ರಾಂಚಿ:ಮದುವೆಯಾದ ಬಳಿಕ ಮಹಿಳೆಯರು ತಮ್ಮ ಆಚಾರ-ವಿಚಾರ, ಸಂಪ್ರದಾಯ ಎಲ್ಲವನ್ನೂ ಗಂಡನ ಮನೆಗೆ ತಕ್ಕಂತೆ ಬದಲು ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಗುವುದು ಭಾರತೀಯ ಸಂಪ್ರದಾಯ. ಮದುವೆಗಿಂತಲೂ ಮುನ್ನ ಯುವತಿಯರಿಗೆ ಇರುವ ಸ್ವಾತಂತ್ರ್ಯಗಳನ್ನು ಹಲವರು ಮದುವೆಯಾದ ಬಳಿಕ ತ್ಯಾಗ ಮಾಡಲೇಬೇಕಾದ ಅನಿವಾರ್ಯತೆಯೂ ಸಾಮಾನ್ಯ. ಯಾರು ಏನೇ ಹೇಳಿದರೂ, ಇದಕ್ಕೆ ಪರ-ವಿರೋಧಗಳ ಚರ್ಚೆಯಂತೂ ಇದ್ದೇ ಇದೆ.
ಹಲವು ಮಹಿಳೆಯರು ಇದು ತಮ್ಮ ಕರ್ತವ್ಯವೆಂದೋ, ಅನಿವಾರ್ಯತೆಯಂದೋ ಒಟ್ಟಿನಲ್ಲಿ ಬದಲಾಗುತ್ತಾರೆ. ಆದರೆ ಕೆಲವರಿಗೆ ಇದು ಸಹಿಸಲು ಸಾಧ್ಯವಾಗದ ಮಾತು. ಅದರಲ್ಲಿಯೂ ತೀರಾ ಚಿಕ್ಕಪುಟ್ಟ ವಿಷಯಗಳಿಗೆ ಗಂಡ ಅಥವಾ ಆತನ ಮನೆಯವರು ವಿರೋಧ ಮಾಡುತ್ತಲಿದ್ದರೆ ಅದನ್ನು ಸಹಿಸುವುದು ಎಲ್ಲರಿಂದಲೂ ಸಾಧ್ಯವಾಗದ ಮಾತು. ಇಂಥದ್ದೇ ಒಂದು ಘಟನೆ ಇದೀಗ ಮಹಾ ದುರಂತದಲ್ಲಿ ಅಂತ್ಯಗೊಂಡಿದೆ.
ಜೀನ್ಸ್ ಧರಿಸಲು ಬಿಡದೇ ಇರುವ ಕಾರಣಕ್ಕೆ ಪತ್ನಿಯೊಬ್ಬಳು ಕಿರಿಕಿರಿ ತಾಳದೇ ಪತಿಯನ್ನೇ ಚಾಕುವಿಂದ ಇರಿದು ಕೊಲೆ ಮಾಡಿದ್ದಾಳೆ! ಈ ಘಟನೆ ನಡೆದಿರುವುದು ಜಾರ್ಖಂಡ್‍ನ ಜಮ್ತಾರಾದ ಜೊರ್ಭಿತ ಗ್ರಾಮದಲ್ಲಿ.
ಇಂಥದ್ದೊಂದು ಕೃತ್ಯ ಎಸಗಿದವಳು ಪುಷ್ಪಾ ಹೆಂಬ್ರೋಮ್ ಎಂಬ ಮಹಿಳೆ. ಈಕೆಯ ಪತಿ ಸದಾ ಪತ್ನಿಯ ಬಟ್ಟೆಯ ಬಗ್ಗೆ ಹಂಗಿಸುತ್ತಿದ್ದನಂತೆ. ಪುಷ್ಪಾ ಜೀನ್ಸ್​ ಧರಿಸಿದರೆ ಸದಾ ಕಿರಿಕಿರಿ ಮಾಡುವುದು ಮಾತ್ರವಲ್ಲದೇ ಕ್ಯಾತೆ ತೆಗೆಯುತ್ತಿದ್ದನಂತೆ. ಆದರೆ ನನ್ನ ಬಟ್ಟೆ ನನ್ನ ಹಕ್ಕು ಎಂದುಕೊಂಡಿದ್ದ ಪತ್ನಿ ಪುಷ್ಪಾ ಗಂಡನ ಮಾತನ್ನು ಕೇಳುತ್ತಿರಲಿಲ್ಲ. ಅದೇ ರೀತಿ ಕಳೆದ ಶನಿವಾರ ರಾತ್ರಿ ಈಕೆ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದಾಳೆ. ಮನೆಗೆ ಬಂದಾಗ ಇದನ್ನು ನೋಡಿ ಪತಿರಾಯ ಕೆಂಡಾಮಂಡಲ ಆಗಿದ್ದಾನೆ.
ಇದೇ ವಿಷಯಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ. ಪದೇ ಪದೇ ತನ್ನ ಬಟ್ಟೆಯ ಬಗ್ಗೆ ಕಿರಿಕಿರಿ ಮಾಡುತ್ತಿದ್ದ ಗಂಡನ ನಡವಳಿಕೆಯಿಂದ ಬೇಸತ್ತಿದ್ದ ಪುಷ್ಪಳಿಗೆ ಇದು ಸಹಿಸಲು ಸಾಧ್ಯವಾಗದ ಮಾತಾಗಿದೆ. ಇದರಿಂದ ಆಗಿದ್ದು ಆಗಲೆಂದು ರೊಚ್ಚಿಗೆದ್ದ ಆಕೆ ಗಂಡನಿಗೆ ಚಾಕುವಿನಿಂದ ಇರಿದಿದ್ದಾಳೆ. ಆತ ಗಂಭೀರವಾಗಿ ಗಾಯಗೊಂಡ ನಂತರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದ ವಿಚಾರವಾಗಿ ಮಗ ಮತ್ತು ಸೊಸೆ ನಡುವೆ ಜಗಳ ನಡೆದಿತ್ತು. ಜಗಳದ ವೇಳೆ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪತಿಯ ತಂದೆ ಕರ್ಣೇಶ್ವರ ತುಡು ತಿಳಿಸಿದ್ದಾರೆ.
ಪುಷ್ಪವಲ್ಲವಿದು, ವಜ್ರದ ಉಂಗುರ! ಸುಂದರಿಯ ಬೆರಳು ಅಲಂಕರಿಸಿದ ಇದೀಗ ಗಿನ್ನೆಸ್​ ದಾಖಲೆ ಪುಟದಲ್ಲಿ!

ಇಬ್ಬರು ಹೆಂಡಿರ ಗೌರಿಬಿದನೂರು ಗಂಡ! ವಿವಾಹಿತೆಗೂ ಮೋಸ ಮಾಡಿ ಮತ್ತೊಂದು ಮದ್ವೆ: ಪತಿಗಾಗಿ ಇಬ್ಬರ ಜಗಳ

ಬೆಂಗಳೂರು ಪೊಲೀಸ್ರೇ ಇಬ್ಬರು ಮಕ್ಳನ್ನು ಬಿಟ್ಟು ನನ್ನ ಹೆಂಡ್ತಿ ಓಡೋಗಿದ್ದಾಳೆ, ಹುಡುಕಿ ಕೊಡಿ ಪ್ಲೀಸ್​: ದೆಹಲಿ ವ್ಯಕ್ತಿ ಮೊರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 20 =
Remember me
