ಲಖನೌ:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಟ ಅಕ್ಷಯ್​ ಕುಮಾರ್​ ನಿನ್ನೆ ಭೇಟಿಯಾಗಿದ್ದಾರೆ. ಅಧಿಕೃತ ಕಾರ್ಯದ ನಿಮಿತ್ತ ಮುಂಬೈಗೆ ಬಂದಿರುವ ಯೋಗಿ ಅದಿತ್ಯನಾಥ್, ಮುಂಬೈನ ಖಾಸಗಿ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿಗೆ ಅಕ್ಷಯ್​ಕುಮಾರ್​ ತೆರಳಿ ಮಾತುಕತೆ ನಡೆಸಿದ್ದಾರೆ.
ಯೋಗಿ ಆದಿತ್ಯನಾಥ ಅವರು ಬಾಲಿವುಡ್ಡನ್ನು ಮುಂಬೈಯಿಂದ ಉತ್ತರಪ್ರದೇಶಕ್ಕೆ ಶಿಫ್ಟ್​ ಮಾಡೋ ಹುನ್ನಾರ ನಡೆಸಿರುವುದಾಗಿ ಕಾಂಗ್ರೆಸ್​ ಆರೋಪಿಸುತ್ತಿರುವ ಬೆನ್ನಲ್ಲೇ ಇದೀಗ ಈ ಭೇಟಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಯೋಗಿ ಮತ್ತು ಅಕ್ಷಯ್​ ಅವರು ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತಿರುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಖುದ್ದು ಯೋಗಿಯವರೇ ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಭಾರತದ ಜನಪ್ರಿಯ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾದೆ. ಅವರೊಂದಿಗೆ ಚಿತ್ರರಂಗದ ವಿವಿಧ ಆಯಾಮಾಗಳ ಕುರಿತಾಗಿ ಒಂದು ಅತ್ಯುತ್ತಮ ಚರ್ಚೆಯನ್ನು ನಡೆಸಿದೆ. ಕೆಲಸದ ಬಗೆಗಿನ ಅವರ ತಿಳಿವಳಿಕೆ, ಸಮರ್ಪಣಭಾವ ಮತ್ತು ರಚನಾತ್ಮಕತೆ ಇಂದಿನ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಲವ್ ಜಿಹಾದಿಗಳ​ ನಂತರ ಇದೀಗ ವಿವಾಹಿತರಿಗೆ ಮತ್ತೊಂದು ಶಾಕ್​ ನೀಡಿದ ಯೋಗಿ ಸರ್ಕಾರ
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಹಲವಾರು ರೀತಿಯಲ್ಲಿ ಸುದ್ದಿಯನ್ನು ಮಾಡುತ್ತಿದೆ.ಈ ಭೇಟಿಯಲ್ಲಿ ಚಿತ್ರರಂಗದ ಅನೇಕ ವಿಚಾರಗಳ ಕುರಿತು ಯೋಗಿ ಆದಿತ್ಯನಾಥ್‌ ಜೊತೆ ಅಕ್ಷಯ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇಂದು ಕೂಡ ಆದಿತ್ಯನಾಥ ಅವರು ಮುಂಬೈನಲ್ಲೇ ಇದ್ದು, ಮತ್ತೊಂದಿಷ್ಟು ಬಾಲಿವುಡ್‌ ಸೆಲೆಬ್ರಿಟಿಗಳನ್ನು ಭೇಟಿಯಾಗುವ ಸಾಧ್ಯತೆಗಳಿವೆ.
ನೋಯ್ಡಾ-ಗ್ರೇಟರ್ ನೋಯ್ಡಾ ಹಾಗೂ ಗೌತಮ್ ಬುದ್ಧ ನಗರ ಜಿಲ್ಲೆಗೆ ಹೊಂದಿಕೊಂಡಂತೆ ದೇಶದ ಅತ್ಯಂತ ದೊಡ್ಡದಾದ, ಸುಂದರವಾದ ಫಿಲ್ಮ್ ಸಿಟಿಯನ್ನು ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡುವ ಚರ್ಚೆ ಎಲ್ಲೆಡೆ ಹರಿದಾಡಿತ್ತು.
