ಹೈದರಾಬಾದ್:ಶಸ್ತ್ರಾಸ್ತ್ರಗಳನ್ನು ಹಿಡಿದು ಒಬ್ಬ ಕಳ್ಳ ನೀವೊಬ್ಬರೇ ಇರುವಾಗ ಎದುರಿಗೆ ಬಂದ ಎಂದಿಟ್ಟುಕೊಳ್ಳಿ, ಏನು ಮಾಡಬಹುದು? ಇದನ್ನು ಕೇಳಿದರೇನೇ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ? ಅದರಲ್ಲಿಯೂ ಹೆಣ್ಣೊಬ್ಬಳು ಮನೆಯಲ್ಲಿ ಒಬ್ಬಳೇ ಇರುವಾಗ ಕಳ್ಳನೊಬ್ಬ ನುಗ್ಗಿದರೆ ಆಕೆಯ ಸ್ಥಿತಿಯನ್ನು ಕಲ್ಪನೆ ಮಾಡಿಕೊಳ್ಳುವುದೂ ಕಷ್ಟವೇ!
ಆದರೆ ಫೋಟೋದಲ್ಲಿ ಕಾಣಿಸುತ್ತಿರುವ ಹೈದರಾಬಾದ್​ನ ಈ ಗಟ್ಟಿಗಿತ್ತಿ ಗೃಹಿಣಿಯ ಶೌರ್ಯದ ಕಥೆ ಕೇಳಿದರೆ ಎಂಥವರೂ ತಲೆದೂಗಲೇಬೇಕು. ಕಳ್ಳ ಕಣ್ಣಿಗೆ ಖಾರದ ಪುಡಿ ಎರಚಿದರೂ, ಆತನನ್ನು ಹಿಡಿಯುವ ರಭಸದಲ್ಲಿ ಜಾರಿ ಬಿದ್ದು ಕಾಲಿಗೆ ಏಟಾದರೂ ಬಿಡದೇ ಈಕೆ ಕಳ್ಳನನ್ನೇ ಸೋಲಿಸಿದ್ದಾರೆ ಎಂದರೆ ನಂಬುವುದೂ ಕಷ್ಟ ಅಲ್ಲವೆ?
ಇದು ಗೃಹಿಣಿ ಸಿರೀಶಾ ಅವರ ಕಥೆ. ಸೂರ್ಯಪೇಟೆ ಜಿಲ್ಲೆ ಮೋಟೆ ತಾಲೂಕಿನ ಅಪ್ಪಣ್ಣಗುಡೆಂ ಗ್ರಾಮದ ಬಾಲಾಜಿನಗರದಲ್ಲಿ ವಾಸಿಸುತ್ತಿದ್ದಾರೆ ಇವರು. ಆಗಿದ್ದೇನೆಂದರೆ ಇವರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಕ್ಕದ ಇನ್ನೆರಡು ಮನೆಗಳು ಬಾಡಿಗೆಗೆ ಇವೆ ಎಂದು ಮಾಲೀಕರು ಬೋರ್ಡ್​ ಹಾಕಿದ್ದರು. ಇದೇ ನೆಪ ಮಾಡಿಕೊಂಡು ಬಂದಿದ್ದಾನೆ ಕಳ್ಳ.
ಮನೆಯನ್ನು ತಾನು ನೋಡಬೇಕು ಎಂದಿದ್ದಾನೆ. ಆ ಸಮಯದಲ್ಲಿ ಮಾಲೀಕರು ಬೇರೆ ಕಡೆ ಹೋಗಿದ್ದರಿಂದ ಸಿರೀಶಾ ಅವರು ಮಾಲೀಕರು ಇಲ್ಲ ಎಂದು ಆತನಿಗೆ ಹೇಳಿದ್ದಾರೆ. ಆಗ ಆ ಕಳ್ಳ, ನಾನು ಇಲ್ಲಿರುವ ನಂಬರ್​ ಪಡೆದು ಮಾಲೀಕರಿಗೆ ಕರೆ ಮಾಡಿದ್ದೇನೆ. ಅವರು ನೀವು ಮನೆ ತೋರಿಸುತ್ತೀರಿ ಎಂದಿದ್ದಾರೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಸಿರೀಶಾ ತಮ್ಮ ಬಳಿ ಮಾಲೀಕರು ಕೊಟ್ಟಿರುವ ಕೀಲಿಯಿಂದ ಮನೆ ತೆರೆದು ತೋರಿಸಿದ್ದಾರೆ, ಇನ್ನೊಂದು ಮನೆ ತೋರಿಸುವಂತೆ ಕಳ್ಳ ಹೇಳಿದ್ದಾನೆ. ಆಗ ಇನ್ನೊಂದು ಮನೆಯ ಬಾಗಿಲು ತೆರೆಯಬೇಕು ಎನ್ನುವಷ್ಟರಲ್ಲಿ ಕಳ್ಳ ಸಿರೀಶಾ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಅವರ ಕೊರಳಿನಲ್ಲಿದ್ದ 30 ಗ್ರಾಂ ಬಂಗಾರದ ತಾಳಿಯನ್ನು ಕಿತ್ತುಕೊಂಡು ಕೆಳಗೆ ಓಡಿ ಹೋಗಿದ್ದಾನೆ.
