ಇಂದೋರ್:ಹೋಳಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಅನೇಕ ಮಂದಿ ಆಚರಿಸಿದರು. ಬಣ್ಣದ ಓಕುಳಿಯನ್ನು ಕೈಯಲ್ಲಿ ಹಿಡಿದು ನರ್ತಿಸಿ ಖುಷಿಪಟ್ಟರೆ, ಇನ್ನು ಕೆಲವು ಯುವಕರು ಗುಂಡು ಏರಿಸಿಕೊಂಡು ನರ್ತಿಸಿದರು. ಆದರೆ ಇದೇ ಕುಡಿತ ಯುವಕನೊಬ್ಬನ ಪ್ರಾಣವನ್ನೇ ತೆಗೆದಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಇಲ್ಲಿಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕ ಗೋಪಾಲ್‌ ಮೃತಪಟ್ಟವನು. ಈತ ಕೈಯಲ್ಲಿ ಚಾಕು ಹಿಡಿದುಕೊಂಡು ಕಂಠಪೂರ್ತಿ ಕುಡಿದು ತನ್ನ ಸ್ನೇಹಿತರ ಜತೆ ‘ಖಳನಾಯಕ್‌’ ಚಿತ್ರದ ನಾಯಕ್‌ ಹ್ಞೂಂ ಮೇ… ಖಳನಾಯಕ್‌ ಹ್ಞೂಂ… ಹಾಡಿಗೆ ನೃತ್ಯ ಮಾಡುತ್ತಿದ್ದ. ಹೀಗೆ ನರ್ತಿಸುತ್ತಾ ಇವನ ಕಿಕ್ಕು ಇನ್ನೂ ಏರಿತೋ ಏನೋ. ಒಟ್ಟಿನಲ್ಲಿ ಎಲ್ಲರೂ ಕುಡಿದ ಅಮಲಿನಲ್ಲಿ ಬಿದ್ದು ಹೊರಳಾಡುತ್ತಿದ್ದರೆ ಈತ ಮಾತ್ರ ಚಾಕುವಿನಿಂದ ಎದೆ ಭಾಗವನ್ನು ಚುಚ್ಚಿಕೊಂಡಿದ್ದಾನೆ.
ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಯಾವುದೇ ಪರಯೋಜನವಾಗಿಲ್ಲ. ಮೃತಪಟ್ಟಿದ್ದಾನೆ. ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕುಡಿದ ಗುಂಗಿನಲ್ಲಿ ಚಾಕು ಇರಿದುಕೊಂಡದ್ದು ತಿಳಿಯಲಿಲ್ಲವೋ ಎಂಬುದು ತಿಳಿದುಬಂದಿಲ್ಲ. ಗೋಪಾಲ್ ಸ್ನೇಹಿತರು ಒಟ್ಟಾಗಿ ಡ್ಯಾನ್ಸ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಬಂಗಂಗಾ ಪೊಲೀಸರು ಮೃತ ಗೋಪಾಲ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಬಿಂದೋ ಆಸ್ಪತ್ರೆಗೆ ಕಳುಹಿಸುವ ಮೂಲಕ ತನಿಖೆ ಆರಂಭಿಸಿದ್ದಾರೆ.
ಇದೀಗ ಈ ಪ್ರಕರಣದ ತನಿಖೆಯನ್ನು ಬಂಗಂಗಾ ಪೊಲೀಸರು ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ.
ಅದರ ವಿಡಿಯೋ ಇಲ್ಲಿದೆ:
A man succumbed to injuries in Indore, he was dancing with a knife in his hand during holi celebrations stabbed himself, he was taken to a hospital where the doctors declared him dead@ndtv@ndtvindiapic.twitter.com/7tbGC9T9BB
— Anurag Dwary (@Anurag_Dwary)March 19, 2022
ಸಾಹೇಬ್ರೆ ಭಾರಿ ಮೋಸ ಆಗೋಯ್ತು.. ಇವ್ಳಿಗೆ ಇದೆಲ್ಲಾ ಬರಲ್ಲ, ಮಧ್ಯರಾತ್ರಿ ಫೋನ್‌- ಕಾರಣ ಕೇಳಿ ಪೊಲೀಸರು ಸುಸ್ತು!

ವೇಶ್ಯೆ ಪಾತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸುತ್ತೀರಾ! ಅಜಯ್​ ದೇವಗನ್ನೂ ಹಿಂದೆ ಬಿದ್ದಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
