ಥಾಣೆ:ಗಣರಾಜ್ಯೋತ್ಸವದ ದಿನದಂದು ಭಾರತಾಂಬೆಯ ಭಾವಚಿತ್ರಕ್ಕೆ ಭಾರತೀಯರೆಲ್ಲರೂ ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮುಂಬೈನ ಥಾಣೆಯ ಕೋಲ್‌ಶೆಟ್ ಪ್ರದೇಶದಲ್ಲೊಂದು ಅಚಾತುರ್ಯ ನಡೆದಿದೆ.
ಓರ್ವ ಮಹಿಳೆ ಭಾರತಾಂಬೆಯ ಫೋಟೋಗೆ ಪೂಜೆ ಸಲ್ಲಿಸುತ್ತಿರುವಾಗಲೇ ಅದನ್ನು ಕಿತ್ತುಕೊಂಡು ರಂಪಾಟ ಮಾಡಿದ್ದಾಳೆ. ಭಾರತ ಮಾತೆಯ ಆರಾಧನೆ ಸಂದರ್ಭದಲ್ಲಿ ಎಂಟ್ರಿ ಕೊಟ್ಟ ಈ ಮಹಿಳೆ ಫೋಟೋ ಕಿತ್ತುಕೊಂಡಿದ್ದು ಗಲಾಟೆ ಎಬ್ಬಿಸಿದ್ದಾಳೆ. ಅದರ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.
ಮಹಿಳೆ ಈ ರೀತಿ ಗಲಾಟೆ ಮಾಡುತ್ತಿದ್ದಂತೆಯೇ ಸ್ಥಳೀಯರು ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಹೇಳಿದರೂ ಮಹಿಳೆ ಫೋಟೋ ಕೊಡದೇ ಅವರಿಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಮಾತ್ರವಲ್ಲದೇ ಪೊಲೀಸರು ಫೋಟೋ ಆಕೆಯ ಕೈಯಿಂದ ತೆಗೆದುಕೊಳ್ಳಲು ಮುಂದಾದಾಗ ಮಹಿಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾಳೆ. ಸಾಲದು ಎಂಬುದಕ್ಕೆ ಪೊಲೀಸರ ಮೊಬೈಲ್‌ಫೋನ್‌ ಕಿತ್ತುಕೊಂಡು ಪುಡಿಪುಡಿ ಮಾಡಿದ್ದಾಳೆ.
ಇವೆಲ್ಲವನ್ನೂ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಮಹಿಳೆ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆದರೆ ಸದ್ಯ ಈಕೆಯ ಹೆಸರನ್ನು ಕೆಲವು ಕಾರಣಗಳಿಂದ ಪೊಲೀಸರು ಬಹಿರಂಗಪಡಿಸಲಿಲ್ಲ.
ವಿಡಿಯೋ ಇಲ್ಲಿದೆ ನೋಡಿ…(ಮೋಹಿತ್‌ ಎನ್‌ಎಂ ಎನ್ನುವವರು ಇದನ್ನು ಶೇರ್‌ ಮಾಡಿಕೊಂಡಿದ್ದಾರೆ)

ಶಾಲಾ, ಕಾಲೇಜು ತೆರೆಯಲು ಗ್ರೀನ್‌ ಸಿಗ್ನಲ್‌… ಮದುವೆ ಮನೆಗಳಿಗೆ ಎಷ್ಟು ಜನ? ಪಬ್‌-ಬಾರ್‌, ಕರ್ಫ್ಯೂ ರೂಲ್ಸ್ ಏನು? ಇಲ್ಲಿವೆ ಸಂಪೂರ್ಣ ಮಾಹಿತಿ

ಪತಿ ತುಂಬಾ ಒಳ್ಳೆಯವರು, ಆದ್ರೆ ಅವರಿಗೆ ಲೈಂಗಿಕ ನಿರಾಸಕ್ತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತಾ?

Sign in to your account
Please enter an answer in digits:twenty + twenty =
Remember me