ಕಣ್ಣು ಖಾರದ ಪುಡಿಯಿಂದ ಉರಿಯುತ್ತಿದ್ದರೂ ಅದನ್ನು ಉಜ್ಜಿಕೊಂಡು ಕಳ್ಳನ ಬೆನ್ನಟ್ಟಿದ್ದಾರೆ ಸಿರೀಶಾ. ಇದು ಮೊದಲ ಮಹಡಿಯಾಗಿದ್ದರಿಂದ ಕಳ್ಳ ಕೆಳಕ್ಕೆ ಇಳಿದು ಓಡಿದ್ದಾನೆ, ಆತನ ಬೆನ್ನು ಬಿಡದ ಸಿರೀಶಾ ಓಡುವಾಗ ಆಯತಪ್ಪಿ ಬಿದ್ದು ಕಾಲಿಗೆ ಗಾಯಮಾಡಿಕೊಂಡಿದ್ದಾರೆ.
ಆದರೂ ಬಿಡದ ಆಕೆ, ಕಳ್ಳ ಬೈಕ್​ ಶುರು ಮಾಡಿದಾಗ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಕಳ್ಳ ಸುಮಅರು ಹತ್ತು ಮೀಟರ್​ವರೆಗೂ ಬೈಕ್​ನ್ನು ಓಡಿಸಿಕೊಂಡು ಹೋಗಿದ್ದಾನೆ. ಆದರೂ ಸಿರೀಶಾ ತಮ್ಮ ಪಟ್ಟು ಬಿಡಲಿಲ್ಲ. ಇದರಿಂದ ಕಳ್ಳ ಬೈಕ್​ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಿದ್ದಿದ್ದಾನೆ. ಇದೇ ವೇಳೆ ಸಿರೀಶಾ ಜೋರಾಗಿ ಕೂಗಿಕೊಂಡಿದ್ದರಿಂದ ಇಬ್ಬರು ಸ್ಥಳೀಯ ಯುವಕರು ಬಂದು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊದಲೇ ಬಿದ್ದು ಏಟು ಮಾಡಿಕೊಂಡಿದ್ದ ಸಿರೀಶಾ ಅವರು ಬೈಕ್ ಎಳೆದಿದ್ದರಿಂದ ಮೊಣಕಾಲುಗಳಿಗೂ ಗಾಯವಾಗಿದೆ. ಪೊಲೀಸರು ಕಳ್ಳನಿಂದ ಚಿನ್ನದ ಸರ ವಶಪಡಿಸಿಕೊಂಡು ಸಿರೀಶಾಗೆ ನೀಡಿದ್ದಾರೆ. ಆರೋಪಿಯಿಂದ ಬೈಕ್ ಹಾಗೂ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತೂ ಸಿರೀಶಾ ಅವರು ಈಗ ಭಾರಿ ಪ್ರಸಿದ್ಧಿ ಪಡೆದು ಎಲ್ಲರೂ ಅವರ ಸಾಹಸಕ್ಕೆ ತಲೆದೂಗುತ್ತಿದ್ದಾರೆ(ಏಜೆನ್ಸೀಸ್​)
ಗುಪ್ತಾಂಗದಲ್ಲಿ ರಕ್ರಸ್ರಾವ: ಅರಿಯದೇ ದಂತ ವೈದ್ಯರ ಬಳಿ ಹೋದ ಗಗನಸಖಿ! ಮುಂದಾದದ್ದು ಭಾರಿ ದುರಂತ

VIDEO: ಬ್ಯಾರಿಕೇಡ್​ ಜಿಗಿದು ಹೋದ ಪ್ರಿಯಾಂಕಾ- ರಾಹುಲ್​ ಗಾಂಧಿ ಬಳಿಕ ಸಹೋದರಿಯೂ ಪೊಲೀಸರ ವಶಕ್ಕೆ

ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ, ದಾವಣಗೆರೆಯ ಟವೆಲ್, ಬೀದರ್​ನ ರಗ್ಗು; ಕಲಬುರಗಿಯ ಶಾಲು, ಶಿವಮೊಗ್ಗದ ಶರ್ಟ್, ಹಾವೇರಿಯ ಕರ್ಚಿಫ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
