ಲಂಡನ್:ಈ 30 ವರ್ಷದ ಯುವಕನ ಹೆಸರು ಅಲನ್ ಕ್ಲೇಟನ್. ವೃತ್ತಿಯಲ್ಲಿ ಲಾರಿ ಚಾಲಕ. ಲಂಡನ್​ನ ಕೆಟರಿಂಗ್​ ನಿವಾಸಿ. ಮದುವೆಯಾಗುವ ವಯಸ್ಸು. ತನಗಾಗಿ ಒಂದು ಹುಡುಗಿಯನ್ನು ಹುಡುಕಲು ಸಾಕಷ್ಟು ಪ್ರಯತ್ನ ಮಾಡಿದ ಈತ. ಆದರೆ ದುರಾದೃಷ್ಟಕ್ಕೆ ಎಲ್ಲಿಯೂ ಸಿಗಲೇ ಇಲ್ಲ.
20 ವರ್ಷದಿಂದಲೇ ಹುಡುಗಿ ಹುಡುಕಲು ಶುರುಮಾಡಿದ ಈತನಿಗೆ ವಯಸ್ಸು 30 ಆದರೂ ಸಿಗಲೇ ಇಲ್ಲ. ಡೇಟಿಂಗ್​ ಆ್ಯಪ್​ ಇನ್​ಸ್ಟಾಲ್​ ಮಾಡಿಕೊಂಡು ಅದರಲ್ಲಿ ತನಗೊಬ್ಬಳು ಸಿಗುವಳೋ ನೋಡಿದ. ಇಲ್ಲವೇ ಇಲ್ಲ… ಎಲ್ಲ ಆನ್​ಲೈನ್​ಗಳಲ್ಲಿ ಹುಡುಕಾಡಿದ ಎಲ್ಲಿಯೂ ಹುಡುಗಿಯ ಪತ್ತೆಯೇ ಇಲ್ಲ.
ತುಂಬಾ ನೊಂದು ಬೆಂದುಹೋದ ಈತ ಕೊನೆಗೊಂದು ಐಡಿಯಾ ಹುಡುಕಿಯೇ ಬಿಟ್ಟ. ಅದೇನು ಅಂತೀರಾ? ತನ್ನನ್ನು ತಾನೇ ಮಾರಾಟಮಾಡಿಕೊಂಡ. ಅಂದರೆ ಫೇಸ್​ಬುಕ್​ನಲ್ಲಿ ತಾನು ಮಾರಾಟಕ್ಕಿರುವುದಾಗಿ ಬರೆದುಕೊಂಡ. ಈಗ ನೋಡಿ ಅವನಿಗೆ  ಡಿಮಾಂಡೋ ಡಿಮಾಂಡ್​ ಅಂತೆ…
ಅಷ್ಟಕ್ಕೂ ಅವನು ಬರೆದುಕೊಂಡದ್ದು ಹೀಗೆ…
ಹಾಯ್​ ಯುವತಿಯರೇ… ನಾನು ಅಲನ್​. ನನಗೆ 30 ವರ್ಷ. ಮಾತನಾಡುವುದಕ್ಕಾಗಿ ಉತ್ತಮ, ಸುಂದರ ಹುಡುಗಿಯನ್ನು ನಾನು ಹುಡುಕುತ್ತಿದ್ದೇನೆ. ಇದು ಮಾತಿಗಷ್ಟೇ ಸೀಮಿತ ಆಗಿರಲಾರದು. ಇನ್ನೂ ಹೆಚ್ಚಿಗೆಯೂ ಆಗಬಹುದು. ಏಕೆಂದರೆ ನಾನು ಮದುವೆಯಾಗಲು ಇಚ್ಛಿಸುತ್ತಿದ್ದೇನೆ. ಒಂಟಿ ಜೀವನ ಸಾಕಾಗಿ ಹೋಗಿದೆ. ನಾನು ಡೇಟಿಂಗ್​ ಆ್ಯಪ್​ನಲ್ಲಿ ಹುಡುಕಾಡಿದರೂ ಒಬ್ಬರೂ ಸಿಗಲಿಲ್ಲ. ನಾನು ಉಚಿತವಾಗಿ ನಿಮಗೆ ಸಿಗುತ್ತೇನೆ. ಉತ್ತಮ ಸ್ಥಿತಿಯಲ್ಲಿಯೂ ಇದ್ದೇನೆ.
