ಸಿರೋಹಿ (ರಾಜಸ್ಥಾನ) :“ನಾವು ಸಾಯುವವರೆಗೂ ನೆಹರೂ ಹಾಗೂ ಗಾಂಧಿ ಕುಟುಂಬದ ಗುಲಾಮರೆ, ಏನಿವಾಗ ಎಂದು ರಾಜಸ್ಥಾನದ ಸಿರೋಹಿ ಶಾಸಕ ಸನ್ಯಾಮ್ ಲೋಧಾ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭಾ ಕಲಾಪದಲ್ಲಿ ಅವರು, ನಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು ಮತ್ತು ಕೊನೆಯ ಉಸಿರು ಇರುವವರೆಗೂ ಅವರ ಗುಲಾಮರಾಗಿಯೇ ಇರುತ್ತೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಅನುಭವಿಸಿದ ಬಳಿಕ ನಾಯಕತ್ವದ ಕುರಿತಂತೆ ಪಕ್ಷದಲ್ಲಿಯೇ ಭಿನ್ನ ನಿಲುವು ವ್ಯಕ್ತವಾಗುತ್ತಿದ್ದಂತೆಯೇ, ಇದರ ಚರ್ಚೆಯ ವೇಳೆ ಶಾಸಕರು ಈ ಮಾತನ್ನು ಹೇಳಿದ್ದಾರೆ.
ನೆಹರು-ಗಾಂಧಿ ಕುಟುಂಬವು ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದೆ. ಉತ್ತಮ ಆಡಳಿತವನ್ನು ನೀಡಿದೆ. ಹಾಗಾಗಿ ನಾವು ಕೊನೆ ಉಸಿರಿರುವವರೆಗೂ ಆ ಕುಟುಂಬದ ಗುಲಾಮರಾಗಿಯೇ ಇರಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಅಂದಹಾಗೆ ಸನ್ಯಾಮ್ ಲೋಧಾ ಅವರು ಶಾಸಕರ ಜತೆಗೆ, ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರೂ ಹೌದು.
ಲೋಧಾ ಇವರ ಮಾತಿಗೆ ಬಿಜೆಪಿ ಭಾರಿ ಟೀಕೆ ವ್ಯಕ್ತಪಡಿಸಿದೆ. ಗುಲಾಮರಾಗಿರುವುದಕ್ಕೆ ನಿಮಗೆ ಅಭಿನಂದನೆಗಳು. ಗುಲಾಮರಾಗಿರುವ ಇವರು, ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ?. ಗುಲಾಮರು ತಮ್ಮ ಮನಸ್ಪೂರ್ತಿಯಾಗಿ ನಡೆದುಕೊಳ್ಳಲು, ಮಾತನಾಡಲು ಸಾಧ್ಯವಿಲ್ಲ, ಅದನ್ನು ಇವರು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ರಾಜೇಂದ್ರ ರಾಥೋಡ್ ಟೀಕಿಸಿದ್ದಾರೆ.
ಕೈಲಾಸದಲ್ಲಿಯೂ ನಿತ್ಯಾನಂದ ಲೈಂಗಿಕ ದೌರ್ಜನ್ಯ? ವಿದೇಶಿ ಶಿಷ್ಯೆಯಿಂದ ಮೇಲ್​ ಮೂಲಕ ದೂರು ದಾಖಲು!

ಹಿಂದೂಗಳಿಂದ ಮೀನು ಖರೀದಿಸಬೇಡಿ ಎಂದಾಗ ಎಲ್ಲಿ ಹೋಗಿತ್ತು ಈ ಸಾಮರಸ್ಯ? ಗರಂ ಆಗಿದೆ ಜಾಲತಾಣ

The Kashmir Files: ಉಗ್ರರ ಕಣ್ಣುತಪ್ಪಿಸಿ ಅಕ್ಕಿ ಡ್ರಮ್​ನಲ್ಲಿ ಬಚ್ಚಿಟ್ಟುಕೊಂಡ ನನ್ನ ಅಣ್ಣನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × two =
Remember me
