ತಿಮ್ಮರಾಜ ಮಂಡಲ್ (ತೆಲಂಗಾಣ):ಮಗುವಿಗೆ ಎದೆಹಾಲು ಕುಡಿಸುತ್ತಿರುವಾಗಲೇ ಹೃದಯಾಘಾತವಾಗಿ ತಾಯಿ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮರಾಜ ಮಂಡಲ್ ನ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.
ರಾಜಾಪುರ ಮಂಡಲದ 25 ವರ್ಷ ಜಯಶ್ರೀ ಜೀವ ಕಳೆದುಕೊಂಡವರು. ಇವರು ಚೊಚ್ಚಲ ಹೆರಿಗೆಗಾಗಿ ಎರಡು ತಿಂಗಳಾಗಿತ್ತು. ಅವರಿಗೆ ಸ್ವಲ್ಪ ಅನಾರೋಗ್ಯ ಕಾಣಿಸಿಕೊಂಡಿತ್ತು. ಅವರ ಗಂಡ ಪ್ರಶಾಂತ್​ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಇದೇನು ದೊಡ್ಡ ಸಮಸ್ಯೆಯಲ್ಲ, ಹೃದಯನಾಳದಲ್ಲಿ ಸ್ವಲ್ಪ ಸಮಸ್ಯೆ ಇದೆ, ಇದು ದೊಡ್ಡ ವಿಷಯವಲ್ಲ, ಗುಣವಾಗುತ್ತದೆ ಎಂದು ಹೇಳಿದ್ದ ವೈದ್ಯರು ಔಷಧ ಕೊಟ್ಟು ಕಳುಹಿಸಿದ್ದರು.
ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ವಾಪಸ್​ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಬೆಳಗಿನ ಜಾವ ಮಗುವಿಗೆ ಎದೆಹಾಲು ಕುಡಿಸುತ್ತಿರುವಾಗಲೇ ಹೃದಯಾಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಹ ಕುಡಿಯಲು ಅವರ ಅಜ್ಜಿ ಕರೆದರೂ ಜಯಶ್ರೀ ಉತ್ತರಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ನೋಡಿದಾಗಲೇ ವಿಷಯ ತಿಳಿದುಬಂದಿದೆ. ಏನೂ ಅರಿಯದ ಎರಡು ತಿಂಗಳ ಹೆಣ್ಣು ಮಗು ತಾಯಿಯ ಮಡಿಲಿನಲ್ಲಿ ಹಾಲನ್ನು ಹೀರುತ್ತಾ ಇದ್ದ ದೃಶ್ಯ ಮನಕಲಕುವಂತಿತ್ತು.(ಏಜೆನ್ಸೀಸ್​)
ಹೈ ಪ್ರೊಫೈಲ್​ ವೇಶ್ಯಾವಾಟಿಕೆ: ಬೆಂಗಳೂರಿನ ಯುವತಿಯೂ ಅರೆಸ್ಟ್​- ಮೊಬೈಲ್​ನಲ್ಲಿ ರಾಜಕಾರಣಿಗಳ ಹೆಸರು!

ಬುದ್ಧಿ ಹೇಳಿದರೂ ಕೇಳದ ಕಾಂಗ್ರೆಸ್​ನ ನಾಲ್ವರು ಸಂಸದರು ಅಮಾನತು: ಮುಂಗಾರು ಅಧಿವೇಶನದಿಂದ ಔಟ್

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಜ್ವರ: ಸೋನಿಯಾ ಪರ ನಾಳಿನ ಭಾರಿ ಹೋರಾಟಕ್ಕೆ ಗೈರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + thirteen =
Remember me