ನನ್ನ ಬಾಲ್ಯ ಚೆನ್ನಾಗಿರಲಿಲ್ಲ. ಇದೀಗ ಮದುವೆಯಾಗಿ ಮಕ್ಕಳನ್ನು ಹೊಂದಲು ಬಯಸಿದ್ದೇನೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವೆ. ತನ್ನನ್ನು ಸಂಪರ್ಕಿಸಬಯಸುವವರು ಇಂಥ ಸಂಖ್ಯೆ ಇಲ್ಲವೇ ಇಂಥ ಮೇಲ್​ಗೆ ಮೆಸೇಜ್​ ಕಳುಹಿಸಿ ಎಂದಿದ್ದಾನೆ.
ಇದನ್ನೂ ಓದಿ:ಬಿಗ್​ ಶಾಕ್​! ಅಮೇಜಾನ್​ನ 20 ಸಾವಿರ ಸಿಬ್ಬಂದಿಗೆ ಸೋಂಕು
ಈಗ ಅವನ ಅದೃಷ್ಟ ಖುಲಾಯಿಸಿಯೇ ಬಿಟ್ಟಿದೆ. ಅವನ ಇನ್​ಬಾಕ್ಸ್​ ತುಂಬಿಹೋಗಿದೆಯಂತೆ. ಇವನ ಈ ಫೇಸ್​ಬುಕ್​ ಬರಹ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಂದೇಶಗಳ ಮಹಾಪೂರವೆ ಹರಿದುಬಂದಿದೆಯಂತೆ. ತನ್ನ ವಿವಿಧ ಭಂಗಿಯ ಫೋಟೋಗಳನ್ನು ಅಪ್​ಲೋಡ್​ ಮಾಡಿರುವ ಈತನ ಫೋಟೋಗೆ ಹಲವಾರು ಲಲನೆಯರು ಮನಸೋತಿದ್ದಾರಂತೆ. ಈತನ ಸರಳ ಮಾತುಗಳು ಹಲವರಿಗೆ ತುಂಬಾ ಇಷ್ಟವಾಗಿದೆಯಂತೆ.
ಅವರ ಹಲವಾರು ಚಿತ್ರಗಳನ್ನು ಹಂಚಿಕೊಂಡಿರುವ ಅವರ ಫೇಸ್‌ಬುಕ್ ಪೋಸ್ಟ್ ಅಂತರ್ಜಾಲದಲ್ಲಿ ವೈರಲ್ ಆಗಿದೆ ಮತ್ತು ಇದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಉತ್ತಮ ಸ್ಪಂದನೆ ಸಿಕ್ಕಿದ್ದು, ಬಂದಿರುವ ಮೆಸೇಜ್​ಗಳಲ್ಲಿ ತನ್ನ ಮನದನ್ನೆಯ ಹುಡುಕಾಟದಲ್ಲಿ ಬಿಜಿಯಾಗಿದ್ದಾನೆ.
ಬಾಬ್ರಿಮಸೀದಿ ತೀರ್ಪಿನಲ್ಲಿವೆ ಸ್ಫೋಟಕ ಮಾಹಿತಿ: ಪಾಕ್ ಕೈವಾಡದ ‘ಮೌನ’ದ ಕುರಿತು ನ್ಯಾಯಾಧೀಶರ ಪ್ರಶ್ನೆ

ಸೋಂಕು ತಗುಲಿದ್ರೆ ಮಮತಾರನ್ನು ತಬ್ಬಿಕೊಳ್ಳುತ್ತಿದ್ದೆ ಎಂದ ಸಂಸದನಿಗೆ ಕರೊನಾ ಪಾಸಿಟಿವ್​!

ಮಗನಿಗೆ ₹100 ಕೊಟ್ಟು ಕಳುಹಿಸಿದ ಅಮ್ಮ: 4 ಕೋಳಿಮರಿ ಜತೆ ₹150 ತಂದ ಪುಟಾಣಿ!

ಮಹಿಳೆಯೆಂದು ಸಾಬೀತುಮಾಡುವವರೆಗೂ ವಿಮಾನ ಏರಲು ಬಿಡಲಿಲ್ಲ- ನೋವು ತೋಡಿಕೊಂಡ ವಿಶ್ವ ಚಾಂಪಿಯನ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + seventeen =
Remember me
