ರೋಮ್:ಕೆಲವರಿಗೆ ಒಂದೊಂದು ವಿಷಯ, ವಸ್ತು, ವಾಹನಗಳ ಮೇಲೆ ವಿಪರೀತ ವ್ಯಾಮೋಹ. ಅದನ್ನು ಖರೀದಿ ಮಾಡಲು ಎಷ್ಟು ಬೆಲೆ ಬೇಕಾದರೂ ತೆರಲು ಸಿದ್ಧವಾಗಿರುತ್ತಾರೆ.
ಅಂಥದ್ದೇ ಒಂದು ಹುಚ್ಚು ಹಿಡಿಸಿಕೊಂಡಿರುವವರ ಜಗತ್ತಿನ ಶ್ರೀಮಂತ ಆಟಗಾರ ಎಂದೇ ಪ್ರಸಿದ್ಧಿ ಪಡೆದಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ. ಇವರು ಫುಟ್‌ಬಾಲ್‌ ಆಟಗಾರ. ಇವರಿಗೆ ಹುಚ್ಚು ಇರುವುದು ಕಾರಿನ ಖರೀದಿಯ ಮೇಲೆ.
ಹೌದು. ಹೊಸ ಹೊಸ ಕಾರು ಅದರಲ್ಲಿಯೂ ದುಬಾರಿ ಕಾರುಗಳನ್ನು ಕೊಳ್ಳುವುದು ಎಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಈ ಪ್ರೀತಿ ಅವರನ್ನು ಯಾವ ಮಟ್ಟಿಗೆ ಕೊಂಡಿಯ್ದಿದೆ ಎಂದರೆ ಇದೀಗ ಇವರು ವಿಶ್ವದ ಅತ್ಯಂತ ದುಬಾರಿ ಎನ್ನುವ ಕಾರನ್ನು ಖರೀದಿ ಮಾಡಿದ್ದಾರೆ!
ಹೌದು. ಬುಗಾಟಿ ಸಂಸ್ಥೆ ನಿರ್ಮಿಸಿರುವ 8.5 ದಶಲಕ್ಷ ಯುರೋ ಬೆಲೆಯ ಕಾರಿದು. ಭಾರತದ ರೂಪಾಯಿಗಳಲ್ಲಿ ಲೆಕ್ಕಾಚಾರ ಹಾಕುವುದಾದರೆ 75 ಕೋಟಿ ರೂಪಾಯಿ. ಇದು ವಿಶ್ವದಲ್ಲಿಯೇ ಅತ್ಯಂತ ದುಬಾರಿ ಕಾರು ಎನ್ನಲಾಗಿದೆ. ಇದರ ಹೆಸರು ಬುಗಾಟಿ ಲಾ ವೂಯೆಟ್ ನೊಯೀರ್.
ಕಳೆದ ವರ್ಷ ವಿನ್ಯಾಸ ಮಾಡಲಾದ ಈ ಕಾರನ್ನು ರೊನಾಲ್ಡೊ ಖರೀದಿಸಿದ್ದಾರೆ. ಹಾಗೆಂದು ಕಾರೇನು ಇಷ್ಟು ಬೇಗ ಅವರ ಕೈಗೆ ಸಿಕ್ಕಿ ಅವರು ರೌಂಡ್‌ ಹೊಡೆದುಕೊಂಡು ಬಂದಿದ್ದಾರೆ ಎಂದರೆ ಅದು ತಪ್ಪು. ಏಕೆಂದರೆ ಕಾರು ಇನ್ನೂ ಇವರ ಕೈ ಸೇರಿಲ್ಲ.
ಇದನ್ನೂ ಓದಿ:ಮಾಸ್ಕ್‌ ಧರಿಸಿಲ್ಲವೆಂದು ವಿಮಾನದಲ್ಲಿ ನಡೆಯಿತು ಮಾರಾಮಾರಿ- ವಿಡಿಯೋ ವೈರಲ್
ಏಕೆಂದರೆ ಕಾರಿನ ಇನ್ನೂ ಕೆಲ ಭಾಗಗಳನ್ನು ವಿನ್ಯಾಸ ಮಾಡಬೇಕಾಗಿರುವ ಕಾರಣ 2021ರಲ್ಲಿ ರೊನಾಲ್ಡೊ ಅವರಿಗೆ ಸಂಸ್ಥೆ ಕಾರನ್ನು ನೀಡಲಿದೆ. ಬುಗಾಟಿ ಕಂಪನಿಯ 110ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 10 ಕಾರುಗಳನ್ನು ಮಾತ್ರ ತಯಾರಿಸುತ್ತಿದ್ದು, ಅದರಲ್ಲಿ ಇದೂ ಒಂದು.
2019ರ ಜಿನೇವಾ ಮೋಟರ್ ಷೋನಲ್ಲಿ ಈ ಕಾರಿನ ಮಾದರಿಯನ್ನು ಕಂಪನಿ ಅನಾವರಣಗೊಳಿಸಿತ್ತು. ಈ ಕಾರು 8.0 ಲೀಟರ್ ಟರ್ಬೋಚಾರ್ಜ್ ಡಬ್ಲ್ಯೂ16 ಎಂಜಿನ್ ಹೊಂದಿದ್ದು ಗಂಟೆಗೆ 380 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಶೂನ್ಯದಿಂದ 60 ಕಿ.ಮೀ ವೇಗಕ್ಕೆ ಕೇವಲ 3 ಸೆಕೆಂಡ್‌ಗಳಲ್ಲಿ ಕ್ರಮಿಸುವ ಸಾಮರ್ಥ್ಯ ಈ ಕಾರಿಗಿದೆ ಎಂಬ ಮಾಹಿತಿಯನ್ನು ಕಂಪನಿ ನೀಡಿದೆ.
ಅಂದಹಾಗೆ ರೊನಾಲ್ಡೊ ಬಳಿ ಇದಾಗಲೇ ದುಬಾರಿ ಎನಿಸಿರುವ ಮರ್ಸಿಡಿಸ್ ಸಿ ಕ್ಲಾಸ್ ಸ್ಪೋರ್ಟ್ಸ್ ಕೂಪೆ, ರೋಲ್ಸ್ ರಾಯ್ಸ್ ಫ್ಯಾಂಥಮ್, ಫೆರಾರಿ 599 ಜಿಟಿಒ, ಲ್ಯಾಂಬೋರ್ಗಿನಿ ಅವೆಂಟಡರ್ ಎಲ್‍ಪಿ 700-4, ಆಸ್ಟನ್ ಮಾರ್ಟೀನ್ ಡಿಬಿ 9, ಮೆಕ್ಲಾರೆನ್ ಎಂಪಿ 4 12 ಸಿ ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್‌ನಂಥ ಕಾರುಗಳಿವೆ.
ಭಾರತದ ಟೆಕಿಗಳಿಗೆ ಬಿಗ್‌ ಶಾಕ್‌: ಅಮೆರಿಕದ ಅಧ್ಯಕ್ಷರಿಂದ ಮಹತ್ವದ ಆದೇಶಕ್ಕೆ ಸಹಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 5 =
Remember me
