ವಾಷಿಂಗ್ಟನ್:ಖ್ಯಾತ ರೂಪದರ್ಶಿಯಂತೆ ಕಾಣಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದ ನಟಿಯೊಬ್ಬಳು, ಕೊನೆಗೆ ತಾನು ಮೊದಲಿನಂತೆಯೇ ಆಗಲು ಪುನಃ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಕಳೆದ 12 ವರ್ಷಗಳಲ್ಲಿ 40ಕ್ಕೂ ಹೆಚ್ಚು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಈ ವಿಚಿತ್ರ ನಟಿಯ ಹೆಸರು ಜೆನ್ನೀಫರ್ ಪ್ಯಾಂಪಲೋನಾ.
ರಿಯಾಲಿಟಿ ಷೋನ ಸೂಪರ್‌ಸ್ಟಾರ್ ಎನಿಸಿಕೊಂಡಿರುವ ಜೆನ್ನೀಫರ್​ ನೋಡಲು ಸುಂದರವಾಗಿಯೇ ಇದ್ದಳು. ಆದರೆ ಆಕೆಗೆ ಹಾಲಿವುಡ್​ ತಾರೆ, ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್ ಕಂಡರೆ ತುಂಬಾ ಅಭಿಮಾನ. ಈ ಅಭಿಮಾನ ಎಷ್ಟರಮಟ್ಟಿಗೆ ಎಂದರೆ ಆಕೆಯಂತೆಯೇ ತಾನು ಕಂಡರೆ ಇನ್ನೂ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ನಂಬಿಕೆ. ಇದೇ ಕಾರಣಕ್ಕೆ ಹಲವಾರು ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಳು.
ಕೊನೆಗೂ ಆಕೆಯ ಆಸೆ ಈಡೇರಿತು. ಕಿಮ್ ಕಾರ್ಡಶಿಯನ್ ರೀತಿಯಲ್ಲಿಯೇ ಮಾಡಿದ ಪ್ಲಾಸ್ಟಿಕ್​ ಸರ್ಜರಿ ಯಶಸ್ವಿಯಾಯಿತು. ಇದಕ್ಕಾಗಿ ಈಕೆ ಖರ್ಚು ಮಾಡಿದ್ದು, 600 ಸಾವಿರ ಡಾಲರ್​ (ಸುಮಾರು 4.77 ಕೋಟಿ ರೂಪಾಯಿ). ಎಲ್ಲರೂ ತನ್ನನ್ನು ಕಿಮ್ ಕಾರ್ಡಶಿಯನ್ ರೀತಿಯಲ್ಲಿಯೇ ಗುರುತಿಸುತ್ತಿದ್ದುದರಿಂದ ಭಾರಿ ಖುಷಿಪಟ್ಟಳು ಜೆನ್ನೀಫರ್​.
ಹೀಗೆ ದಿನ ಕಳೆದಂತೆ ಜನರು ಈಕೆಯನ್ನು ಕಿಮ್ ಕಾರ್ಡಶಿಯನ್ ಎಂದೇ ಗುರುತಿಸತೊಡಗಿದರು. ಇದು ಅವಳಿಗೆ ಕಿರಿಕಿರಿ ಉಂಟು ಮಾಡಲು ಶುರು ಮಾಡಿತು. ತನ್ನ ಅಸಲಿಯತ್ತು ಬಿಟ್ಟು ಬೇರೊಬ್ಬಳ ಹೆಸರಿನಿಂದ ಜನ ಗುರುತಿಸುವುದನ್ನು ಸಹಿಸಲು ಆಗಲಿಲ್ಲ ಜೆನ್ನೀಫರ್​ಗೆ.
