ಮಲೇಷಿಯಾ:ಅಧಿವೇಶನ, ಸಂಸತ್​ ಕಲಾಪ ನಡೆಯುತ್ತಿರುವ ವೇಳೆ ಗಣ್ಯರು ಎನಿಸಿಕೊಂಡ ವ್ಯಕ್ತಿಗಳು ಮಾಡಬಾರದ್ದೆಲ್ಲಾ ಮಾಡಿರುವ ಹಲವಾರು ಘಟನೆಗಳು ನಡೆದಿವೆ. ಮೊಬೈಲ್​ನಲ್ಲಿ ನೋಡಬಾರದ್ದನ್ನೆಲ್ಲಾ ನೋಡುತ್ತಾ ಕುಳಿತಿರುವ ವಿಡಿಯೋಗಳು ವೈರಲ್​ ಆಗಿವೆ.
ಇದೀಗ ಅಂಥದ್ದೇ ಒಂದು ಘಟನೆ ಮಲೇಷಿಯಾದಲ್ಲಿ ನಡೆದಿದೆ. ಆದರೆ ಕರ್ನಾಟಕದಲ್ಲಿ ಸಚಿವರು, ಶಾಸಕರು ಮೊಬೈಲ್​ನಲ್ಲಿ ನೋಡುತ್ತಾ ಕುಳಿತ ವಿಡಿಯೋವನ್ನೇನೂ ಈ ಸಂಸದೆ ನೋಡಲಿಲ್ಲ. ಬದಲಿಗೆ ಅವರು ಮಾಡಿದ್ದು ಆನ್​ಲೈನ್​ ಶಾಪಿಂಗ್​!
ಸಂಸತ್ತಿನ ಕಲಾಪ ನಡೆಯುತ್ತಿರುವಾಗಲೇ ಲ್ಯಾಪ್​ಟಾಪ್​ ಓಪನ್​ ಮಾಡಿದ ಸಂಸದೆ ಗಾಜಿ ಬುಟಾ ಆನ್​ಲೈನ್​ನಲ್ಲಿ ಜೀನ್ಸ್ ಮತ್ತು ಟಾಪ್‌ಗಳನ್ನು ಶಾಪಿಂಗ್​ ಮಾಡುತ್ತಿದ್ದಾರೆ. ದೇಶದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ ಸಂಸದೆ ಹೀಗೆ ಮಾಡಿದ್ದರಿಂದ ಭಾರಿ ಟೀಕೆಗೆ ಗುರಿಯಾಗಿದ್ದಾರೆ.
ಈ ಸಂಸದೆ ಷಾಪಿಂಗ್​ ಮಾಡುತ್ತಿದ್ದ ಚಿತ್ರಗಳನ್ನು ವಿರೋಧ ಪಕ್ಷದ ನಾಯಕರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ಮಹಿಳಾ ಸಂಸದೆಗೆ ಸಂಕಷ್ಟ ಎದುರಾಗಿದೆ. ಮಲೇಷ್ಯಾದ ಮಾಜಿ ಸಂಸದ ವೀ ಚೂ ಕಿಯೋಂಗ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದು, ಸಂಸದೆ ಯಾವುದೇ ಕೆಲಸ ಮಾಡದೆ ಉಚಿತ ಸಂಬಳ ಪಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಮ್ಮನನ್ನು ನೋಡಿಕೋ ಎಂದರೆ ಟಾಯ್ಲೆಟ್​ ಕ್ಲೀನರ್​​ ಹಾಕಿ ಕಣ್ಣಿನ ದೃಷ್ಟಿಯನ್ನೇ ತೆಗೆದ ಕೇರ್​ ಟೇಕರ್​!

VIDEO: ಭಾರತದ ಧ್ವಜ ಹಿಡಿದು ಪ್ರಾಣ ಉಳಿಸಿಕೊಂಡ ಪಾಕಿಸ್ತಾನದ ವಿದ್ಯಾರ್ಥಿಗಳು! ಅನುಭವ ಇಲ್ಲಿದೆ ಕೇಳಿ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:9 − 2 =
Remember me
