ಮುಂಬೈ:ಸಾಹಸಮಯ ಆಟಗಳು ಕೆಲವು ಸಂದರ್ಭಗಳಲ್ಲಿ ಪ್ರಾಣಕ್ಕೂ ಕುತ್ತಾಗುವುದಿದೆ. ಇಂಥ ಕೆಲವು ಘಟನೆಗಳು ಇದಾಗಲೇ ವರದಿಯಾಗಿದ್ದು, ದಕ್ಷಿಣ ಮುಂಬೈನ ಅಲಿಬಾಗ್​ ಬೀಚ್​​ ಬಳಿ ಈಗ ಇಂಥದ್ದೇ ಇನ್ನೊಂದು ಘಟನೆ ನಡೆದಿದೆ.ಪ್ಯಾರಾಸೈಲಿಂಗ್‌ ಮಾಡುವ ಸಂದರ್ಭದಲ್ಲಿ ಮಹಿಳೆಯರು ಹಗ್ಗ ತುಂಡಾದ ಹಿನ್ನೆಲೆಯಲ್ಲಿ ಬಿದ್ದಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ದಿಯುವಿನಲ್ಲಿ ದಂಪತಿ ಇದೇ ರೀತಿ ಹಗ್ಗ ತುಂಡಾಗಿ ಬಿದ್ದಿದ್ದರು. ಈ ಘಟನೆ ಬೆನ್ನಲ್ಲೇ ಪ್ಯಾರಾಸೈಲಿಂಗ್‌ನ ಮತ್ತೊಂದು ಅವಘಡ ಸಂಭವಿಸಿದೆ.ದಕ್ಷಿಣ ಮುಂಬೈನ ಅಲಿಬಾಗ್​ ಬೀಚ್​​ ಬಳಿ ಪ್ಯಾರಾಸೈಲಿಂಗ್​ ವೇಳೆ ಮುಂಬೈನ ಸಾಕಿ ನಾಕಾ ನಿವಾಸಿಗಳಾದ ಇಬ್ಬರು ಮಹಿಳೆಯರು 100 ಮೀಟರ್​​ ಎತ್ತರದಿಂದ ಸಮುದ್ರಕ್ಕೆ ಬಿದ್ದಿದ್ದು, ಇದರ ವಿಡಿಯೋ ವೈರಲ್‌ ಆಗಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸಾಮಾನ್ಯವಾಗಿ ಪ್ಯಾರಾಸೈಲಿಂಗ್‌ನಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಲೈಫ್​ ಜಾಕೆಟ್​ಹಾಕಿಕೊಳ್ಳಲಾಗುತ್ತದೆ. ಪ್ಯಾರಾಚೂಟ್​ ಹಗ್ಗವನ್ನು ಕೆಳಗೆ ದೋಣಿಗೆ ಕಟ್ಟಿಡಲಾಗುತ್ತದೆ. ಒಂದು ತುದಿಯನ್ನು ಸುರಕ್ಷತಾ ಸಿಬ್ಬಂದಿ ಹಿಡಿದುಕೊಂಡಿರುತ್ತಾರೆ. ಇಲ್ಲಿಯೂ ಅದೇ ರೀತಿ ಆಗಿದೆ. ಆದರೆ ಮಹಿಳೆಯರು ಮೇಲಕ್ಕೆ ಹಾರುತ್ತಿದ್ದಂತೆಯೇ ದೋಣಿಗೆ ಕಟ್ಟಲಾಗಿದ್ದ ಹಗ್ಗ ಹರಿದು, ಅವರಿಬ್ಬರೂ 100 ಮೀಟರ್​ ಎತ್ತರದಿಂದ ಸಮುದ್ರಕ್ಕೆ ಬಿದ್ದಿದ್ದಾರೆ. ಬೋಟ್​​ನಲ್ಲಿದ್ದವರು ಕೂಡಲೇ ಹೋಗಿ ಅವರನ್ನು ರಕ್ಷಿಸಿದ್ದಾರೆ.
ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ:
खतरे की घंटी कभी भी बज सकती है !https://t.co/bNIbOg6Uplvia@FacebookWatch— Vijayavani (@VVani4U)December 22, 2021
खतरे की घंटी कभी भी बज सकती है !https://t.co/bNIbOg6Uplvia@FacebookWatch
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + six =
Remember me
