ಕೌಲಾಲಂಪುರ (ಮಲೇಷಿಯಾ):ಸಾವು, ಆಪತ್ತು ಅಂದರೆ ಹಾಗೆನೇ. ಯಾರಿಗೂ ಕೇಳಿ ಬರಲ್ಲ, ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಆಪತ್ತು ಹುಡುಕಿ ಬರುತ್ತದೆ. ಫುಟ್​ಪಾಥ್​ ಮೇಲೆ ಸರಿಯಾಗಿ ನಡೆದುಕೊಂಡು ಹೋಗುತ್ತಿದ್ದರೂ ವಾಹನ ಚಲಾಯಿಸಿ ಸಾವು ತರುವುದು, ವಾಹನದಲ್ಲಿ ಸರಿಯಾಗಿಯೇ ಹೋಗುತ್ತಿದ್ದರೂ ಅಡ್ಡಾದಿಡ್ಡಿ ಬರುವವರು ಗುದ್ದುವುದು… ಹೀಗೆ ಅಪಾಯಗಳು ಹೀಗೆಯೇ ಬರುತ್ತವೆ ಎಂದು ಹೇಳುವುದು ಕಷ್ಟ. ಒಂದೇ ಒಂದು ಸೆಕೆಂಡ್​ ಹೆಚ್ಚೂ ಕಮ್ಮಿಯಾಗಿದ್ದರೂ ಜೀವ ಉಳಿಯುತ್ತಿತ್ತು ಎಂದು ಅದೆಷ್ಟೋ ಬಾರಿ ಹೇಳಿಕೊಳ್ಳುವುದು ಉಂಟು.
ಅಂಥದ್ದೇ ಒಂದು ದುರ್ಘಟನೆ ಮಲೇಷಿಯಾದಲ್ಲಿ ನಡೆದಿದೆ. ಇಂಥ ಅನೇಕ ಘಟನೆಗಳು ನಡೆಯುತ್ತಿದ್ದರೂ ಸಿಸಿವಿಟಿಯಲ್ಲಿ ಇದರ ವಿಡಿಯೋ ಸೆರೆ ಸಿಕ್ಕಿರುವ ಹಿನ್ನೆಲೆಯಲ್ಲಿ, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.
ಈ ವಿಡಿಯೋದಲ್ಲಿ ನಾವು ನೋಡುವುದು ಏನೆಂದರೆ, ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ಬೈಕ್​ ಹಿಂದುಗಡೆ ಕುಳಿತು ಹೋಗುತ್ತಿದ್ದಾರೆ. ಆಗ ಏಕಾಏಕಿ ಬೈಕ್​ನಿಂದ ಧೊಪ್​ ಎಂದು ಬಿದ್ದಿದ್ದಾರೆ. ಇದಕ್ಕೆ ಕಾರಣ, ಅವರ ತಲೆಯ ಮೇಲೆ ತೆಂಗಿನಕಾಯಿ ಬಿದ್ದಿರುವುದು!
ತೆಂಗಿನಕಾಯಿ ಬಿದ್ದ ರಭಸಕ್ಕೆ ಆಯತಪ್ಪಿ ಮಹಿಳೆ ನೆಲಕ್ಕುರುಳಿದ್ದಾರೆ. ತಲೆಗೆ ಹೆಲ್ಮೆಟ್​ ಇದ್ದುದರಿಂದ ಪ್ರಾಣಕ್ಕೆ ಅಪಾಯವಾಗಲಿಲ್ಲ, ಅಷ್ಟೇ ಅಲ್ಲದೇ ಆ ಸಮಯದಲ್ಲಿ ಹಿಂದುಗಡೆಯಿಂದ ಯಾವುದೇ ವಾಹನಗಳು ಬರುತ್ತಿರಲಿಲ್ಲ. ಇಲ್ಲದಿದ್ದರೆ ಮಹಿಳೆ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು.
ಕೆಲವು ಸೆಕೆಂಡುಗಳ ಈ ವಿಡಿಯೋ ಭಾರಿ ವೈರಲ್​ ಆಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಅದರ ವಿಡಿಯೋ ಇಲ್ಲಿದೆ ನೋಡಿ: ಕೃಪೆENTERTAINMENT TREE

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 18 =
Remember me
