ಹೈದರಾಬಾದ್:ಇಂದು ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ, ಸಿಕ್ಕ ಹುಡುಗಿಯರ ಡಿಮಾಂಡ್‌ ಪೂರೈಸೋದೆ ಕಷ್ಟ ಎಂದೆಲ್ಲಾ ಯುವಕರು ಗೋಳಾಡುವುದು ಸಹಜವಾಗಿದೆ. ಆದರೆ ಇಲ್ಲೊಬ್ಬ ಯುವಕ ಮಾತ್ರ ಇದೇ ನೋವಿನಿಂದ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.ಸೈಯದ್ ಅಮ್ಜದ್ ( 30) ಮೃತ ಯುವಕ. ಈತ ಹೈದರಾಬಾದ್ ಫಲಕ್ನುಮಾದ ಸಂಜಯ್ ಗಾಂಧಿ ನಗರದ ನಿವಾಸಿ. ಈತನ ಸ್ನೇಹಿತರಿಗೆ ಮದುವೆಯಾಗಿ ಮಕ್ಕಳಾದರೂ ತನಗೆ ಮಾತ್ರ ಮದುವೆಗೆ ಹುಡುಗಿ ಸಿಗುತ್ತಿಲ್ಲ ಎಂದು ಸದಾ ಕೊರಗುತ್ತಿದ್ದ ಈತ. ಕೊನೆಗೆ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಟೇಲರ್‌ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸೈಯದ್‌ಗೆ ಹೆಣ್ಣು ನೋಡಲು ಶುರುಮಾಡಿ ವರ್ಷಗಳೇ ಗತಿಸಿವೆ. ಆದರೆ ಇದುವರೆಗೆ ಹೆಣ್ಣು ಫಿಕ್ಸ್‌ ಆಗಲಿಲ್ಲ. ಈತ ಒಪ್ಪಿದ ಹೆಣ್ಣು ಇವನನ್ನು ಒಪ್ಪದಿದ್ದರೆ, ಅವರು ಒಪ್ಪಿದ ಹೆಣ್ಣನನ್ನು ಈತ ಬೇಡ ಎನ್ನುತ್ತಿದ್ದನಂತೆ. ಒಟ್ಟಿನಲ್ಲಿ ಮದುವೆಗೆ ಮುಹೂರ್ತ ಬರಲೇಇಲ್ಲ. ಹೀಗಾಗಿ ಪದೇ ಪದೇ ಮದುವೆಯ ಬಗ್ಗೆ ಮಾತನಾಡುತ್ತ ತಮ್ಮ ಪುತ್ರ ಖಿನ್ನತೆಗೆ ಜಾರಿದ್ದ ಎಂದಿದ್ದಾರೆ ಪಾಲಕರು.ಏನೇ ಆದರೂ ಕಳೆದ ವರ್ಷ ಮದುವೆಯಾಗಲೇ ಬೇಕು ಎಂದು ಹಠಕ್ಕೆ ಬಿದ್ದಿದ್ದ ಸೈಯದ್‌ ಆಸೆ ಕೊನೆಗೂ ನೆರವೇರಲೇ ಇಲ್ಲ. ತನಗೆ ಪರಿಚಯ ಇರುವವರ ಬಳಿಯೆಲ್ಲಾ ತನಗೆ ಸೂಟ್‌ ಆಗುವ ಒಂದು ಹುಡುಗಿ ನೋಡಿ ಕೊಡುವಂತೆ ಮನವಿ ಮಾಡಿಕೊಂಡಿದ್ದ. ಕೊನೆಕೊನೆಗೆ ಕೆಲಸದ ಕಡೆಗೂ ಗಮನ ಕೊಡದೇ ಒಂಟಿಯಾಗಿ ಇರಲು ಶುರು ಮಾಡಿದ್ದ. ಮನೆಯವರು ಕೂಡ ಈತನಿಂದಾಗಿ ಬೇಸತ್ತಿದ್ದರು.ಇವೆಲ್ಲಾ ಗಮನಿಸಿದ ಸೈಯದ್‌, ತನ್ನ ಅಂಗಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾರನೆಯ ದಿನ ಕಿಟಕಿಯಲ್ಲಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫಿಲ್ಮಿ ಸ್ಟೈಲ್‌ನಲ್ಲಿ ಉದ್ಯಮಿಯ ಅಪಹರಿಸಿ ಸಿಕ್ಕಿಬಿದ್ದ ನಿರ್ಮಾಪಕ! ಐಟಿ ಅಧಿಕಾರಿ ಸೋಗಲ್ಲಿ ಪ್ಲ್ಯಾನ್‌
ಇನ್ಮುಂದೆ ನಮ್ಮ ಜಾಹೀರಾತಿಗೆ ನೀವು ಬೇಡ ಎಂದ ಕಂಪೆನಿ: 5 ಕೋಟಿ ರೂ. ಆದಾಯ ಕಳೆದುಕೊಂಡ ಶಾರುಖ್‌

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:18 + fourteen =
Remember me