ರಿಯಾಲಿಟಿ ಷೋನಿಂದಾಗಿ ಜನ ನನ್ನನ್ನು ಗುರುತಿಸುತ್ತಿದ್ದರು. ಈ ಹಂತಕ್ಕೆ ಬರಲು ಸಾಕಷ್ಟು ಶ್ರಮ ವಹಿಸಿದ್ದೆ. ಸಾಕಷ್ಟು ಓದಿದ್ದೇನೆ. ನಟಿ ಮಾತ್ರವಲ್ಲದೇ ಹೆಸರಾಂತ ಉದ್ಯಮಿ ಕೂಡ ಆಗಿದ್ದೇನೆ. ನನ್ನ ವೈಯಕ್ತಿಕ ಜೀವನದಲ್ಲಿ ಈ ಎಲ್ಲ ಸಾಧನೆಗಳನ್ನು ಹೊಂದಿದ್ದೇನೆ. ಆದರೆ, ಜನರು ನನ್ನನ್ನು ಜನ್ನೀಫರ್​ ಎಂದು ಗುರುತಿಸುವುದನ್ನು ಬಿಟ್ಟೇ ಬಿಟ್ಟಿದ್ದಾರೆ. ಎಲ್ಲರೂ ಕಿಮ್ ಕಾರ್ಡಶಿಯನ್ ಎಂದೇ ಗುರುತಿಸುತ್ತಿದ್ದಾರೆ. ಇದನ್ನು ಸಹಿಸಲು ಆಗುತ್ತಿಲ್ಲ ಎಂದು ನೋವು ತೋಡಿಕೊಂಡ ಜನ್ನೀಫರ್​ ಕೊನೆಗೆ ನಿರ್ಧಾರ ಮಾಡಿ ತನ್ನ ಮೊದಲ ಸ್ವರೂಪವನ್ನು ಪಡೆಯಲು ಇಚ್ಛಿಸಿದ್ದಾರೆ!
ಅಸಲಿ ರೂಪಕ್ಕಾಗಿ ಮತ್ತೆ ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋಗಿದ್ದಾರೆ. ಈಗಾಗಲೇ ಇದಕ್ಕೆ 120 ಸಾವಿರ ಡಾಲರ್​ ( 95.50 ಲಕ್ಷ ರೂಪಾಯಿ) ಖರ್ಚಾಗಿದ್ದು, ಇನ್ನೂ ಸರ್ಜರಿ ನಡೆಯುತ್ತಿದೆ!
ಅಂದಹಾಗೆ ಈಕೆಗೆ ಈಗ 29 ವರ್ಷ ವಯಸ್ಸು. 17ನೇ ವಯಸ್ಸಿನಲ್ಲಿ ಇದ್ದಾಗಲೇ ಪ್ಲಾಸ್ಟಿಕ್​ ಸರ್ಜರಿ ಖಯಾಲಿ ಹುಟ್ಟಿದೆ. ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮತ್ತು ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಸಲುವಾಗಿಯೇ ಈ ಪ್ರಮಾಣದ ಪ್ಲಾಸ್ಟಿಕ್​ ಸರ್ಜರಿಗೆ ಮೂಲ ಕಾರಣ ಎಂದು ಹೇಳಲಾಗುತ್ತಿದ್ದು, ಅದರಂತೆ ಈಗ ಭಾರಿ ಸುದ್ದಿಯಂತೂ ಆಗುತ್ತಿದ್ದಾಳೆ.
ರಾಜಕೀಯ ನಾಯಕರ ತಲೆಬಿಸಿ ಮಾಡಿದ ಹೊಸ ಕೈಪಿಡಿ: ಇನ್ಮುಂದೆ ಬಾಯಿ ಬಿಡೋ ಹಾಗೇ ಇಲ್ಲ!

ಉನ್ನತ ಶಿಕ್ಷಣ ಪಡೆದ ಸಿರಿವಂತ ಮಹಿಳೆಯರೇ ಈತನ ಟಾರ್ಗೆಟ್​: 11 ಮಂದಿಯನ್ನು ಮದ್ವೆಯಾದ ಸಚಿವರ ಸಂಬಂಧಿ!

VIDEO: ಹಿಜಾಬ್​ ವಿರುದ್ಧ ಇರಾನ್​ನಲ್ಲಿ ಪ್ರತಿಭಟನೆ- ಬಟ್ಟೆ ಕಿತ್ತೆಸೆದು ಓಪನ್ ಚಾಲೆಂಜ್!​ ಮುಸ್ಲಿಂ ರಾಷ್ಟ್ರ​ ಅಲ್ಲೋಲ ಕಲ್ಲೋಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
