ಕಾರವಾರ: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಜಿಲ್ಲೆಯ ಹೊನ್ನಾವರದ ಮಾಳಕೋಡ್ ಗ್ರಾಮದ ಬಾಲಕಿ ಚಿಂತನಾ ಹೆಗಡೆ ಅವರ ಯಕ್ಷಗಾನದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದ್ದು, ಅಪಾರ ಮೆಚ್ಚುಗೆ ಗಳಿಸಿದೆ.
‘ಹೆಜ್ಜೆ ಇಟ್ಟಿಹಳು ದ್ರೌಪದಿ ರಾಷ್ಟ್ರಪತಿಯ ಭವನದಲಿ’ ಎಂದು ಯಕ್ಷಗಾನದ ಶೈಲಿಯಲ್ಲಿ ಹಾಡನ್ನು ಹಾಡುವ ಮೂಲಕ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಕೋರಿದ್ದಾಳೆ. ಉಡುಪಿಯ ಅರವಿಂದ ಚಿಪ್ಳೂಣ್ಕರ್ ರಚಿಸಿದ ಗಾಯನ ಇದಾಗಿದೆ.
‘ಹೆಜ್ಜೆ ಇಟ್ಟಿಹಳು ದ್ರೌಪದಿ..ರಾಷ್ಟ್ರಪತಿಯ ಭವನದಲ್ಲಿ..ಭಾರತ ಮಹಾಭಾರತವಾಗಲಿ..ಧರ್ಮರಾಯನ ನ್ಯಾಯಾಂಗ ಸಂವಿಧಾನ ವಿಹುದು..ಭೀಮ ಬಲದ ಸೇನಾಬಲ ವಿಹುದು’ ಎಂದು ಬಡಗು ತಿಟ್ಟು ಶೈಲಿಯಲ್ಲಿ ಚಿಂತನಾ ಹಾಡಿದ್ದಾಳೆ.
ಮಹಾಭಾರತ ಕಥೆಯ ಪ್ರಧಾನ ಪಾತ್ರ ದ್ರೌಪದಿಯ ಹೆಸರನ್ನು ಹೊಂದಿರುವ ನೂತನ ರಾಷ್ಟ್ರಪತಿಯನ್ನು ಮಹಾಭಾರತ ಪಾತ್ರಗಳಿಗೆ ಅನ್ವಯವಾಗುವಂತೆ ರಾಷ್ಟ್ರಪತಿ ಭವನದೊಳಗೆ ಸ್ವಾಗತ ಕೋರುವಂತೆ ಸಾಹಿತ್ಯ ರಚಿಸಲಾಗಿದೆ. ಮಹಾಭಾರತದ ಪಾತ್ರಗಳಿಗೆ ಅನ್ವಯಿಸಿರುವ ಈ ಸಾಹಿತ್ಯವು ಸದ್ಯ ಪರಿಹಾರವಾಗಬೇಕಾದ ಸಮಸ್ಯೆಗಳ ಬಗ್ಗೆಯೂ ಸೂಚ್ಯವಾಗಿ ರಾಷ್ಟ್ರಪತಿಯವರಿಗೆ ವಿನಂತಿ ಮಾಡುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ:

ದೇಶದ ಮೊದಲ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು: ಸಿಜೆಐ ಪ್ರಮಾಣ ವಚನ ಬೋಧನೆ

VIDEO: ಇಂದು ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು- ಸಂಘರ್ಷದಿಂದ ಶಿಖರದವರೆಗೆ… ಪುಸ್ತಕ ಬರೆದ 13ರ ಬಾಲಕಿ,

Sign in to your account
Please enter an answer in digits:twenty − nine =
Remember me
