ಮೌಂಟ್ ಮೌಂಗನೂಯಿ (ನ್ಯೂಜಿಲ್ಯಾಂಡ್)​:ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್‌ ನೇತೃತ್ವದ ತಂಡ 107 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 244 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 137 ರನ್‌ಗಳಿಗೆ ಆಲೌಟ್ ಆಯಿತು.
ನ್ಯೂಜಿಲ್ಯಾಂಡ್​ನ ಬೇ ಓವಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದು, ಭಾರತೀಯ ವನಿತೆಯರ ತಂಡ 43 ಓವರ್​ಗಳಲ್ಲಿ 137 ರನ್​ಗಳಿಗೆ ಪಾಕಿಸ್ತಾನ ತಂಡವನ್ನು ಆಲ್​ ಔಟ್ ಮಾಡಿದೆ.
ರಾಜೇಶ್ವರಿ ಗಾಯಕ್ವಾಡ್ ಮಿಂಚಿನ ಬೌಲಿಂಗ್​ಗೆ ಪಾಕಿಸ್ತಾನ ತತ್ತರಿಸಿ ಹೋಯಿತು. ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ 50 ಓವರ್​ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದ ಟೀಂ ಇಂಡಿಯಾ ಸಾಧಾರಣ ಮೊತ್ತದ ಗುರಿಯನ್ನೇ ಪಾಕ್​ ತಂಡಕ್ಕೆ ನೀಡಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 244 ರನ್ ಗಳಿಸಿತು. ಭಾರತದ ಪರ ಸ್ಮೃತಿ ಮಂಧಾನ 52 ರನ್, ದೀಪ್ತಿ ಶರ್ಮಾ 40 ರನ್, ಪೂಜಾ ವಸ್ತ್ರಕರ್ 67 ರನ್ ಮತ್ತು ಸ್ನೇಹ್ ರಾಣಾ ಔಟಾಗದೆ 53 ರನ್ ಗಳಿಸಿದರು.
244 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡ 137 ರನ್‌ಗಳಿಗೆ ಆಲೌಟ್ ಆಯಿತು. ಸಿದ್ರಾ ಅಮೀನ್ 30, ಡಯಾನಾ ಬೇಗ್ 24, ಫಾತಿಮಾ ಸನಾ 17, ನಾಯಕಿ ಬಿಸ್ಮಾ ಮರೂಫ್ 15 ರನ್​ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಭಾರತ ತಂಡದ ರಾಜೇಶ್ವರಿ ಗಾಯಕ್ವಾಡ್ ನಾಲ್ಕು ವಿಕೆಟ್​, ಜೂಲನ್ ಗೋಸ್ವಾಮಿ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್, ಮೇಘನಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಗಳಿಸಿ, ಪಾಕ್ ತಂಡವನ್ನು 137 ರನ್​ಗಳಿಗೆ ಆಲ್​ಔಟ್ ಮಾಡುವಲ್ಲಿ ಸಫಲರಾದರು.
ಯುದ್ಧದ ನಡುವೆಯೇ ಭಾರತೀಯನ ಹೃದಯ ಕದ್ದ ರಷಿಯನ್‌ ಬೆಡಗಿ… ಫೋಟೋ ಕ್ಲಿಕ್ಕಿಸುತ್ತಲೇ ಶುರುವಾಯ್ತು ಲವ್‌…

ಇಲ್ಲಿ ಎಲ್ಲೆಲ್ಲೂ ಮಹಿಳೆಯರೇ…. ದೇಶದ ಗಮನ ಸೆಳೆದಿದೆ ಆಂಧ್ರ ಪ್ರದೇಶದ ಈ ರೈಲು ನಿಲ್ದಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
