ಲಖನೌ: ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಬೆಳಗ್ಗಿನಿಂದಲೇ ಆರಂಭವಾಗಿದೆ. ಕೊನೆಯ ಕ್ಷಣದವರೆಗೂ ಮತದಾರರನ್ನು ಓಲೈಸಲು ಎಲ್ಲಾ ಪಕ್ಷಗಳೂ ಸರ್ವ ಪ್ರಯತ್ನ ಮಾಡಿವೆ. ಇದರ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಡುರಾತ್ರಿ ವಿಡಿಯೋ ಮೂಲಕ ರಾಜ್ಯದ ಜನತೆಗೆ ಸಂದೇಶವೊಂದನ್ನು ನೀಡಿದ್ದಾರೆ.
ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಸುಮಾರು 6 ನಿಮಿಷಗಳ ವಿಡಿಯೋ ಮಾಡಿ ಅದನ್ನು ಅವರು ನಸುಕಿನ 3 ಗಂಟೆಗೆ ಶೇರ್‌ ಮಾಡಿದ್ದಾರೆ.
‘ಮತದಾರರೇ ಗಮನಿಸಿ… ಇಂದು ಮೊದಲ ಹಂತದ ಮತದಾನ ನಡೆಯಲಿದೆ. ನೀವೇನಾದರೂ ಇಂದು ಮತ ಹಾಕುವಲ್ಲಿ ಸ್ವಲ್ಪವೇ ಎಡವಿದರೂ ನಮ್ಮ ಉತ್ತರ ಪ್ರದೇಶ ರಾಜ್ಯವೂ ಕೂಡ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳದಂತೆ ಆಗುತ್ತದೆ. ನಮ್ಮದು ಡಬಲ್​ ಎಂಜಿನ್​ ಸರ್ಕಾರ ಎಂದೇ ಎಲ್ಲರೂ ಹೇಳುವುದು ನಿಜವೇ. ಕೇಂದ್ರದಲ್ಲಿಯೂ ನಮ್ಮದೇ ಸರ್ಕಾರವಿದೆ, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಜನರಿಗೆ ಎಲ್ಲ ಅನುಕೂಲಗಳನ್ನೂ ಮಾಡಿಕೊಡಲು ಬದ್ಧತೆಯನ್ನು ಹೊಂದಿವೆ. ಕಳೆದ ಐದು ವರ್ಷಗಳಲ್ಲಿ ಜನರಿಗಾಗಿ ತುಂಬ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ನೀವೇನಾದರೂ ತಪ್ಪು ಮತ ಚಲಾಯಿಸಿದರೆ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳದಂತೆ ನಮ್ಮ ರಾಜ್ಯವೂ ಆಗಲು ತುಂಬ ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಯೋಗಿ ಹೇಳಿದ್ದಾರೆ.
ನೀವು ಮತ ಚಲಾಯಿಸುವಾಗ ಸ್ವಲ್ಪವೇ ಎಡವಟ್ಟು ಮಾಡಿದರೂ, ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಕೆಲಸ ಮಾಡಿದ ಶ್ರಮಿಕರ ಶ್ರಮ ವ್ಯರ್ಥವಾಗುತ್ತದೆ. ಈ ಐದು ವರ್ಷದಲ್ಲಿ ನಾನು ಪಟ್ಟ ಶ್ರಮಕ್ಕೆ ನಿಮ್ಮ ಒಂದು ಮತ ಆಶೀರ್ವಾದ ಆಗಲಿದೆ. ಮುಂದಿನ ದಿನಗಳಲ್ಲಿ ಕೂಡ ನೀವು ಭಯಮುಕ್ತರಾಗಿ ಜೀವನ ನಡೆಸಲು ಅದು ಭರವಸೆಯೂ ಹೌದು ಎಂದಿದ್ದಾರೆ ಯೋಗಿ ಆದಿತ್ಯನಾಥ.
ಅಂದಹಾಗೆ 403 ವಿಧಾನಸಭೆ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ, ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ.
ಇಲ್ಲಿದೆ ನೋಡಿ ಯೋಗಿ ಆದಿತ್ಯನಾಥ ಅವರ ವಿಡಿಯೋ:
उत्तर प्रदेश के मेरे मतदाता भाइयों एवं बहनों…pic.twitter.com/voB37uA3uV
— Yogi Adityanath (@myogiadityanath)February 9, 2022

ಸ್ನಾನಕ್ಕೆ ಹೋದ ಮದುಮಗಳು ಶವವಾಗಿ ಹೊರಬಂದಳು! ಮದುವೆ ಮನೆಯನ್ನು ಸ್ಮಶಾನವಾಗಿಸಿದ ಗ್ಯಾಸ್‌ ಗೀಸರ್‌

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಹತ್ತೇ ದಿನದಲ್ಲಿ ರೈತರ ಸಾಲ, ವಿದ್ಯುತ್‌ ಬಿಲ್‌ ಮನ್ನಾ, ಪತ್ರಕರ್ತರ ಕೇಸ್‌ ವಾಪಸ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
