ಶ್ರೀನಗರ:ವೇದಿಕೆಯ ಮೇಲೆ ನರ್ತಿಸುತ್ತಲೇ ಹೃದಯಘಾತದಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಮ್ಮುವಿನಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಬಿಷ್ನಾಹ್ ಪ್ರದೇಶದಲ್ಲಿ ಯೋಗೇಶ್ ಗುಪ್ತಾ ಮೃತ ಯುವಕ. 20 ವರ್ಷದ ಯೋಗೇಶ್​ ವೇದಿಕೆಯ ಮೇಲೆ ಪಾರ್ವತಿಯ ವೇಷ ಧರಿಸಿ ಹುಡುಗಿಯಂತೆ ನರ್ತಿಸುತ್ತಿದ್ದ. ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತವಾಗಿದೆ. ಕೂಡಲೇ ಈತ ಕುಸಿದು ಬಿದ್ದಿದ್ದಾನೆ.
ಈತ ಕುಸಿದು ಬಿದ್ದಾಗ ಮೊದಲು ಎದ್ದಿದ್ದಾನೆ. ಆದ್ದರಿಂದ ಈತನಿಗೆ ಹೃದಯಾಘಾತವಾಗಿದೆ ಎಂದು ಯಾರಿಗೂ ತಿಳಿಯಲೇ ಇಲ್ಲ. ಕುಸಿದು ಬಿದ್ದ ತಕ್ಷಣ ಅಲ್ಲಿಯೇ ಸಾವರಿಸಿಕೊಂಡು ಕೆಲವು ಸ್ಟೆಪ್​ ಮಾಡಿದ್ದರಿಂದ ಇದು ಕೂಡ ನೃತ್ಯದ ಭಾಗವೇ ಎಂದು ಜನ ಎಂದುಕೊಂಡುಬಿಟ್ಟಿದ್ದಾರೆ. ಮತ್ತೆ ಕುಸಿದ ಆತ ಮೇಲಕ್ಕೆ ಏಳಲೇ ಇಲ್ಲ.
ಕೂಡಲೇ ಶಿವನ ವೇಷಧಾರಿಗೆ ಸಂದೇಹ ಬಂದು ವೇದಿಕೆಯ ಮೇಲೆ ಬಂದಿದ್ದಾನೆ. ಸಮೀಪ ಬಂದು ಎಚ್ಚರಿಸಿದಾಗಲೇ ತಿಳಿದದ್ದು ಯುವಕ ಆಗಲೇ ಪ್ರಾಣ ತ್ಯಜಿಸಿದ್ದಾನೆ ಎಂದು. ಕೂಡಲೇ ಆಸ್ಪತ್ರೆಗೆ ಯುವಕನನ್ನು ದಾಖಲಿಸಿದರೂ ಅದಾಗಲೇ ಆತ ಕೊನೆಯುಸಿರು ಎಳೆದಿದ್ದ. (ಏಜೆನ್ಸೀಸ್​)
ಅದರ ವಿಡಿಯೋ ಇಲ್ಲಿದೆ ನೋಡಿ
#BREAKINGYogesh Gupta, who was playing the role of Mother Parvati in#Jammu, suddenly had a cardiac arrest and then died in a few moments. He was just 20 years Old.Its#Shocking
May god Rest him in peace.#RIP#heartattackpic.twitter.com/chT0Shjy84
— Jasmeen Kaur (@Jasmeen66480371)September 8, 2022

ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ಆದ್ರೆ ಅಪ್ಪ ಮಾತ್ರ ಬೇರೆ ಬೇರೆ… ಇದೆಂಥ ವಿಚಿತ್ರ ಅಂತೀರಾ?

ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ: ಫೇಲ್​ ಆದ ವಧುವಿಗೆ 10 ಲಕ್ಷ ರೂ ದಂಡ- ಹೀಗೊಂದು ಆಘಾತಕಾರಿ ಘಟನೆ

ಇರುವೆ ತಂದಿಟ್ಟ ಸಂಕಷ್ಟ: ಬದುಕು ಹೈರಾಣ- ಊರನ್ನೇ ತೊರೆಯುತ್ತಿರುವ ಗ್ರಾಮಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
