ನವದೆಹಲಿ:ಮದುವೆಯಾದರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಬ್​ಇನ್​ಸ್ಪೆಕ್ಟರ್ ಒಬ್ಬ ಆಕೆಯ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.
ಅದೇ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿರುವ ಇನ್ನೊಬ್ಬ ಪೊಲೀಸ್ ಅಧಿಕಾರಿ ಆ ಮಹಿಳೆಯ ಜೀವ ಉಳಿಸಿದ್ದಾರೆ. ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಮಹಿಳೆಯನ್ನು ಆ ಪೊಲೀಸ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಇಂಥ ಕುಕೃತ್ಯ ಎಸಗಿದ ಸಬ್​ಇನ್​ಸ್ಪೆಕ್ಟರ್ ಹೆಸರು ಸಂದೀಪ್ ದಹಿಯ. ನವದೆಹಲಿಯ ಅಲೀಪುರದ ನಿವಾಸಿಯಾಗಿರುವ ಈತ ವಿವಾಹಿತ. ಈತ ಹಾಗೂ ಈತನ ಪತ್ನಿಯ ದಾಂಪತ್ಯ ಜೀವನ ಸರಿಯಿರಲಿಲ್ಲ. ಸದಾ ಹೆಂಡತಿಯ ಜತೆ ಜಗಳವಾಡುತ್ತಿದ್ದ ಈತನಿಗೆ ವಿಚ್ಛೇದನ ನೀಡಲು ಪತ್ನಿ ಬಯಸಿದ್ದರು. ಈ ನಡುವೆಯೇ ಸಂದೀಪ್​ ಇನ್ನೊಬ್ಬಳ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ.
ಇದನ್ನೂ ಓದಿ:ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಜೈಲು!
ನಿನ್ನೆ ಗೆಳತಿಯನ್ನು ಕರೆದುಕೊಂಡು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಕಾರಿನಲ್ಲಿ ಜಗಳವಾಗಿದೆ. ಜಗಳ ಅತಿರೇಕಕ್ಕೆ ಹೋಗಿದೆ. ಆಗ ಕೋಪದಿಂದ ಸಂದೀಪ್ ಗೆಳತಿಯ ಮೇಲೆ ಗುಂಡು ಹಾರಿಸಿ, ಚಲಿಸುವ ಕಾರಿನಿಂದ ರಸ್ತೆಗೆ ತಳ್ಳಿದ್ದಾನೆ. ರಭಸವಾಗಿ ಕೆಳಗೆ ಬಿದ್ದಿದ್ದರಿಂದ ಆಕೆಗೆ ಅನೇಕ ಗಾಯಗಳಾಗಿವೆ.
ಆದರೆ ಅದೃಷ್ಟವಶಾತ್​ ಅದೇ ವೇಳೆ ಕಚೇರಿಗೆ ಹೋಗುತ್ತಿದ್ದ ಶಾಹ್​ಬಾದ್​ ಡೈರಿ ಪೊಲೀಸ್ ಠಾಣೆಯ ಎಸ್​ಐ ಜೈವೀರ್ ಎಂಬುವವರು ಬಿದ್ದಿದ್ದ ಮಹಿಳೆಯನ್ನು ನೋಡಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಸದ್ಯಕ್ಕೆ ಮಹಿಳೆಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಮಹಿಳೆಯ ಹೇಳಿಕೆ ಪಡೆದುಕೊಳ್ಳಲಾಗಿದೆ. ಘಟನೆ ನಂತರ ಸಂದೀಪ್ ದಹಿಯಾ ಪರಾರಿಯಾಗಿದ್ದು, ಹುಡುಕಾಟ ನಡೆದಿದೆ ಎಂದು ದೆಹಲಿ ಉತ್ತರ ವಿಭಾಗದ ಡಿಸಿಪಿ ಗೌರವ್ ಶರ್ಮ ತಿಳಿಸಿದ್ದಾರೆ.
ಜೈಲಿನೊಳಗೇ ಸುರಂಗ ತೋಡಿ ಡ್ರಗ್​ ಪೆಡ್ಲರ್​ ಎಸ್ಕೇಪ್​; ಕಣ್​ಕಣ್​ ಬಿಡ್ತಿದ್ದಾರೆ ಅಧಿಕಾರಿಗಳು!

ಲಸಿಕೆ ಖರೀದಿಗೆ ನಿಮ್ಮ ಬಳಿ ₹80 ಸಾವಿರ ಕೋಟಿ ಇದೆಯೆ? ಪೂನಾವಾಲಾ ಪ್ರಶ್ನೆ!

ಕೆಲಸ ಕೊಡಿಸುವುದಾಗಿ ಕರೆಸಿ ರೈಲು ನಿಲ್ದಾಣದಲ್ಲಿಯೇ ಅಧಿಕಾರಿಗಳಿಂದ ಗ್ಯಾಂಗ್​ರೇಪ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − six =
Remember me
