ಭೋಪಾಲ್:ಮಧ್ಯಪ್ರದೇಶದ ಸಚಿವ ಪ್ರಧುಮಾನ್ ಸಿಂಗ್ ತೋಮರ್ ಇದೀಗ ಭಾರಿ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ, ತಮ್ಮ ಕೈಯಾರೆ ಶೌಚಾಲಯ ಶುಚಿಗೊಳಿಸಿದ್ದಾರೆ!
ಸಚಿವರಿಗೆ ಗ್ವಾಲಿಯರ್‌ನಲ್ಲಿರುವ ಆಯುಕ್ತರ ಕಚೇರಿಯ ಸಾರ್ವಜನಿಕ ಶೌಚಗೃಹ ದುರ್ನಾತ ಬೀರುತ್ತಿದೆ ಎಂದು ಕೆಲ ಮಹಿಳೆಯರು ದೂರು ನೀಡಿದ್ದರು. ಅದನ್ನು ಯಾರೂ ಶುಚಿಗೊಳಿಸುತ್ತಿಲ್ಲ ಎಂದು ದೂರಲಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಶೌಚಗೃಹವನ್ನು ಪರಿಶೀಲನೆ ಮಾಡಲು ಹೋಗಿದ್ದರು.
ಅದು ತೀರಾ ಗಲೀಜಾಗಿರುವುದು ಕಂಡುಬಂತು. ಈ ಬಗ್ಗೆ ಸಂಬಂಧಿಸಿದವರಿಗೆ ಪಾಠ ಕಲಿಸಲು ಇದೇ ಸರಿಯಾದ ಮಾರ್ಗವೆಂದುಕೊಂಡ ಸಚಿವರು ತಡ ಮಾಡದೇ ಟಾಯ್ಲೆಟ್ ಕ್ಲೀನರ್, ಬ್ರಷ್‌ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಒಂದು ಕ್ಷಣ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ಸಚಿವರು ಹೇಳಿದಂತೆ ಮಾಡಿದರು.
ಅದನ್ನು ತರಿಸಿಕೊಂಡು ತಕ್ಷಣ ಖುದ್ದಾಗಿ ಶೌಚಗೃಹ ಶುಚಿಗೊಳಿಸಲು ಆರಂಭಿಸಿದರು.
ಇದನ್ನೂ ಓದಿ:ವ್ಯಾನ್ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟ, ಸಿಟ್ಟಿಗೆದ್ದ ಸ್ಥಳೀಯರು ಚಾಲಕನನ್ನೇ ಕೊಂದರು….
ತಾವು ಈ ರೀತಿ ಮಾಡಿ ಮಾದರಿಯಾಗುವ ಮೂಲಕ, ಸರ್ಕಾರಿ ಕಚೇರಿಗಳಲ್ಲಿನ ಶೌಚಾಲಯಗಳನ್ನು ಶುಚಿಯಾಗಿಡುವ ಜವಾಬ್ದಾರಿಯನ್ನು ಅಲ್ಲಿನ ನೌಕರರೇ ತೆಗೆದುಕೊಳ್ಳಬೇಕು ಎಂದು ಬುದ್ಧಿಮಾತು ಹೇಳಿದರು.
ಕೊಳಕಾಗಿರುವ ಶೌಚಾಲಯ ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತೀವ್ರ ತೊಂದರೆ ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ ಪ್ರತಿ ದಿನ ಶೌಚಾಲಯಗಳನ್ನು ಶುಚಿಗೊಳಿಸಬೇಕು ಎಂದು ಅವರು ತಿಳಿಸಿದರು.ಸಚಿವರಿಗೆ ಪ್ರಶಂಸೆಗಳ ಸುರಿಮಳೆಯೇ ಬರುತ್ತಿದೆ.
ಸ್ಕರ್ಟ್‌, ಷಾರ್ಟ್‌, ಮಿನಿಗಳ ಮೇಲೆ ಸರ್ಕಾರದ ಕೆಂಗಣ್ಣು- ಇವೆಲ್ಲಾ ಬ್ಯಾನ್‌ ಮಾಡಲಿದೆ ಈ ದೇಶ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − nine =
Remember me
