ಲಂಡನ್‌:ತೇಲುವ ಹಾಗೂ ಒಳಗಡೆಯ ದೃಶ್ಯಗಳನ್ನು ಸುಲಭದಲ್ಲಿ ಕಾಣಬಹುದಾದ ಪಾರದರ್ಶಕ ಈಜುಕೊಳವೊಂದು ಈಗ ಉದ್ಘಾಟನೆಗೊಂಡಿದೆ. ನೈಋತ್ಯ ಲಂಡನ್​ನ ರಾಯಭಾರ ಕಚೇರಿಯಲ್ಲಿ ನಿರ್ಮಿಸಲಾಗಿರುವ ಈ ಈಜುಕೊಳ ವಿಶ್ವದಲ್ಲಿಯೇ ಪ್ರಥಮ ಎನ್ನಲಾಗಿದೆ.
‘ಸ್ಕೈ ಪೂಲಿಸ್’​ ಎಂಬ ಹೆಸರಿನ ಈ ಈಜುಕೋಳ 82 ಅಡಿ ಉದ್ದವಿದೆ. ರಾಯಭಾರ ಕಚೇರಿಯಲ್ಲಿ ಎರಡು ಅಪಾರ್ಟ್​ಮೆಂಟ್​ಗಳ 10ನೆ ಮಹಡಿಯ ಮಧ್ಯದಲ್ಲಿ ಇದನ್ನು ನಿರ್ಮಿಸಲಾಗಿದೆ. ಡಬಲ್‌ ಬೆಡ್​ ರೂಮ್​ ಮನೆಗಳನ್ನು ಹೊಂದಿರುವ ಎರಡು ಗಗನಚುಂಬಿ ಕಟ್ಟಡ ಇದಾಗಿದೆ. ಈಜುಕೊಳವು ಭೂಮಿಯಿಂದ 115 ಅಡಿ ಎತ್ತರದಲ್ಲಿದೆ. ಈ ಈಜುಕೊಳದಲ್ಲಿ 50 ಟನ್​ ನೀರನ್ನು ಭರ್ತಿ ಮಾಡಲಾಗಿದೆ. ಅಲ್ಲದೇ ಮೇಲ್ಚಾವಣಿಯಲ್ಲಿ ಬಾರ್​ ಹಾಗೂ ಸ್ಪಾ ವ್ಯವಸ್ಥೆ ಕೂಡ ಮಾಡಲಾಗಿದೆ.


A post shared by Embassy Gardens (@embassygardens)

ಈ ಅದ್ಭುತ ಈಜುಕೊಳ ನಿರ್ಮಿಸಿರುವವರು ಎಂಬ ಇಂಜಿನಿಯರ್‌ ಎಕರ್‌ಸ್ಲೇ ಎಂಬುವವರು. ಆದರೆ ಈ ಈಜುಕೊಳವನ್ನು ಸದ್ಯ ಕಟ್ಟಡದ ನಿವಾಸಿಗಳಿಗೆ ಮಾತ್ರ ಬಳಕೆ ಮಾಡಲು ಅನುಮತಿ ನೀಡಲಾಗಿದೆ.ಈಜುಕೊಳದ ವಿಡಿಯೋವನ್ನ ರಾಯಭಾರ ಕಚೇರಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.
ಸಹಸ್ರಕೋಟಿ ವಂಚಕ ಚೋಕ್ಸಿ ಸಿಗದೇ ಬರಿಗೈಯಲ್ಲಿ ವಾಪಸ್‌- ಆಕೆ ಗರ್ಲ್‌ಫ್ರೆಂಡ್‌ ಅಲ್ಲ, ಪತಿ ಅಂಥವರಲ್ಲ ಎಂದ ಪತ್ನಿ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು- ಹಾಗಿದ್ದರೆ ಅಂಕ ಹೇಗೆ? ಇಲ್ಲಿದೆ ನೋಡಿ ಮಾಹಿತಿ…

ಜುಲೈ 3ನೇ ವಾರ ಎಸ್‌ಎಸ್ಎಲ್‌ಸಿ ಪರೀಕ್ಷೆ: ಆದರೆ ಮುಂಚಿನಂತೆ ಅಲ್ಲ- ಏನೇನು ವಿಶೇಷತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
