳಿದಿದೆ. ನಂತರ ಹೆದರಿ ಆಕೆ ಸತ್ಯವನ್ನು ಬಾಯಿಬಿಟ್ಟಿದ್ದಾಳೆ. ಅಕೆಯ ಪ್ರೀತಿಯ ಬಣ್ಣವೂ ಬಯಲಾಯ್ತು, ಜತೆಗೆ ಪ್ರಿಯಕರನ ಅಸಲಿ ಬಣ್ಣವೂ ಹೊರಬಿತ್ತು. ಈಗ ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಚಿನ್ನದುರೈ ವೆಡ್ಸ್​ ಶ್ವೇತಾ- ಮದುಮಕ್ಕಳನ್ನು ಆಶೀರ್ವದಿಸಲು ನೀರಿನೊಳಕ್ಕೆ ಧುಮುಕಿ…!

ಮದುವೆಯಾಗಿ ಮೂರು ವರ್ಷಕ್ಕೇ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಂಡಿರುವೆ- ಪರಿಹಾರ ಹೇಳಿ

ರಿಮೋಟ್​ ಕಂಟ್ರೋಲ್​​ ಸಹಾಯದಿಂದ ನಿದ್ರಿಸುತ್ತಾಳೀಕೆ! 14 ವರ್ಷ ನಿದ್ದೆಗೆಟ್ಟವಳ ವಿಚಿತ್ರ ಕೇಸಿದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 8 =
Remember me
