ಬಾಸೆಲ್ (ಸ್ವಿಜರ್​ಲ್ಯಾಂಡ್​):ವ್ಯಕ್ತಿಯೊಬ್ಬ 11 ನಿಮಿಷ ಮಾತ್ರ ಅತ್ಯಾಚಾರ ನಡೆಸಿದ್ದ ಎನ್ನುವ ಕಾರಣಕ್ಕೆ ಇಲ್ಲಿಯ ಕೋರ್ಟ್​ ಆತನ ಶಿಕ್ಷೆಯನ್ನು ಕಡಿಮೆ ಮಾಡಿರುವ ಘಟನೆ ನಡೆದಿದ್ದು, ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ಜೈಲು ಶಿಕ್ಷೆಯನ್ನು ಕಡಿಮೆ ಮಾಡಿರುವ ಸ್ವಿಸ್ ಮೇಲ್ಮನವಿ ನ್ಯಾಯಾಲಯದ ವಿರುದ್ಧ ಭಾರಿ ಪ್ರತಿಭಟನೆ ಶುರುವಾಗಿದ್ದು, ಅತ್ಯಾಚಾರಿಯ ಶಿಕ್ಷೆಯನ್ನು ಹೆಚ್ಚು ಮಾಡುವಂತೆ ಕೋರ್ಟ್​ ಅನ್ನು ಆಗ್ರಹಿಸಲಾಗುತ್ತಿದೆ. ಬಾಸೆಲ್ ಕೋರ್ಟ್​ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೆರೆದಿದ್ದು, ಅವರು ಅಪರಾಧಿಯ ಶಿಕ್ಷೆ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ.ಬ್ಯಾನರ್​ಗಳನ್ನು ಹಿಡಿದಿರುವ ಪ್ರತಿಭಟನಾಕಾರರು, ’11ನಿಮಿಷಗಳು ತುಂಬಾ ಹೆಚ್ಚು!’ ಎಂದು ಕೂಗುವ ಮೂಲಕ 33 ವರ್ಷದ ಅಪರಾಧಿಯ ಶಿಕ್ಷೆ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಕಳೆದ ವರ್ಷ ಈ ರೇಪ್​ ಇಲ್ಲಿಯ ನೈಟ್ ಕ್ಲಬ್ ಒಂದರಲ್ಲಿ ನಡೆದಿದೆ. 17 ರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಕೆಳಹಂತದ ಕೋರ್ಟ್​ ಈ ಅತ್ಯಾಚಾರಿಗೆ 4 ವರ್ಷ ಮತ್ತು ಮೂರು ತಿಂಗಳಿನ ಶಿಕ್ಷೆ ನೀಡಿತ್ತು. ಇದನ್ನು ಆತ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದ.ಕೋರ್ಟ್​ ಈ ಶಿಕ್ಷೆಯನ್ನು ಮೂರು ವರ್ಷಗಳಿಗೆ ಇಳಿಸಿದೆ. ಇದಕ್ಕೆ ಅದು ನೀಡಿರುವ ಕಾರಣ ಆತ ಕೇವಲ 11 ನಿಮಿಷ ಮಾತ್ರ ರೇಪ್​ ಮಾಡಿದ್ದಾನೆ ಎಂದು. ಆದ್ದರಿಂದ ಪ್ರತಿಭಟನೆ ಶುರುವಾಗಿದೆ.
ದಿಢೀರ್​ ನಾಪತ್ತೆಯಾದ 6ನೇ ಕ್ಲಾಸ್​ ಬಾಲಕಿ: ಆಕೆಯ ಮೊಬೈಲ್​ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…
ಪ್ರಿಯಕರನ ಜತೆ ಏಕಾಂತದಲ್ಲಿರುವಾಗ ನುಗ್ಗಿದ ಗಂಡ! ರಕ್ಷಣೆ ಕೋರಿ ಹೈಕೋರ್ಟ್‌ ಮೊರೆ ಹೋದ ಮಹಿಳೆ
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four × 4 =
Remember me
