ಬೆಂಗಳೂರು:ಬ್ಯಾಂಕ್‌ನಿಂದ ಹಣ ಡ್ರಾ ಮಾಡುವವರನ್ನೇ ಟಾರ್ಗೆಟ್ ಮಾಡಿ, ಕೋಡ್‌ವರ್ಡ್ ಬಳಸಿ ಹಣ ಲಪಟಾಯಿಸುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‌ನ ಇಬ್ಬರು ಸದಸ್ಯರು ಕೊತ್ತನೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶ ಚಿತ್ತೂರು ಬಳಿಯ ಓಜಿ ಕುಪ್ಪಂ ಮೂಲದ ಗಿರಿಕುಮಾರ್ (39), ಷಣ್ಮುಗಂ (26) ಬಂಧಿತರು. ಆರೋಪಿಗಳಿಂದ 4.10ಲಕ್ಷ ರೂ., ಕೃತ್ಯಕ್ಕೆ ಬಳಸಿದ 1 ಬೈಕ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 7 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ತಲೆಮರೆಸಿಕೊಂಡಿರುವ ಇದೇ ಗ್ಯಾಂಗ್‌ನ ಗಂಗಾ, ಪಾಂಡರಂಗ, ಸ್ಯಾಮುಯೆಲ್ ರಾಜು, ಬಾಬು, ಕಿರಣ್‌ಗೆ ಶೋಧ ಕಾರ್ಯ ಮುಂದುವರೆದಿದೆ.
ಆರೋಪಿಗಳು ನಗರದ ವಿವಿಧ ಬ್ಯಾಂಕ್‌ಗಳ ಬಳಿ ಸುತ್ತಾಡುತ್ತಿದ್ದರು. ಬ್ಯಾಂಕ್‌ನಿಂದ ಹಣ ಡ್ರಾ ಮಾಡುವವರು, ಬ್ಯಾಂಕ್‌ಗೆ ಹಣ ಕಟ್ಟಲು ಒಂಟಿಯಾಗಿ ಬರುವವರನ್ನು ಗುರುತಿಸುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮಾರ್ಗ ಮಧ್ಯೆ ವಾಹನ ಪಾರ್ಕ್ ಮಾಡಿದರೆ, ಹಣ ಲಪಟಾಯಿಸಿ ಕ್ಷಣ ಮಾತ್ರದಲ್ಲಿ ಪರಾರಿಯಾಗುತ್ತಿದ್ದರು.
7 ಜನರ ತಂಡ ಕಳ್ಳತನ ಮಾಡುವ ಮೊದಲು ಕೋಡ್‌ವರ್ಡ್‌ಗಳನ್ನು ಬಳಸುತ್ತಿದ್ದರು. ಕದಿಯಲು ಸಂಚು ರೂಪಿಸಿದ ಜಾಗದಲ್ಲಿ 7 ಜನ ಸದಸ್ಯರ ಪೈಕಿ ಮೂವರು ಕಳ್ಳತನದಲ್ಲಿ ಭಾಗಿಯಾದರೆ, ಉಳಿದ ನಾಲ್ವರು ಸುತ್ತ-ಮುತ್ತ ಯಾರಾದರೂ ಬರುತ್ತಾರೆಯೇ ಎಂಬುದನ್ನು ಗಮನಿಸುತ್ತಿದ್ದರು. ಪದೆ ಪದೆ ಆ ನಾಲ್ವರನ್ನು ನೋಡಿಕೊಂಡೇ ಇವರು ಕಳ್ಳತನ ನಡೆಸುತ್ತಿದ್ದರು. ಆ ನಾಲ್ವರ ಪೈಕಿ ಒಬ್ಬ ತಲೆ ಮೇಲೆ ಕೈ ಇಟ್ಟರೂ ಅಲರ್ಟ್ ಆಗಿ ಇರಿ. ಎಲ್ಲರೂ ಒಂದು ಜಾಗದಲ್ಲಿ ಸೇರಬೇಕಾಗುತ್ತದೆ ಎಂಬುದರ ಸೂಚನೆ. ಮೂಗಿನ ಮೇಲೆ ಕೈ ಇಟ್ಟು ತುರಿಸಿದರೆ ಕಳ್ಳತನ ಮಾಡಬಹುದು, ಯಾವುದೇ ತೊಂದರೆ ಇಲ್ಲ ಎಂಬ ಸೂಚನೆಯಾಗಿದೆ. ಸಿಕ್ಕಿಬಿದ್ದ ಇಬ್ಬರು ಸದಸ್ಯರ ವಿಚಾರಣೆ ವೇಳೆ ಈ ಕೋಡ್‌ವರ್ಡ್ ರಹಸ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ ?ಬ್ಯಾಂಕ್‌ನಿಂದ ಡ್ರಾ ಮಾಡಿ ವಾಹನದಲ್ಲಿಟ್ಟಿದ್ದ ಹಣ ಕಳ್ಳತನ ಮಾಡಿರುದಕ್ಕೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 3 ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ತನಿಖೆ ನಡೆಸಿದಾಗ, ಡಿ.23ರಂದು ಇಂದಿರಾನಗರದ ಎಚ್‌ಡಿಎ್ಸಿ ಬ್ಯಾಂಕ್ ಬಳಿ ಆರೋಪಿಗಳು ಕೃತ್ಯ ಎಸಗಲು ಸಜ್ಜಾಗಿರುವ ಸುಳಿವು ಸಿಕ್ಕಿತ್ತು. ಈ ಸುಳಿವಿನ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಹೋದಾಗ, ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಕೂಡಲೇ ಬೈಕ್‌ನ್ನು ಬೆನ್ನತ್ತಿ ಹೋದ ಪೊಲೀಸರು ಗಿರಿಕುಮಾರ್, ಷಣ್ಮುಗಂನ್ನು ಬಂಧಿಸಿದ್ದಾರೆ.
ಸಿದ್ಧಾಂತ್‌ ಜತೆಗಿನ ಆ ಕಿಸ್ಸಿಂಗ್‌ ಸೀನ್‌- ಅಬ್ಬಬ್ಬಾ ಸುಸ್ತಾದೆ, ಎಂದಿಗೂ ಹೀಗಾಗಿರಲಿಲ್ಲ ಎಂದು ಅನುಭವ ಬಿಚ್ಚಿಟ್ಟ ನಟಿ ದೀಪಿಕಾ

ವಧು ಡಾನ್ಸ್‌ ಮಾಡಿದ್ದಕ್ಕೆ ವರ ಗರಂ ಆಗಿದ್ದೇ ತಪ್ಪಾಗೋಯ್ತು: ಬೇರೊಬ್ಬನಿಂದ ತಾಳಿಕಟ್ಟಿಸಿಕೊಂಡ ಮದುಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