‘ಉತ್ತರ ಪ್ರದೇಶವು ಏಳು ರಾಜ್ಯಗಳಿಗೆ ಹೊಂದಿಕೊಂಡ ದೇಶದ ಏಕೈಕ ರಾಜ್ಯವಾಗಿದೆ. ಇಡೀ ದೇಶಕ್ಕೆ ಇದೊಂದು ಸಾಂಸ್ಕೃತಿಕ ಕೇಂದ್ರವಾಗಿದೆ. ಜಗತ್ತಿನ ಪುರಾತನ ನಗರ ವಾರಣಾಸಿ, ಶ್ರೀರಾಮ ಜನಿಸಿದ ಅಯೋಧ್ಯ ಇರುವುದು ಕೂಡ ಇದೇ ರಾಜ್ಯದಲ್ಲಿ. ಈ ಹೊಸ ಫಿಲ್ಮ್‌ ಸಿಟಿಯ ನಿರ್ಮಾಣಕ್ಕಾಗಿ ಐತಿಹಾಸಿಕ ನಗರ ಹಸ್ತಿನಾಪುರದಲ್ಲಿ ಜಾಗ ಗುರುತಿಸಲಾಗಿದೆ. ಈ ರಾಷ್ಟ್ರಕ್ಕೆ ಹಸ್ತಿನಾಪುರದ ಕೊಡುಗೆ ಅಮೋಘವಾದದ್ದು. ಗಂಗಾ-ಯುಮುನಾ ನದಿಗಳ ಸಮೀಪ ಫಿಲ್ಮ್‌ ಸಿಟಿ ಸುಂದರವಾದ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ’ ಎಂದಿದ್ದರು. ಇದೀಗ ಅದರ ಪ್ರಕ್ರಿಯೆ ಶುರುವಾಗಿದೆ. ಈ ವಿಚಾರವಾಗಿ ಅಕ್ಷಯ್ ಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಫಿಲ್ಮ್ ಸಿಟಿ ಯೋಜನೆಗೆ ಆಕಾರ ನೀಡುವಂತೆ ಬಾಲಿವುಡ್ ಖ್ಯಾತ ನಾಮರು ಮತ್ತು ಉದ್ಯಮಿಗಳನ್ನು ಭೇಟಿಯಾಗುತ್ತಿದ್ದಾರೆ. ಈಗಾಗಲೇ ಫಿಲ್ಮ್ ಸಿಟಿ ಯೋಜನೆ ಪ್ರಾರಂಭ ಮಾಡಿರುವ ಸಿಎಂ, ಈ ವಿಚಾರವಾಗಿ ಅನೇಕರ ಜತೆ ಸಭೆ ಶುರು ಮಾಡಿದ್ದಾರೆ.
ಅರ್ಚಕರು ಅರೆಬೆತ್ತಲೆಯಲ್ಲಿರ್ತಾರೆ- ಭಕ್ತರಿಗೇಕೆ ಸಂಪ್ರದಾಯದ ಉಡುಗೆ ಎಂದು ಪ್ರಶ್ನಿಸಿದ ಹೋರಾಟಗಾರ್ತಿ!

ಲವ್​ ಜಿಹಾದ್​- ಪ್ರೇಯಸಿ ‘ಮಿಸ್ಸಿಂಗ್’: ಹೈಕೋರ್ಟ್​ಗೆ​ ಹೋದ ಮುಸ್ಲಿಂ ಯುವಕನಿಗೆ ಸಿಕ್ಕೇ ಬಿಡ್ತು ಜಯ

ಕಂಗನಾ ವಿರುದ್ಧ ಅಜ್ಜಿ ಕಿಡಿಕಿಡಿ- ಟ್ವೀಟ್​ ಡಿಲೀಟ್​ ಬಳಿಕವೂ ನಟಿಗೆ ಸಿಗಲಿಲ್ಲ ‘ಮುಕ್ತಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 4 =
Remember me
