ತಿರುವನಂತಪುರ:ರಾಷ್ಟ್ರೀಕೃತ ಬ್ಯಾಂಕ್​ ಒಂದರಲ್ಲಿ ಮ್ಯಾನೇಜರ್​ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಕೆಲಸದ ಒತ್ತಡದ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಕುಥುಪರಂಬರದಲ್ಲಿ ನಡೆದಿದೆ.
ಸ್ವಪ್ನಾ ಎನ್ನುವ 38 ವರ್ಷದ ಮಹಿಳೆ, ಇಬ್ಬರು ಮಕ್ಕಳ ತಾಯಿ ಇಂಥದ್ದೊಂದು ಹಾದಿ ಹಿಡಿದಿದ್ದಾರೆ. ಸಾಯುವ ಮುನ್ನ ಡೆತ್​ನೋಟ್​ ಬರೆದಿರುವ ಸ್ವಪ್ನಾ, ನನಗೆ ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ. ಆದ್ದರಿಂದ ಹೀಗೆ ಮಾಡಿಕೊಂಡಿದ್ದೇನೆ ಎಂದು ಬರೆದಿದ್ದಾರೆ.
ಸ್ವಪ್ನಾ ಅವರಿಗೆ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಕುಥುಪರಂಬರ ಶಾಖೆಗೆ ವರ್ಗಾವಣೆಯಾಗಿತ್ತು. ಇಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುವ ಕಾರಣ, ನನಗೆ ಅದನ್ನು ಸಹಿಸಲು ಆಗುತ್ತಿಲ್ಲ ಎಂದು ಡೆತ್​ನೋಟ್​ನಲ್ಲಿ ಇದೆ. ಬ್ಯಾಂಕ್​ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಇವರು ಶರಣಾಗಿದ್ದಾರೆ. ಇದನ್ನು ನೋಡಿದ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನ ಆಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೇವಲ ಕೆಲಸದ ಒತ್ತಡದಿಂದ ಇವರು ಇಂಥ ಹಾದಿ ತುಳಿದಿದ್ದಾರೋ ಅಥವಾ ಆತ್ಮಹತ್ಯೆಯ ಹಿಂದೆ ಇನ್ನೇನು ಕಾರಣಗಳು ಇವೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿಜೆಪಿಯವ್ರು ದುಡ್ಡು ಕೊಟ್ರೂ ತಗೊಳಿ, ಮಹಿಳೆಯರೇ ಕೈಒಡ್ಡಿ… ಆದ್ರೆ ವೋಟ್​ ಮಾತ್ರ ನಮ್ಗೆ ಹಾಕಿ… ಎಂದ ಅಧ್ಯಕ್ಷೆ!

ಸಮೋಸಾ ಕೊಡ್ತೇನೆಂದು ಚಿಕ್ಕಪ್ಪ ಕರ್ಕೊಂಡೋದ… ಅಲ್ಲಿ ಅಜ್ಜನೂ ಇದ್ದ… ಭಯಾನಕ ಘಟನೆ ಬಿಚ್ಚಿಟ್ಟ 6 ವರ್ಷದ ಬಾಲಕಿ!

ಕೆರೆಯಲ್ಲಿ ಬಿದ್ದ ಐಫೋನ್​ ವರ್ಷದ ಬಳಿಕ ಸಿಕ್ತು- ಚಾಲ್ತಿಯಲ್ಲಿದ್ದ ಮೊಬೈಲ್​ ನೋಡಿ ದಂಗಾದ ಮಾಲೀಕ!

ಇದು ಕಿಚನ್ ಕಿವಿಮಾತು: ಅಯ್ಯೋ ಹೀಗಾಯ್ತಲ್ಲ ಎನ್ನೋ ಮಾತು ಬಿಡಿ… ಈ ಟಿಪ್ಸ್​ ಅನುಸರಿಸಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + fourteen =
Remember me
