ಅಹಮದಾಬಾದ್:ವಿವಾಹಿತೆಯೊಬ್ಬಳು ಪ್ರಿಯಕರನ ಜತೆ ಓಡಿಹೋಗಿದ್ದ ಕಾರಣಕ್ಕೆ ಆಕೆಯ ಗಂಡನೇ ಅತ್ಯಂತ ಹೇಯ ಎನಿಸುವ ಶಿಕ್ಷೆಯನ್ನು ನೀಡಿರುವ ಹೃದಯವಿದ್ರಾವಕ ಘಟನೆ ಗುಜರಾತ್​ನ ದಹೋಡ್​​ ಜಿಲ್ಲೆಯಲ್ಲಿ ನಡೆದಿದೆ.
ಯುವತಿಯನ್ನು ಹುಡುಕಿ ಕರೆತಂದ ಗಂಡ ಗ್ರಾಮದ ಹಿರಿಯರೊಂದಿಗೆ ಸೇರಿ ಆಕೆಯನ್ನು ವಿವಸ್ತ್ರಳನ್ನಾಗಿ ಮಾಡಿ ಮೆರವಣಿಗೆ ಮಾಡಿದ್ದಾನೆ. ಮಾತ್ರವಲ್ಲದೇ ಈ ಘಟನೆಗೆ ವಿಡಿಯೋ ಕೂಡ ಮಾಡಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಗಮನಿಸಿದ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. 23 ವರ್ಷದ ವಿವಾಹಿತೆ ಕಳೆದ ತಿಂಗಳಲ್ಲಿ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಇದರಿಂದ ತನ್ನ ಗಂಡ ಹಾಗೂ ಗ್ರಾಮಸ್ಥರು ಹಲವೆಡೆ ಹುಡುಕಾಡಿ ಪತ್ತೆಹಚ್ಚಿದ್ದರು. ಅವರನ್ನು ಮರಳಿ ಗ್ರಾಮಕ್ಕೆ ಕರೆತಂದು ಪಂಚಾಯಿತಿ ಮಾಡಿದ್ದರು.
ಮದುವೆಯಾದ ಬಳಿಕ ಮತ್ತೋರ್ವನೊಂದಿಗೆ ಹೋಗಿದ್ದಕ್ಕೆ ಶಿಕ್ಷೆಯಾಗಿ ತನ್ನ ಗಂಡ ಹಾಗೂ ಕುಟುಂಬಸ್ಥರು ಆಕೆಯನ್ನು ಹೊಡೆದು ವಿವಸ್ತ್ರಳನ್ನಾಗಿಸಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೇ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯಬೇಕೆಂದು ಗ್ರಾಮದ ಹಿರಿಯರು ಆದೇಶಿಸಿದ್ದಾರೆ. ಸಂತ್ರಸ್ತೆಯ ಗಂಡ ಸೇರಿದಂತೆ 18 ಮಂದಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದು ಅರುಣಾ ಕಹಾನಿ! ಸಿನಿಮಾ ಹೆಸರಲ್ಲಿ ವಂಚಿಸಿದ್ದ ಯುವತಿಯೀಗ ಸಿನಿಮಾದಲ್ಲೇ ‘ಮಿಂಚಿಂಗ್’​…

ಮದ್ವೆಗೆ ಬರೋದಾದ್ರೆ ವಧು ಹತ್ರ ಮಾತನಾಡ್ಬಾರ್ದು, ಮೇಕಪ್​ ಮಾಡಿರಬಾರ್ದು, 6 ಸಾವಿರ ರೂ. ಗಿಫ್ಟ್​ ತರಬೇಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 1 =
Remember me
