ಜರ್ಮನಿ:ಯುವತಿಯೊಬ್ಬಳು ಮಾಡಬಾರದ್ದನ್ನು ಮಾಡಿ ಈಗ ಕೋರ್ಟ್‌ ಆದೇಶದ ಮೇಲೆ ಆರು ತಿಂಗಳು ಶಿಕ್ಷೆ ಅನುಭವಿಸವಂತಾಗಿದೆ. ಆಕೆ ಮಾಡಿದ್ದು ಏನೆಂದರೆ ಕಾಂಡೋಮ್‌ನಲ್ಲಿ ರಂಧ್ರ ಮಾಡಿದ್ದಳು!
ಇಂಥದ್ದೊಂದು ವಿಚಿತ್ರ ಕೇಸ್‌ ನಡೆದಿರುವುದು ಪಶ್ಚಿಮ ಜರ್ಮನಿಯಲ್ಲಿ. 39 ವರ್ಷದ ಮಹಿಳೆ ಜೈಲುಪಾಲಾಗಿದ್ದಾರೆ. ಈಕೆ ತನ್ನ ಬಾಯ್‌​ಫ್ರೆಂಡ್​ ಜೊತೆ ದೈಹಿಕ ಸಂಪರ್ಕ ನಡೆಸುತ್ತಿದ್ದ ವೇಳೆ ಇಂಥದ್ದೊಂದು ಕೃತ್ಯ ಎಸಗಿದ್ದಳು.
ಆನ್​ಲೈನ್​​ ಮೂಲಕ ಈ ಮಹಿಳೆಗೆ 42 ವರ್ಷದ ವ್ಯಕ್ತಿಯ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿದೆ. ತುಂಬಾ ಸಲುಗೆಯ ನಂತರ ಆತ ಈಕೆಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ. ಈ ಒಪ್ಪಿಗೆ ಮೇರಗೆ ಆಕೆಗೆ ಲೈಂಗಿಕ ಸಂಪರ್ಕಕ್ಕೆ ಕರೆದಿದ್ದಾನೆ. ಲೈಂಗಿಕ ಸಂಪರ್ಕದ ವೇಳೆ ಕಾಂಡೋಮ್‌ ಬಳಸುತ್ತೇನೆ ಎಂದಿದ್ದಾನೆ.
ಲೈಂಗಿಕ ಸಂಪರ್ಕಕ್ಕೆ ಮಹಿಳೆ ಒಪ್ಪಿಗೆ ಕೊಟ್ಟಿದ್ದಾಳೆ. ಆದರೆ ಲೈಂಗಿಕ ಸಂಪರ್ಕ ಮಾಡಿ ತನಗೆ ಆತ ಕೈಕೊಟ್ಟುಬಿಟ್ಟರೆ ಎಂದು ಚಿಂತೆ ಈಕೆಗೆ ಕಾಡಿದೆ. ಹೀಗೆ ಮಾಡದಿರಲು ಏನು ಮಾಡಬೇಕು ಎಂದು ಯೋಚಿಸಿದ್ದಾಳೆ. ಕೊನೆಗೆ ಆಕೆಗೆ ಒಂದು ಉಪಾಯ ಹೊಳೆದಿದೆ.
ಅದೇನೆಂದರೆ, ಲೈಂಗಿಕ ಸಂಪರ್ಕದಿಂದ ತಾನು ಗರ್ಭಿಣಿಯಾದರೆ ಆತ ತನಗೆ ಕೈಕೊಡುವುದಿಲ್ಲ ಎಂದು. ಇದೇ ಕಾರಣಕ್ಕೆ ಆಕೆ ಕಾಂಡೋಮ್‌ಗೆ ರಂಧ್ರ ಮಾಡಿದ್ದಾಳೆ. ದೈಹಿಕ ಸಂಪರ್ಕಕ್ಕೆ ಹಾತೊರೆಯುತ್ತಿದ್ದ ಈ ವ್ಯಕ್ತಿಗೆ ಕಾಂಡೋಮ್‌ನಲ್ಲಿ ರಂಧ್ರ ಆಗಿರುವುದು ತಿಳಿಯಲಿಲ್ಲ.
ತಿಂಗಳ ನಂತರ ತಾನು ಗರ್ಭಿಣಿಯಾಗಿದ್ದೇನೆ ಎನಿಸುತ್ತಿದೆ ಎಂದು ಮಹಿಳೆ ಹೇಳಿದಾಗ ಆತನಿಗೆ ಶಾಕ್‌ ಆಗಿದೆ. ಇದು ಸಾಧ್ಯವಿಲ್ಲ ಎಂದಿದ್ದಾನೆ. ಕೊನೆಗೆ ಮಹಿಳೆ ತಾನು ಮಾಡಿರುವ ಕೃತ್ಯದ ಬಗ್ಗೆ ಹೇಳಿದ್ದಾಳೆ. ಇದರಿಂದ ಸಿಟ್ಟುಗೊಂಡ ವ್ಯಕ್ತಿ ಮಹಿಳೆ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕಿದ್ದಾನೆ.
ದೈಹಿಕ ಸಂಬಂಧದ ವೇಳೆ ತನಗೆ ಗೊತ್ತಿಲ್ಲದ ರೀತಿಯಲ್ಲಿ ಕಾಂಡೋಮ್​ಗೆ ರಂಧ್ರ ಮಾಡಿದ್ದು, ಇದೊಂದು ಕ್ರಿಮಿನಲ್​ ಕೇಸ್​ ಆಗಿದೆ ಎನ್ನುವ ಆತನ ವಾದವನ್ನು ಕೋರ್ಟ್‌ ಮಾನ್ಯ ಮಾಡಿದೆ. ಮಹಿಳೆ ಮೋಸ ಮಾಡಿದ್ದಾಳೆ ಎಂದು ಹೇಳಿದ ನ್ಯಾಯಮೂರ್ತಿ ಆಸ್ಟ್ರಿಡ್‌ ಸಾಲೆವ್‌ಸ್ಕಿ  ಆರು ತಿಂಗಳ ಶಿಕ್ಷೆ ವಿಧಿಸಿದೆ. ಈ ಕುರಿತು ಜರ್ಮನಿಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ

ಮನೆ ಮಾರಿ 50 ಲಕ್ಷ ರೂ. ಕೊಟ್ರು… ಕೆಲ್ಸನೂ ಹೋಯ್ತು- ದುಡ್ಡೂ ಹೋಯ್ತು.. ಅರೆಸ್ಟೂ ಆದ್ರು!

ಪಿಎಸ್‌ಐ ಗೋಲ್‌ಮಾಲ್‌: ಖದೀಮರಿಗೆ ನಂಬರ್‌ ಕೊಡ್ತಿದ್ದ ಡಿವೈಎಸ್ಪಿಯೇ ಇದೀಗ ‘ಕೈದಿ ನಂಬರ್‌ 18197’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − twelve =
Remember me
