ಮುಂಬೈ:ಮಹಾರಾಷ್ಟ್ರ ಸರ್ಕಾರ ಅಲ್ಲೋಲ ಕಲ್ಲೋಲ ಆಗಿರುವ ನಡುವೆಯೇ ಒಂಟಿಯಾಗಿರುವ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಇದೀಗ ಹೊಸ ಪ್ಲ್ಯಾನ್​ ಮಾಡಿದ್ದಾರೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ನೀಡಲಾಗಿದ್ದ ನೊಟೀಸ್​ಗೆ ಸುಪ್ರೀಂಕೋರ್ಟ್​ ತಾತ್ಕಾಲಿಕ ತಡೆ ನೀಡುವ ಮೂಲಕ ಠಾಕ್ರೆಯವರಿಗೆ ಮತ್ತಷ್ಟು ಆಘಾತವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೆಬೆಲ್​ಗಳಿಗೆ ಮನವಿ ಮಾಡಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನೆಯ ಶಾಸಕರಿಗೆ ಮನವಿ ಮಾಡಿಕೊಂಡಿರುವ ಠಾಕ್ರೆ, “ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇನೆ. ಅಂತರಂಗದಿಂದ ನೀವಿನ್ನೂ ಶಿವಸೇನೆಯಲ್ಲಿ ಇದ್ದೀರಿ. ಇಲ್ಲಿ ಬಂದು ಚರ್ಚಿಸಿ, ಜತೆಯಲ್ಲಿಯೇ ಕುಳಿತು ಮಾತನಾಡೋಣ’ ಎಂದಿದ್ದಾರೆ.
“ಗುವಾಹಟಿಯಲ್ಲಿರುವ ಅನೇಕ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಿಮ್ಮ ಕುಟುಂಬದ ಕೆಲ ಸದಸ್ಯರೂ ನನ್ನ ಸಂಪರ್ಕದಲ್ಲಿದ್ದು, ನಿಮ್ಮ ಭಾವನೆಗಳ ಬಗ್ಗೆ ತಿಳಿಸಿದ್ದಾರೆ. ನಿಮ್ಮಲ್ಲಿ ಏನೇ ಗೊಂದಲ ಇದ್ದರೂ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ಒಟ್ಟಿಗೆ ಕುಳಿತು ದಾರಿ ಹುಡುಕೋಣ. ನನ್ನ ಮುಂದೆ ಬಂದು ಮಾತನಾಡಿದರೆ ಖಂಡಿತವಾಗಿ ದಾರಿ ಸಿಗಲಿದೆ ಎಂದು ಮನವಿ ಮಾಡಿದ್ದಾರೆ.
ಶಿವಸೇನೆ ನಿಮ್ಮೆಲ್ಲರಿಗೂ ಕೊಟ್ಟಷ್ಟು ಗೌರವ ಇನ್ಯಾವ ಪಕ್ಷದಲ್ಲೂ ದಕ್ಕುವುದಿಲ್ಲ, ಇನ್ನೂ ತಡವಾಗಿಲ್ಲ. ಬಂದು ನನ್ನ ಮುಂದೆ ಕುಳಿತುಕೊಳ್ಳಿ. ಮುಂಬೈಗೆ ಬನ್ನಿ. ಮಾತನಾಡೋಣ ಎಂದಿದ್ದಾರೆ.
‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಚೆಸ್​​ ಆಡಿ ಸಮಯ ಕಳೆಯುತ್ತಿದ್ದಾರೆ ರೆಬೆಲ್​ ಶಾಸಕರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − ten =
Remember me
