ಹೈದರಾಬಾದ್:ವಿಶ್ವದಲ್ಲಿಯೇ ಮೊದಲ ಬಾರಿಗೆ ಮಲೇರಿಯಾ ಲಸಿಕೆಯನ್ನು ಭಾರತ ತಯಾರಿಸಲಿದ್ದು, ಈ ನಿಟ್ಟಿನಲ್ಲಿ ಹೈದರಾಬಾದ್​ನಲ್ಲಿರುವ ಭಾರತ್ ಬಯೋಟೆಕ್ ಕಂಪೆನಿ ಎಲ್ಲಾ ತಯಾರಿ ನಡೆಸಿದೆ.
ಮಲೇರಿಯಾ ರೋಗ ನಿರ್ಮೂಲನೆಗೆ ಬಳಸುವ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿಗೆ ಒಪ್ಪಿಗೆ ಸೂಚಿಸಿತ್ತು. ಲಸಿಕೆ ಸಂಶೋಧನೆಯ ವೇಳೆ ಸುಮಾರು 8 ಲಕ್ಷ ಮಕ್ಕಳಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ನೀಡಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಅನುಮತಿ ನೀಡಿದೆ. ಇದರಿಂದಾಗಿ ಲಸಿಕೆ ತಯಾರಿಕೆಗೆ ಕಂಪೆನಿ ಸಿದ್ಧತೆ ನಡೆಸಿದ್ದು, ಜಗತ್ತಿನ ಕಣ್ಣು ಭಾರತದತ್ತ ನೆಟ್ಟಿದೆ.
ಈ ಕುರಿತು ಕಂಪನಿಯ ಅಂತಾರಾಷ್ಟ್ರೀಯ ವ್ಯವಹಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ರೆಚಸ್ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿರುವ ರೆಚಸ್‌, ಲಸಿಕೆ ಹೇಗೆ ಉತ್ಪಾದನೆ ಆಗಲಿದೆ ಎಂದು ತಿಳಿಸಿದ್ದಾರೆ. ‘ಇಂಗ್ಲೆಂಡಿನ ಗ್ಲಾಕ್ಸೋಸ್ಮಿತ್​​ಕ್ಲೈನ್ ಕಂಪೆನಿಯ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಮಲೇರಿಯಾ ಲಸಿಕೆ ಉತ್ಪಾದನೆ ಮಾಡಲಿದೆ ಎಂದು ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.2028ರವರೆಗೆ ವರ್ಷಕ್ಕೆ ಒಂದು ಕೋಟಿ ಮಲೇರಿಯಾ ಲಸಿಕೆ ಡೋಸ್​ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಗ್ಲಾಕ್ಸೋಸ್ಮಿತ್​​ಕ್ಲೈನ್ ಕಂಪೆನಿ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದಾಗಲೇ ಈ ಕಂಪೆನಿಯು ‘ಆರ್​ಟಿಎಸ್‌ಎಸ್​​’ ಎಂಬ ಮಲೇರಿಯಾ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಮುನ್ನಡೆ ಸಾಧಿಸಿದ್ದು, ಭಾರತದ ಇದರ ಕೈಜೋಡಿಸಲಿದೆ ಎಂದು ರೆಚಸ್‌ ತಿಳಿಸಿದ್ದಾರೆ.ಮಲೇರಿಯಾ ಬಾಧಿತ ದೇಶಗಳಲ್ಲಿ ಆಫ್ರಿಕಾ ಮುಂಚೂಣಿಯಲ್ಲಿದೆ. ಆಫ್ರಿಕಾ ಸೇರಿದಂತೆ ಮಲೇರಿಯಾದಿಂದ ತೀವ್ರವಾಗಿ ಬಾಧಿಸಲ್ಪಟ್ಟ ರಾಷ್ಟ್ರಗಳಿಗೆ ಭಾರತದ ಲಸಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಮ್ಮತಿಸಿದೆ ಎಂದು ಅವರು ಹೇಳಿದ್ದಾರೆ.
ಅವರ ಟ್ವೀಟ್‌ ಇಲ್ಲಿದೆ ನೋಡಿ…
A child dies from#malariaevery two minutes.One death is one too many.
🚨 Today, WHO recommends RTS,S, a groundbreaking malaria vaccine, to reduce child illness & deaths in areas with moderate and high malaria transmissionhttps://t.co/xSk58nTIV1#VaccinesWorkpic.twitter.com/mSECLtRhQs
— World Health Organization (WHO) (@WHO)October 6, 2021

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eighteen =
Remember me
