ದಾಮೋಹ್ (ಮಧ್ಯಪ್ರದೇಶ):​189 ಅಡಿ ಎತ್ತರದ ವಿಶ್ವದ ಅತಿ ದೊಡ್ಡ ಜೈನ ಮಂದಿರವು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಕುಂದಲ್‌ಪುರದಲ್ಲಿ ನಿರ್ಮಾಣವಾಗುತ್ತಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಕಬ್ಬಿಣ ಮತ್ತು ಸಿಮೆಂಟ್ ಬಳಸದೇ ಈ ದೇಗುಲವನ್ನು 16 ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಗುಜರಾತ್ ಮತ್ತು ರಾಜಸ್ಥಾನದ ಕೆಂಪು – ಹಳದಿ ಕಲ್ಲುಗಳಿಂದ ದೇವಾಲಯವನ್ನು ಕೆತ್ತಲಾಗಿದ್ದು, ಒಂದು ಕಲ್ಲನ್ನು ಇನ್ನೊಂದಕ್ಕೆ ಸಂಪರ್ಕಿಸಲು ವಿಶೇಷ ತಂತ್ರವನ್ನು ಸಹ ಬಳಸಲಾಗಿದೆ.
500 ಅಡಿ ಎತ್ತರದ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಈ ದೇವಾಲಯದ ಶಿಖರವು 189 ಅಡಿ ಎತ್ತರವಿದೆ. ಇದುವರೆಗೆ ನಾಗರ ಶೈಲಿಯಲ್ಲಿ ಇಷ್ಟು ಎತ್ತರವಾದ ದೇವಾಲಯ ಜಗತ್ತಿನಲ್ಲಿಯೇ ಇಲ್ಲ ಎನ್ನಲಾಗುತ್ತಿದೆ. 12 ಲಕ್ಷ ಕ್ಯೂಬಿಕ್ ಮೀಟರ್ ಕಲ್ಲುಗಳನ್ನು ಬಳಸಲಾಗಿದ್ದು, ಒಂದು ಸಾವಿರ ವರ್ಷಗಳಷ್ಟು ಹಳೆಯದಾದ ಬಡೇಬಾಬಾರವರ ಪ್ರತಿಮೆಯನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗುತ್ತಿದೆ.
ಇಲ್ಲಿಯ ಪ್ರಾಂಗಣದಲ್ಲಿ 5, 6ನೇ ಶತಮಾನದ 63 ದೇವಾಲಯಗಳಿವೆ. ಇಲ್ಲಿ 1008 ಆದಿನಾಥ ಭಗವಾನ್ ಅವರ 1,500 ವರ್ಷಗಳಷ್ಟು ಹಳೆಯದಾದ ಪ್ರತಿಮೆಗಳು ಇದ್ದು, ಅವರನ್ನು ಬಡೇ ಬಾಬಾ ಎಂದು ಕರೆಯಲಾಗುತ್ತದೆ. ಮುಖ್ಯ ದೇವಾಲಯದ ಸುತ್ತಲೂ ಬೃಹತ್ ಬೆಟ್ಟಗಳ ಮೇಲೆ ವಿವಿಧ ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಒಂದರಲ್ಲಿ ಮಾತಾ ರುಕ್ಮಣಿಯ ಕಲ್ಲಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಅಂದಹಾಗೆ ಇದನ್ನು ಅಕ್ಷರಧಾಮ ದೇವಾಲಯವನ್ನು ವಿನ್ಯಾಸಗೊಳಿಸಿದ ಸೋಂಪುರ ಸಹೋದರರು ದೇವಾಲಯದ ರೇಖಾಚಿತ್ರ ವಿನ್ಯಾಸವನ್ನು ಸಿದ್ಧಪಡಿಸಿದ್ದಾರೆ. ಈ ಜೈನ ಮಂದಿರ ನಿರ್ಮಾಣಕ್ಕೆ ಸುಮಾರು 600 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ ಈವರೆಗೆ ಸುಮಾರು 400 ಕೋಟಿ ರೂ.ನಲ್ಲಿ ಕಲ್ಲಿನಿಂದ ಮಾಡಿದ ಈ ದೇವಾಲಯವನ್ನು ದಿಲ್ವಾರಾ ಮತ್ತು ಖಜುರಾಹೋ ಮಾದರಿಯಲ್ಲಿ ಕೆತ್ತಲಾಗಿದೆ.
ತಾಜ್‌ ಮಹಲ್‌ ಪ್ರವೇಶಿಸಿದ ಹಿಜಾಬ್‌! ಅಲ್ಲಾಹು ಅಕ್ಬರ್‌ಗೆ ಪ್ರತಿಯಾಗಿ ಹನುಮಾನ್‌ ಚಾಲೀಸಾ ಪಠಣೆ…

ಕರಿಕಲ್ಲಿನ ಮೇಲೆ ಬಿಳಿರೇಖೆಯಲ್ಲಿ ಮೂಡಿತ್ತು ‘ಹಿಜಾಬ್‌’ ಭವಿಷ್ಯ: ನಿಜವಾಯ್ತಾ ಕಾಲಜ್ಞಾನಿಯ ಮಾತು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 2 =
Remember me
