ಭಾಗ್​ಪಾಟ (ಉತ್ತರ ಪ್ರದೇಶ):ಕರೊನಾ ವೈರಸ್​ನ ಈ ದಿನಗಳಲ್ಲಿ ಉಗುಳಬೇಡಿ ಎಂದು ಯುವಕನೊಬ್ಬನಿಗೆ ಬುದ್ಧಿಮಾತು ಹೇಳಿದ್ದಕ್ಕೆ, ಆ ಯುವಕ ಇವರ ಮನೆಯಲ್ಲಿದ್ದ 11 ಪಾರಿವಾಳಗಳನ್ನು ಕೊಲೆ ಮಾಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಭಾಗ್​ಪಾಟದಲ್ಲಿ ನಡೆದಿದೆ.
ರಾಹುಲ್ ಸಿಂಗ್ ಎಂಬುವವರಿಗೆ ಸೇರಿರುವ ಪಾರಿವಾಳಗಳನ್ನು ಕೊಂದಿರುವ ಆರೋಪವನ್ನು ಧರಂಪಾಲ್ ಸಿಂಗ್ ಎಂಬಾತ ಎದುರಿಸುತ್ತಿದ್ದಾನೆ.
ಧರಂಪಾಲ್​, ರಾಹುಲ್​ ಅವರ ಮನೆಯ ಪ್ರವೇಶದ್ವಾರದಲ್ಲಿ ಉಗುಳಿದ್ದ. ಇದರಿಂದ ಸಿಟ್ಟುಗೊಂಡ ಧರಂಪಾಲ್​, ಹೀಗೆ ಉಗುಳುವುದು ಸರಿಯಲ್ಲ, ಅದರಲ್ಲಿಯೂ ಕರೊನಾ ವೈರಸ್​ನ ಈ ದಿನಗಳಲ್ಲಿ ಇಂಥ ಕೃತ್ಯ ನಿಷೇಧ ಎಂದಿದ್ದಾರೆ.
ಇದನ್ನೂ ಓದಿ:20 ರೂಪಾಯಿಗಾಗಿ ನಡೆಯಿತು ಕೊಲೆ- ಮಗನೆದುರೇ ತಂದೆಯ ಹತ್ಯೆ!
ಇದರಿಂದ ಸಿಟ್ಟುಗೊಂಡ ಧರಂಪಾಲ್​ ಮನೆಯ ಛಾವಣಿ ಏರಿ, ಅಲ್ಲಿ ಪಂಜರದಲ್ಲಿದ್ದ 11 ಪಾರಿವಾಳಗಳನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ! ನಂತರ ಸತ್ತ ಪಾರಿವಾಳಗಳ ವಿಡಿಯೋ ಮಾಡಿ ಅದನ್ನು ರಾಹುಲ್​ ಅವರಿಗೆ ಕಳುಹಿಸಿದ್ದಾನೆ.
ಇದೀಗ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಧರಂಪಾಲ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವಕ ಸದ್ಯ ಎಸ್ಕೇಪ್​ ಆಗಿದ್ದು, ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಗ್ಯಾಂಗ್​ರೇಪ್​ ಮಾಡಿ ನಾಲಗೆ ಕಟ್: ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ಯುವತಿ ಸಾವು!

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ನಾಳೆ ಐತಿಹಾಸಿಕ ತೀರ್ಪು- ಎಲ್ಲೆಡೆ ಕಟ್ಟೆಚ್ಚರ

ಕಾಲಿನಿಂದ ಒದ್ದ, ಹೊಟ್ಟೆಗೆ, ಮುಖಕ್ಕೆ ಗುದ್ದಿದ- ಕ್ಯಾಮೆರಾಮನ್​ನಿಂದ ಪತ್ರಕರ್ತನ ಮೇಲೆ ಹಲ್ಲೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
