ತಿರುವನಂತಪುರ:ಕುಡಿದ ಅಮಲಿನಲ್ಲಿ ಕೊಲೆ ಮಾಡುವುದು, ಮಾರಣಾಂತಿಕ ಹಲ್ಲೆ ಮಾಡುವುದು ಮಾಮೂಲು. ಆದರೆ ಇಲ್ಲೊಬ್ಬ ವ್ಯಕ್ತಿ ಇನ್ನೊಬ್ಬನ ಮರ್ಮಾಂಗವನ್ನೇ ಬಾಯಿಯಿಂದ ಕಚ್ಚಿ ಕಟ್​ ಮಾಡಿದ್ದಾನೆ.
ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಕೇರಳದ ಕುನ್ನಾಥುರನ ಬಾರ್​ನಲ್ಲಿ. ಕುಡಿದ ಅಮಲಿನಲ್ಲಿ ಗಲಾಟೆ ವೇಳೆ ಮರ್ಮಾಂಗವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ.
ಇಂಥದ್ದೊಂದು ಕೃತ್ಯ ಎಸಗಿದವರು 28 ವರ್ಷದ ಷರೀಫ್​ ಎಂಬಾತ. ಈತನ ಈ ಕೃತ್ಯಕ್ಕೆ ಬಲಿಯಾದವ 55 ವರ್ಷದ ಸುಲೇಮಾನ್.ಷರೀಫ್ ಪೆರುಂಬಾದಪ್ಪು ನಿವಾಸಿಯಾಗಿದ್ದು, ಸುಲೇಮಾನ್ ಪುನ್ನುಕಾವುನಲ್ಲಿ ವಾಸವಾಗಿದ್ದರು. ಇಬ್ಬರೂ ಬಾರ್​ಗೆ ಬೇರೆ ಬೇರೆ ವಾಹನಗಳಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಷರೀಫ್ ಆಟೋ ರಸ್ತೆಯಲ್ಲಿ ಸುಲೇಮಾನ್​ನ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಗಲಾಟೆ ನಡೆದಿತ್ತು. ಆ ಸಮಯದಲ್ಲಿ ನೆತ್ತಿಗೇರಿದ್ದ ಸಿಟ್ಟು ಬಾರ್​ಗೆ ಹೋಗಿ ಇಬ್ಬರೂ ಕಂಠಪೂರ್ತಿ ಕುಡಿದ ಮೇಲೆ ಈ ರೀತಿ ಕೃತ್ಯದಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರ ಜಗಳ ಬಿಡಿಸಲು ಹೋದ ಬಾರ್ ಸಿಬ್ಬಂದಿಯ ಮೇಲೆಯೂ ಷರೀಫ್ ಹಲ್ಲೆ ನಡೆಸಿದ್ದಾನೆ. ಕೊನೆಗೆ ಬಾರ್ ಸಿಬ್ಬಂದಿ ಗ್ರಾಹಕರ ನೆರವಿಬನಿಂದ ಷರೀಫ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ, ಸುಲೇಮಾನ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಸುಲೇಮಾನ್​ನನ್ನು ತ್ರಿಶೂರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ತುಂಡಾದ ಮರ್ಮಾಂಗವನ್ನ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತ್ಯಕ್ರಿಯೆ ಮುಗಿಸಿ ಬರುವಾಗ ಭೀಕರ ಅಪಘಾತ: 6 ಮಂದಿ ಸ್ಥಳದಲ್ಲೇ ಸಾವು

ಪತ್ನಿ, ಲವರ್‌ ಮಧ್ಯೆ ಸಿಲುಕಿ ಹೈರಾಣಾಗಿದ್ದೇನೆ, ಇಬ್ಬರೂ ಬೇಕು… ಏನು ಮಾಡಲಿ?

ಗೌರಿ, ಕಲ್ಬುರ್ಗಿಯಂತೆ ನನ್ನ ಹತ್ಯೆ: ವಕೀಲೆಯಿಂದ ಮುಖಕ್ಕೆ ಮಸಿ ಬಳಿಸಿಕೊಂಡ ಭಗವಾನ್​ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 13 =
Remember me
