ಅಹಮದಾಬಾದ್‌:ಮಗ… ಹೇಗಿದ್ದಿಯಾ ಕಂದ? ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತಿದ್ಯಾ? ಏನಾದ್ರೂ ನೋವು ಆಗ್ತಿದ್ಯಾ? ಹುಷಾರಿದ್ದಿ ತಾನೆ…?
– ಹೀಗೆಲ್ಲಾ ದಿನವೂ ಪ್ರಶ್ನೆ ಕೇಳುತ್ತಿದ್ದಾಳೆ ಇಲ್ಲೊಬ್ಬ ಅಮ್ಮ. ಆಸ್ಪತ್ರೆಯ ಎದುರಿಗೆ ಬಂದು ಪ್ರತಿದಿನವೂ ವಿಡಿಯೋಕಾಲ್‌ ಆನ್‌ ಮಾಡಿ ಇದನ್ನು ಕೇಳುತ್ತಿದ್ದಾಳೆ ಈ ತಾಯಿ. ಜೀವಂತ ಮಗನೊಂದಿಗೆ ಇಂಥ ಘಟನೆ ನಡೆದಿದ್ದರೆ ಅದು ಸುದ್ದಿಯಾಗುತ್ತಲೇ ಇರಲಿಲ್ಲ. ಆದರೆ ಇದು ಕಣ್ಣೀರಿನ ಕಥೆ.
ಈ ಅಮ್ಮ ಹೀಗೆ ವಿಡಿಯೋಕಾಲ್‌ ಮಾಡುತ್ತಿದ್ದುದು ಕರೊನಾದಿಂದಾಗಿ ಮೃತಪಟ್ಟಿರುವ ತನ್ನ ಮಗನೊಂದಿಗೆ! ನಿಜ. ಬದುಕಿನ ಏಕೈಕ ಆಸರೆಯಾಗಿದ್ದ ಮಗನನ್ನು ಅಹಮದಾಬಾದ್‌ನ ಈ ತಾಯಿ ಪೂನಂ ಸೋಲಂಕಿ ಕಳೆದುಕೊಂಡಿದ್ದಾರೆ. ಅದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಗನ ಅಂತ್ಯಸಂಸ್ಕಾರ ನಡೆದು ವಾರಗಳೇ ಕಳೆದು ಹೋಗಿವೆ. ಆದರೆ ಈಕೆ ಮಾತ್ರ ದಿನವೂ ಆಸ್ಪತ್ರೆ ಎದುರು ಬಂದು ಕರೆ ಮಾಡುತ್ತಿದ್ದಾಳೆ.
ಕಳೆದ ವಾರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗನೊಂದಿಗೆ ಪೂನಂ ಕೊನೆಯದಾಗಿ ವಿಡಿಯೋ ಕಾಲ‌್ ಮಾಡಿ ಮಾತನಾಡಿದ್ದಾರೆ. ಅದರ ರಿಕಾರ್ಡ್‌ ಮಾಡಲಾಗಿದೆ. ಇದಾದ ಬಳಿಕ ಮಗ ಮೃತಪಟ್ಟಿದ್ದಾನೆ. ಆದರೆ ಈ ಮಾತೃ ಹೃದಯದ ಮಾತ್ರ ಅದನ್ನು ಒಪ್ಪುತ್ತಿಲ್ಲ. ತನ್ನ ಮಗ ಆಸ್ಪತ್ರೆಯ ಒಳಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದೇ ಭಾವಿಸಿದ್ದಾರೆ ಇವರು.
ಮಗನನ್ನು ಕಳೆದುಕೊಂಡು ಹುಚ್ಚಿಯಂತಾಗಿದ್ದ ಪೂನಂ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಂಬಂಧಿಕರಿಗೆ ಒತ್ತಾಯ ಮಾಡುತ್ತಿದ್ದಾರೆ. ಆಸ್ಪತ್ರೆ ಎದುರು ದಿನವೂ ಅದೇ ವಿಡಿಯೋ ಕಾಲ್‌ ಆನ್‌ ಮಾಡಿ ಕೊಡುತ್ತಾರೆ. ಅದನ್ನು ಪೂನಂ ನೋಡುತ್ತಾ ತಾವೂ ಮಾತನಾಡುತ್ತಾರೆ. ಆಮೇಲೆ ಅವರಿಗೆ ಮಗ ಇನ್ನೂ ಬದುಕಿದ್ದಾನೆ, ಒಳಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಭಾಸವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
’ಇದೊಂದು ಅಸಹಜ ಪ್ರಕ್ರಿಯೆ. ಹೀಗೆ ಮಾಡಲು ನಮಗೆ ಮುಜುಗರ ಆಗುತ್ತದೆ. ಆದರೆ ಅವರ ನೋವಿಗೆ ನಾವು ಸ್ಪಂದಿಸುತ್ತಿದ್ದೇವೆ. ದಿನವೂ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬರುತ್ತಿದ್ದೇವೆ’ ಎನ್ನುತ್ತಾರೆ ಅವರ ಸಂಬಂಧಿಕರು.
ಮದುವೆಗೂ ಸಿಕ್ತಿಲ್ಲ ರಜೆ! ಪೊಲೀಸ್ ಠಾಣೆ ಎದುರೇ ಹೀಗೊಂದು ಹೃದಯಸ್ಪರ್ಶಿ ಅರಿಶಿಣ ಕಾರ್ಯಕ್ರಮ

ನಮ್ಮಮ್ಮ ಕ್ಯಾಟ್‌ವಾಕ್‌ ಮಾಡುತ್ತಿದ್ದಾರೆ- ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ನಟಿ ರಾಖಿ ಸಾವಂತ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
