ಲಖನೌ:ಕೆಲವೊಮ್ಮೆ ಯಾರೂ ಊಹಿಸದ ಘಟನೆಗಳು ನಡೆದು ಬಿಡುತ್ತವೆ. ಅದೇ ವೇಳೆ ಜೀವ ಗಟ್ಟಿಯಾಗಿದ್ದರೆ ಹೇಗಿದ್ದರೂ ಬದುಕುಳಿಯುತ್ತಾರೆ. ಈ ಮಾತುಗಳಿಗೆ ಅನ್ವಯ ಆಗುವಂಥ ಅಪರೂಪದ ಘಟನೆಯೊಂದು ಇಲ್ಲಿ ನಡೆದಿದೆ.
ಮಂಗಳೂರಿನಿಂದ ಸುಮಾರು 30 ಕಿ.ಮೀ. ದೂರ ಇರುವ ಮೂಡಬಿದಿರೆಯಿಂದ ಉತ್ತರ ಪ್ರದೇಶದ ಮುರಾದಾಬಾದ್​ವರೆಗೆ ಸುಮಾರು 2,700 ಕಿಲೋ ಮೀಟರ್ ದೂರವನ್ನು 45 ಗಂಟೆಗಳಲ್ಲಿ ಆಂಬುಲೆನ್ಸ್​ನಲ್ಲಿ ತಲುಪಿ, ರೋಗಿಯೊಬ್ಬನ ಜೀವ ಉಳಿಸಿರುವ ಘಟನೆ ಇದಾಗಿದೆ! ಮೊಹಮ್ಮದ್​ ಹಸನ್ ಎಂಬ ಯುವಕನ ಪ್ರಾಣ ಕಾಪಾಡಿರುವ ಅಪರೂಪದ ಘಟನೆ ಇದು.
ಆಗಿದ್ದೇನು?ಮೊಹಮ್ಮದ್​ ಹಸನ್​ ಉತ್ತರ ಪ್ರದೇಶದ ಮುರಾದಾಬಾದ್ ನಿವಾಸಿ. ಇವರು ಮಂಗಳೂರಿನಿಂದ 30 ಕಿ.ಮೀ. ದೂರವಿರುವ ಮೂಡಬಿದಿರೆಯಲ್ಲಿ ಅಡಿಕೆ ಗೋಡೊನಿನಲ್ಲಿ ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ಬಿದ್ದು ಈತ ಗಂಭೀರವಾಗಿ ಗಾಯಗೊಂಡರು.
ಆರಂಭದಲ್ಲಿ ಇವರಿಗೆ ಮಂಗಳೂರಿನ ಆಳ್ವಾಸ್ ಹೆಲ್ತ್ ಸೆಂಟರ್​​ನಲ್ಲಿ ಚಿಕಿತ್ಸೆ ನೀಡಲಾಯಿತು. ಅಗಸ್ಟ್ 25ರಿಂದ ಕಳೆದ 9ರವರೆಗೆ ಇವರಿಗೆ ಆಳ್ವಾಸ್ ಹೆಲ್ತ್ ಸೆಂಟರ್​​ನಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವುದಾಗಿ ಮನೆಯವರು ಕೇಳಿಕೊಂಡಾಗ ಇನ್ನೂ ಸಂಪೂರ್ಣ ಚೇತರಿಸಿಕೊಂಡಿರದ ಹಿನ್ನೆಲೆಯಲ್ಲಿ ವಿಮಾನದ ಮೂಲಕ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿತ್ತು. ಹೋಗುವಾಗ ಆಕ್ಸಿಜನ್ ಸಿಲೆಂಡರ್ ಸೌಲಭ್ಯ ಕಲ್ಪಿಸುವುದು ಅನಿವಾರ್ಯವಾಗಿತ್ತು.
ವಿಮಾನದಲ್ಲಿ ಪ್ರಯಾಣದ ಬಗ್ಗೆ ವಿಚಾರಿಸಿದಾಗ ಮಂಗಳೂರಿನಲ್ಲಿ ಮೊದಲೇ ಎಲ್ಲಾ ಟಿಕೆಟ್ ಬುಕ್ ಆಗಿದ್ದವು. ಆದ್ದರಿಂದ ವಿಮಾನದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ನಂತರ ಖಾಸಗಿ ವಿಮಾನದಲ್ಲಿ ವಿಚಾರಿಸಿದಾಗ ಇದಕ್ಕೆ ಅವರಿಗೆ ಅನುಮತಿ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಮೂಲಕ ಕರೆದೊಯ್ಯಲು ನಿರ್ಧರಿಸಿದರು ಮೊಹಮ್ಮದ್​ ಹಸನ್​ ಕುಟುಂಬಸ್ಥರು. ಆದರೆ ಇದು ತುಂಬಾ ಅಪಾಯಕಾರಿ ಕೆಲಸ ಎಂದು ವೈದ್ಯರು ನಿರಾಕರಿಸಿದರು.
ಆದರೆ ಯಾವುದೇ ಅಪಾಯ ಎದುರಿಸಲು ತಾವು ಸಿದ್ಧ ಎಂದು ಹೇಳಿದ ಕುಟುಂಬಸ್ಥರು ಆಂಬುಲೆನ್ಸ್​ ವ್ಯವಸ್ಥೆ ಮಾಡಿಸಿದರು.
ಸುಜುಕಿ ಇಕೊ ಆಂಬುಲೆನ್ಸ್​ ಚಾಲಕರಾದ ಅನಿಲ್ ರುಬೇನ್ ಮೆಂಡೊನ್ಸಾ ಹಾಗೂ ಅಶ್ವತ್ ಮೂಡಬಿದ್ರೆ ಇದಕ್ಕೆ ಸಮ್ಮತಿಸಿದರು. ಮೂಡಬಿದಿರೆಯಿಂದ ಉತ್ತರ ಪ್ರದೇಶದ ಮುರಾದಾಬಾದ್​ಗೆ ಸುಮಾರು 2700 ಕಿಲೋ ಮೀಟರ್. ಈ ದೂರವನ್ನು 45 ಗಂಟೆಗಳಲ್ಲಿ ಕ್ರಮಿಸಿ ಆಂಬುಲೆನ್ಸ್​ ಚಾಲಕರು ಸುರಕ್ಷಿತವಾಗಿ ತಲುಪಿಸಿದ್ದಾರೆ. ಮೊಹಮ್ಮದ್​ಹಸನ್​ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಆಂಬುಲೆನ್ಸ್​ ಚಾಲಕರಿಗೆ ಹಸನ್​ ತಂದೆ ಧನ್ಯವಾದ ಸಲ್ಲಿಸಿದ್ದಾರೆ.(ಏಜೆನ್ಸೀಸ್​)
ಕಾಮುಕರ ಮನೆಗಳ ಮೇಲೆ ಬುಲ್ಡೋಜರ್​ ಪ್ರಹಾರ! ಗ್ಯಾಂಗ್​ ರೇಪಿಸ್ಟ್​ಗಳಿಗೆ ಹೀಗೊಂದು ಪಾಠ
ಪ್ರೀತಿಸುತ್ತಿದ್ದ ಹುಡುಗನನ್ನೇ ಮುಗಿಸಿದ ಭಾವಿ ಪತ್ನಿ! ಮದುವೆಯ ತಯಾರಿಯಲ್ಲಿರುವಾಗಲೇ ಘೋರ ಕೃತ್ಯ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 + 15 =
Remember me
