ಕಂಕರ್​ಖೇಡಾ (ಉತ್ತರಪ್ರದೇಶ):ಯಾವುದೇ ವ್ಯಕ್ತಿ ಮೃತಪಟ್ಟಿದ್ದಾನೆಯೇ ಎಂದು ನೋಡಲು ಆತನ ಹೃದಯ ಬಡಿತವನ್ನು ಮೊದಲು ಗಮನಿಸುತ್ತೇವೆ. ಆದರೆ ಬರೋಬ್ಬರಿ 210 ನಿಮಿಷ (ಮೂರೂವರೆ ಗಂಟೆ) ಹೃದಯ ಕೆಲಸ ಮಾಡದೇ ನಿಂತರೂ ಮಹಿಳೆಯೊಬ್ಬರು ಬದುಕಿರುವ ಕುತೂಹಲದ ಘಟನೆ ನಡೆದಿದೆ.
ಇಂಥದ್ದೊಂದು ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೀರತ್​ನಲ್ಲಿ. ಇಲ್ಲಿಯ ಕಂಕರ್​ಖೇಡಾ ನಿವಾಸಿ 34 ವರ್ಷದ ಕವಿತಾ ರಾಜು ಅವರಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಅವರ ಹೃದಯ 210 ನಿಮಿಷಗಳ ಕಾಲ ನಿಂತರೂ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಮೀರತ್‌ನ ಲಾಲಾ ಲಜಪತ್ ರಾಯ್ ಮೆಮೋರಿಯಲ್​​ ವೈದ್ಯಕೀಯ ಕಾಲೇಜಿನಲ್ಲಿ ಇಂಥದ್ದೊಂದು ಪವಾಡ ನಡೆದಿದ್ದು, ವೈದ್ಯರು ಕವಿತಾ ಅವರ ಪ್ರಾಣ ಉಳಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸುವಾಗ ಹೈಟೆಕ್​ ಯಂತ್ರದ ಸಹಾಯದಿಂದ ಹೃದಯ ಬಡಿತ ಮಾಡುವಂತೆ ಮಾಡಲಾಗಿತ್ತು. ಆದರೆ ಇಷ್ಟು ಸುದೀರ್ಘ ಅವಧಿಯವರೆಗೆ ಸಹಜ ಹೃದಯ ಬಡಿತವನ್ನು ನಿಲ್ಲಿಸಿರುವುದು ವೈದ್ಯಕೀಯ ಪವಾಡ ಎಂದೇ ವೈದ್ಯಕೀಯ ಲೋಕ ಬಣ್ಣಿಸುತ್ತಿದೆ.
ಒಂದು ವೇಳೆ, ಶಸ್ತ್ರಚಿಕಿತ್ಸೆ ಮಾಡುವಾಗ ಮೂರು ನಿಮಿಷಗಳ ಕಾಲ ಮೆದುಳಿಗೆ ರಕ್ತ ಪೂರೈಕೆ ಆಗಿಲ್ಲವೆಂದರೆ ಮೆದುಳು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬ ರೋಗಿಗಳು ಶಸ್ತ್ರಚಿಕಿತ್ಸೆಯ ವೇಳೆ ಈ ಮೂರು ನಿಮಿಷ ತುಂಬಾ ಅಮೂಲ್ಯವಾಗಿದ್ದು, ಇದೇ ಆ ರೋಗಿಯ ಸಾವು-ಬದುಕನ್ನು ನಿರ್ಧರಿಸುವಂಥದ್ದು. ಆದರೆ ಈ ಪ್ರಕರಣದಲ್ಲಿ 210 ನಿಮಿಷ ಹೃದಯದ ಬಡಿತವನ್ನೇ ನಿಲ್ಲಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವುದು ಭಾರಿ ಶ್ಲಾಘನೆಗೆ ಒಳಗಾಗಿದೆ.
ಕವಿತಾ ಅವರು ಕಳೆದ ಎರಡು ವರ್ಷಗಳಿಂದ ಅಸಹಜ ಹೃದಯ ಬಡಿತ ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು. ಹಲವು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಲೋಚನೆ ನಡೆಸಿದರೂ, ಚಿಕಿತ್ಸೆ ಮಾತ್ರ ಸಿಕ್ಕಿರಲಿಲ್ಲ. ಅವರು ಮೀರತ್ ವೈದ್ಯಕೀಯ ಕಾಲೇಜಿನ ಕಾರ್ಡಿಯೋ ಥೋರಾಸಿಕ್ ಸರ್ಜನ್​ ಜತೆ ಸಮಾಲೋಚನೆ ನಡೆಸಿದರು. ಅವರನ್ನು ಪರೀಕ್ಷೆ ಮಾಡಿದಾಗ ಮಿಟ್ರಲ್ ವಾಲ್ವ್ ಹಾನಿಗೊಳಗಾಗಿರುವುದು ಕಂಡುಬಂದಿತ್ತು. ಮಿಟ್ರಲ್ ಕವಾಟವನ್ನು ಬದಲಿಸಲು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿ ಇದೀಗ ಯಶಸ್ವಿಯಾಗಿದ್ದೇವೆ ಎಂದು ವೈದ್ಯಕೀಯ ಕಾಲೇಜಿನ ಮಾಧ್ಯಮ ಪ್ರಭಾರಿ ಡಾ. ವಿ.ಡಿ. ಪಾಂಡೆ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯನ್ನು ಡಾ. ರೋಹಿತ್ ಕುಮಾರ್ ಚೌಹಾಣ್, ಕಾರ್ಡಿಯೋ ಥೋರಾಸಿಕ್ ಸರ್ಜರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಅವರ ತಂಡ ಯಶಸ್ವಿಯಾಗಿ ನಡೆಸಿದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ (ಏಜೆನ್ಸೀಸ್​)
ಬಿಹಾರದಲ್ಲಿ ಏನಿದು ಪಾಲಿಟಿಕ್ಸ್​? ನಿನ್ನೆವರೆಗೂ ಟೀಕಿಸ್ತಿದ್ದ ‘ಚುನಾವಣಾ ಚಾಣಕ್ಯ’ ಸಿಎಂ ಜತೆ ಗಪ್​ಚುಪ್​ ಭೇಟಿ!
ಮಾಜಿ ಸಂಸದ ಸುಬ್ರಮಣಿಯನ್​ ಸ್ವಾಮಿಗೆ ಬಿಗ್​ಶಾಕ್​! ಆರು ವಾರಗಳಲ್ಲಿ ಮನೆ ಬಿಡುವಂತೆ ಕೋರ್ಟ್​ ಆದೇಶ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:sixteen + thirteen =
Remember me
