ಜೈಪುರ:ನಿಮ್ಮ ಮಗನನ್ನು ವಿಕಾಸ್​ನನ್ನು ಅಪಹರಣ ಮಾಡಿದ್ದೇವೆ. ಆತ ಜೀವಂತ ಬೇಕೆಂದರೆ ನಮಗೆ ಮೂರು ಲಕ್ಷ ರೂಪಾಯಿ ಬೇಕು. ಇಲ್ಲದಿದ್ದರೆ ನಿಮ್ಮ ಮಗನನ್ನು ಸಾಯಿಸುತ್ತೇವೆ ಎಂಬ ವಿಡಿಯೋ ಒಂದು ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೇಕಡಾ ಗ್ರಾಮದ ಪ್ರೇಮ್ ಸಿಂಗ್ ಅವರಿಗೆ ಬಂತು.
ಮೂರು ದಿನಗಳಿಂದ ನಾಪತ್ತೆಯಾಗಿರುವ ಮಗ ಕೊನೆಗೂ ಜೀವಂತ ಆಗಿರುವುದಾಗಿ ನಿಟ್ಟುಸಿರು ಬಿಟ್ಟ ಅಪ್ಪನಿಗೆ ಒಂದೆಡೆ ಖುಷಿಯಾದರೂ, ತಮ್ಮ ಮಗನನ್ನು ಅಪಹರಣ ಮಾಡಿರುವುದಾಗಿ ಕೇಳಿ ಆತಂಕ ಉಂಟಾಯಿತು. ಮಾತ್ರವಲ್ಲದೇ ಮಗನನ್ನು ಖುರ್ಚಿಗೆ ಕಟ್ಟಿ ಹಾಕಿ ಥಳಿಸುತ್ತಿರುವ ವೀಡಿಯೋ ನೋಡಿ ಕರುಳೇ ಕಿತ್ತುಬಂತಂತಾಯಿತು.
ಇನ್ನು ತಮ್ಮ ಮಗನ ಜೀವವನ್ನು ಹೇಗಾದರೂ ಉಳಿಸಬೇಕು ಎಂದು ಪಣತೊಟ್ಟ ಅವರಿಗೆ ಮೊದಲು ಏನು ಮಾಡಬೇಕೆಂದು ತಿಳಿಯಲಿಲ್ಲ. ಪೊಲೀಸರಿಗೆ ವಿಷಯ ತಿಳಿಸಲೋ ಬೇಡವೋ ಎಂಬ ಆತಂಕದಲ್ಲಿಯೇ ಇದ್ದರು. ನಂತರ ಅಂತೂ ಧೈರ್ಯ ಮಾಡಿ ಪೊಲೀಸರಿಗೆ ವಿಷಯ ತಿಳಿಸಿಯೇ ಬಿಟ್ಟರು. ಬಂದಿರುವ ವಿಡಿಯೋ ತೋರಿಸಿದರು.
ಇದನ್ನೂ ಓದಿ:ನಾನು ಬದುಕಲಿ ಎಂದು ಪ್ಲೀಸ್​ ಪ್ರಾರ್ಥಿಸಿ ಎನ್ನುತ್ತಲೇ ಕೊನೆಯುಸಿರೆಳೆದ ನಟಿ ದಿವ್ಯಾ
ತಡ ಮಾಡದ ಪೊಲೀಸರು ಬಲೆ ಬೀಸಿದಾಗ ಇಬ್ಬರು ಕಿಡ್ನಾಪರ್​ಗಳು ಸಿಕ್ಕಿಬಿದ್ದರು. ಪೊಲೀಸರಿಗೆ ವಿಷಯ ತಿಳಿಸುವುದಿಲ್ಲ ಎಂದುಕೊಂಡಿದ್ದ ಯಾದರಾಮ್ ಮತ್ತು ಲೋಕೇಂದ್ರ ಸಿಂಗ್ ಎಂಬ ಯುವಕರು ಬಂಧನಕ್ಕೊಳಗಾದಾಗ ಕಕ್ಕಾಬಿಕ್ಕಿಯಾದರು. ಇವರನ್ನು ನೋಡಿದ ಪೊಲೀಸರಿಗೆ ಇವರು ನುರಿತ ಕಿಡ್ನಾಪರ್​ ಅಲ್ಲ ಎಂಬ ಗುಮಾನಿ ಶುರುವಾಯಿತು.
