ಸರಾಯಿ ಅಕಿಲ್ (ಉತ್ತರ ಪ್ರದೇಶ) :ಉಚಿತವಾಗಿ ವಿದ್ಯುತ್​ ಸಂಪರ್ಕ ಹೊಂದಿದ ವ್ಯಕ್ತಿಯೊಬ್ಬ, ತನಗೆ ಬಿಲ್​ ಬಂದದ್ದನ್ನು ಕಂಡು ರೊಚ್ಚಿಗೆದ್ದು ವಿದ್ಯುತ್​ ಕಂಬವನ್ನೇ ಏರಿ ಕುಳಿತ ಘಟನೆ ಉತ್ತರ ಪ್ರದೇಶದ ಸರಾಯಿ ಅಕಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದಾ ಗ್ರಾಮದಲ್ಲಿ ನಡೆದಿದೆ. ಹೈವೋಲ್ಟೇಜ್ ವಿದ್ಯುತ್ ಟವರ್ ಏರಿ ಈ ವ್ಯಕ್ತಿ ಕುಳಿತಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವಣೆ ಸೃಷ್ಟಿಯಾಗಿತ್ತು. ಅಶೋಕ್ ಕುಮಾರ್ ಎಂಬುವವರೇ ಈ ದುಸ್ಸಾಹಸಕ್ಕೆ ಕೈಹಾಕಿದವರು.
ನಿಧಾನವಾಗಿ ವ್ಯಕ್ತಿ ವಿದ್ಯುತ್ ತಂತಿಗಳ ಮೇಲೆ ನಡೆದುಕೊಂಡೇ ಮುಂದೆ ಸಾಗಿದ್ದಾರೆ. ಆದರೆ ಅದೃಷ್ಟ ಚೆನ್ನಾಗಿತ್ತು. ಅವನು ಕಂಬ ಏರುವ ಹೊತ್ತಿಗೆ ವಿದ್ಯುತ್​ ಹರಿಯುತ್ತಿರಲಿಲ್ಲ. ಪರಿಣಾಮ ದುರಂತದಿಂದ ಪಾರಾಗಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಅಶೋಕ್ ಕುಮಾರ್ ಕೃಷಿಕನಾಗಿದ್ದು, ಸೌಭಾಗ್ಯ ಯೋಜನೆಯಡಿ ಮೂರು ವರ್ಷಗಳ ಹಿಂದೆ ಉಚಿತ ವಿದ್ಯುತ್ ಸಂಪರ್ಕ ಪಡೆದಿದ್ದರು. ಆದರೂ ನಿರಂತರವಾಗಿ ಕರೆಂಟ್​ ಬಿಲ್​ ಬರುತ್ತಿದೆ. ಮೊನ್ನೆ ಶನಿವಾರ 8 ಸಾವಿರದ 700 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಇದರಿಂದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಇದನ್ನು ನೋಡಿ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಈ ಪರಿಯ ಬಿಲ್ ನೋಡಿದ ಅಶೋಕ್ ಸಿಕ್ಕಾಪಟ್ಟೆ ಮಾನಸಿಕವಾಗಿ ಕುಗ್ಗಿಹೋದರು. ಎಷ್ಟೇ ಮನವಿ ಮಾಡಿಕೊಂಡರೂ, ತಮಗೆ ಉಚಿತ ವಿದ್ಯುತ್​ ಸೌಲಭ್ಯ ಇದೆ ಎಂದರೂ ಅಧಿಕಾರಿಗಳು ಕೇಳದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದು ಹೈವೋಲ್ಟೇಜ್ ವಿದ್ಯುತ್ ತಂತಿ ಮೇಲೇರಿದ್ದಾರೆ. ಇದು ಪತ್ನಿಗೆ ಗೊತ್ತಾದದ್ದು ಗದ್ದೆಗೆ ಭತ್ತ ನಾಟಿ ಮಾಡಲು ಹೋದಾಗ!
ಪತಿ ಹೀಗೆ ಮಾಡಿದ್ದನ್ನು ನೋಡಿ ಶಾಕ್​ ಆದ ಪತ್ನಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಅಶೋಕ್​ ಅವರನ್ನು ಕೆಳಗೆ ಇಳಿಸಿದ್ದಾರೆ. ತಂತಿಯಲ್ಲಿ ಕರೆಂಟ್ ಬರದ ಕಾರಣ ಭಾರಿ ಅನಾಹುತ ತಪ್ಪಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)
VIDEO: ಪ್ರವಾಹದ ಭೀತಿ ಇದ್ದರೂ ನದಿ ತಟದಲ್ಲಿ ಮಹಿಳೆಯರ ದೆವ್ವ ಬಿಡಿಸ್ತಿದ್ದಾರೆ! ರಾಯಚೂರಲ್ಲಿ ಹೀಗೆ ನಡೆದಿದೆ ನೋಡಿ…

VIDEO: ಇಂದು ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು- ಸಂಘರ್ಷದಿಂದ ಶಿಖರದವರೆಗೆ… ಪುಸ್ತಕ ಬರೆದ 13ರ ಬಾಲಕಿ,

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + seventeen =
Remember me