ಅವರನ್ನು ಪೊಲೀಸ್​ ರೀತಿಯಲ್ಲಿಯೇ ವಿಚಾರಿಸಿದಾಗ ನಿಜ ಹೇಳಿದರು. ನಿಜ ಕೇಳಿ ಪೊಲೀಸರೇ ಅಚ್ಚರಿಪಟ್ಟುಕೊಂಡರೆ ಇತ್ತ ನಿಜಾಂಶ ತಿಳಿದು ಪ್ರೇಮ್ ಸಿಂಗ್ ಅವರ ತಲೆಯೇ ತಿರುಗಿದಂತಾಯಿತು.
ಅದಕ್ಕೆ ಕಾರಣ ಇಷ್ಟೇ. ಕ್ರೆಡಿಟ್ ಕಾರ್ಡ್ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದ ವಿಕಾಸ್​ ಬೇಕಾಬಿಟ್ಟೆ ಸಾಲ ಮಾಡಿಕೊಂಡಿದ್ದ. ಸುಮ್ಮನೇ ಕೇಳಿದರೆ ಅಪ್ಪ ಹಣ ಕೊಡುವುದಿಲ್ಲ ಎಂದು ತಿಳಿದಿತ್ತು. ಅದಕ್ಕಾಗಿ ತನ್ನನ್ನು ಅಪಹರಣ ಮಾಡುವಂತೆ ತನ್ನ ಸ್ನೇಹಿತರಿಗೆ ಹೇಳಿ ಹಣದ ಬೇಡಿಕೆ ಒಡ್ಡಿದ್ದ.
ಅವನು ಹೇಳಿದಂತೆ ವಿಡಿಯೋ ಮಾಡಿ ಕಳುಹಿಸಿದ್ದರು ಪೊಲೀಸರು. ಪೊಲೀಸರಿಗೆ ಹೇಳಿದರೆ ಮಗನನ್ನು ಕೊಲೆ ಮಾಡುವುದಾಗಿ ಹೇಳಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ ಎನ್ನುವುದು ಅವರ ಅನಿಸಿಕೆಯಾಗಿತ್ತು. ದುಡ್ಡು ಪಡೆದುಕೊಂಡು ಸಾಲ ತೀರಿಸುವುದರ ಜತೆಗೆ ಉಳಿದ ಹಣದಲ್ಲಿ ಮೋಜು ಮಾಡಬಹುದು ಎಂದು ಪ್ಲ್ಯಾನ್​ ಮಾಡಿದ್ದರು. ಎಲ್ಲವೂ ಉಲ್ಟಾ ಆಗಿ ಈಗ ಮೂವರೂ ಪೊಲೀಸರ ಅತಿಥಿಯಾಗಿದ್ದಾರೆ.
ಯೋಧನ ಪ್ರಾಣ ಕಾಪಾಡಿ ಕೈ ಕಳೆದುಕೊಂಡ ಯುವತಿಯೀಗ ಬಿಜೆಪಿ ಅಭ್ಯರ್ಥಿ- ಇಲ್ಲೊಂದು ಅಪರೂಪದ ಲವ್​ ಸ್ಟೋರಿ

ಕ್ಲಾಸ್​ರೂಂನಲ್ಲಿ ವಿವಾಹ ಪ್ರಕರಣಕ್ಕೆ ಟ್ವಿಸ್ಟ್​- ಮದ್ವೆಯಾಯ್ತು ಅಮಾನ್ಯ: ಮಗಳಿಗೆ ಮನೆಯಲ್ಲಿ ನೋ ಎಂಟ್ರಿ

ಸಂಸತ್ ಭವನದ ಶಂಕುಸ್ಥಾಪನೆ ನೆರವೇರಿಸಲು ಸುಪ್ರೀಂ ಅನುಮತಿ- ಆದರೂ ಕೇಂದ್ರಕ್ಕೆ ಹಿನ್ನಡೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − ten =
Remember me
